ಬೆಟಗೇರಿ ಪ್ರೌಢ ಶಾಲೆಯಲ್ಲಿ ನೂತನ ಶಾಲಾ ಕೊಠಡಿಗಳಿಗೆ ಭೂಮಿಪೂಜೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನ.12ರಂದು ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು.
ಬೆಳಗಾವಿ ಜಿಲ್ಲಾ ಪಂಚಾಯತ, ಚಿಕ್ಕೋಡಿ ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗ ಹಾಗೂ ಗೋಕಾಕ ಸಹಾಯಕ ಕಾರ್ಯಕಾರಿ ಅಭಿಯಂತರರು ಪಂಚಾಯತ ರಾಜ್ ಇಂಜನೀಯರಿಂಗ್ ಉಪವಿಭಾಗದ ಸಹಯೋಗದಲ್ಲಿ ಸನ್2022-23ನೇ ಸಾಲಿನ ಕೇಂದ್ರ ಯೋಜನಾ ಅನುಮೋದನಾ ಮಂಡಳಿ(ಪಿಎಬಿ)ವಾರ್ಷಿಕ ಕ್ರೀಯಾ ಯೋಜನೆಯಡಿಯ ಸುಮಾರು 67 ಲಕ್ಷ ರೂ.ಗಳ ಅನುದಾನದಡಿಯಲ್ಲಿ ನೂತನ 4 ಶಾಲಾ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದು ಈ ವೇಳೆ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ.
ಸ್ಥಳೀಯ ವೇದಮೂರ್ತಿ ವಿಜಯ ಸಂಗಯ್ಯ ಹಿರೇಮಠ ಭೂಮಿ ಪೂಜೆ ನೆರವೇರಿಸಿದರು. ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ರಮೇಶ ನೀಲಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಲಕ್ಷ್ಮಣ ಚಂದರಗಿ, ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ ಮುಖ್ಯಅತಿಥಿಗಳಾಗಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಗುತ್ತಿಗೆದಾರ ವಿಠಲ ಕೌಜಲಗಿ, ಪಿಡಿಒ ಎಚ್.ಎನ್.ಬಾವಿಕಟ್ಟಿ, ಬಸವರಾಜ ದಂಡಿನ, ಈಶ್ವರ ಮುಧೋಳ, ಅಶೋಕ ಕೋಣಿ, ಸುಭಾಷ ಕರೆಣ್ಣವರ, ಲಕ್ಷ್ಮಣ ಸೋಮಗೌಡ್ರ, ಈರಣ್ಣ ಬಳಿಗಾರ, ಸದಾಶಿವ ಕುರಿ, ಹನುಮಂತ ವಗ್ಗರ, ಹಜರತ್ ಮಿರ್ಜಾನಾಯ್ಕ, ರಾಮಣ್ಣ ಕತ್ತಿ, ಬಸನಪ್ಪ ದೇಯಣ್ಣವರ, ಗುರುನಾಥ ಮಾಕಾಳಿ, ಅಪ್ಪಯ್ಯ ಆಶೆಪ್ಪಗೋಳ, ಪ್ರಕಾಶ ಗುಡದಾರ, ಶಾಲೆಯ ಎಸ್‍ಡಿಎಮ್‍ಸಿ ಸದಸ್ಯರು, ಶಿಕ್ಷಕರು, ಶಿಕ್ಷಣಪ್ರೇಮಿಗಳು, ಸ್ಥಳೀಯರು ಇದ್ದರು.