Breaking News
Home / ಬೆಳಗಾವಿ / ಬೆಟಗೇರಿ ಸುತ್ತಮುತ್ತ ಹಲವು ಗಂಟೆಗಳ ಕಾಲಮಂಜು ಕವಿದ ವಾತಾವರಣ

ಬೆಟಗೇರಿ ಸುತ್ತಮುತ್ತ ಹಲವು ಗಂಟೆಗಳ ಕಾಲಮಂಜು ಕವಿದ ವಾತಾವರಣ

Spread the love

ವರದಿ:ಅಡಿವೇಶ ಮುಧೋಳ.   ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಶನಿವಾರ ಡಿ.21ರಂದು ಬೆಳಗ್ಗೆ ಸುಮಾರು ನಾಲ್ಕೈದು ಗಂಟೆಗಳ ಕಾಲ ರಸ್ತೆಯ ಅಕ್ಕ-ಪಕ್ಕ, ಎದುರುಗಡೆ ಬರುವ ವಾಹನ, ಪಾದಚಾರಿಗಳು ಕಾಣದ ಹಾಗೇ ಹೊಗೆ ಮಿಶ್ರಿತ ನೀರು ಮಂಜು ಬಿದಿದ್ದದರಿಂದ ವಾಹನ ಸವಾರರಿಗೆ ಮತ್ತು ಇಲ್ಲಿಯ ರೈತರಿಗೆ ಆತಂಕ ಎದುರಾಗಿದೆ.

ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಶನಿವಾರ ಡಿ.21ರಂದು ಬೆಳಗ್ಗೆ 5.30 ಗಂಟೆಯಿಂದ 10 ಗಂಟೆವರೆಗೆ ಹೊಗೆ ಮಿಶ್ರಿತ ನೀರು ಮಂಜು ಭಾರಿ ಪ್ರಮಾಣದಲ್ಲಿ ಬಿದ್ದಿದ್ದರಿಂದ ಇಲ್ಲಿಯ ಮುಖ್ಯ ರಸ್ತೆಗಳ ಮೇಲೆ ಸಂಚರಿಸುವ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನ ಚಾಲಕರು ಮುಂದೆ ಸಾಗಲು ದಾರಿ ಕಾಣದೇ ಹರಸಾಹಸ ಮಾಡುವಂತಾಗಿತ್ತು. ಒಂದಡೆ ಇಲ್ಲಿಯ ರಸ್ತೆಗಳ ಮೇಲೆ ವಾಹನ ಸವಾರರು ಜೀವಭಯದಲ್ಲಿ ಓಡಾಡುವ ದುಸ್ಥಿತಿ ಎದುರಾದರೆ, ಇನ್ನೂಂದಡೆ ಮಂಜು ಆವರಿಸುತ್ತಿವುದರಿಂದ ಗೋಧಿ, ಸದಕ, ಕಡಲೆ ಸೇರಿದಂತೆ ಹೂವು ಬಿಟ್ಟಿರುವ-ಬಿಡುತ್ತಿರುವ ಕೆಲವು ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕದ ಪರಿಸ್ಥಿತಿ ಸ್ಥಳೀಯ ರೈತರನ್ನು ಚಿಂತಿತರನ್ನಾಗಿಸಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಒಂದಿಲ್ಲೊಂದು ಪ್ರಕೃತಿ ವಿಕೂಪಕ್ಕೆ ರೈತರು ತುತ್ತಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಹೊಗೆ ಅಥವಾ ನೀರಿನ ಮಂಜು ನಿತ್ಯ ಹೀಗೆಯೇ ಬೀಳುವುದರಿಂದ ಗೋಧಿ, ಸದಕ, ಕಡಲೆ ಮತ್ತು ಮಾವು ಸೇರಿದಂತೆ ತೋಟಗಾರಿಕೆ ಕೆಲವು ಬೆಳೆಗಳ ಹೂವು ಕಾಯಿ ಹಿಡಿಯದೇ ಕತ್ತರಿಸಿ ನೆಲಕ್ಕೆ ಬಿದ್ದು ಬೆಳೆಗಳು ಪೂರ್ಣ ಹಾಳಾಗುತ್ತವೆ. ಸಮೀಪದ ಕೌಜಲಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಇಲ್ಲವೇ ಸಹಾಯಕ ಕೃಷಿ ಅಧಿಕಾರಿಗಳುಬೆಳೆಗಳು ನಾಶವಾಗುವ ಮುನ್ನ ಅನುಸರಿಸಬೇಕಾದ ಕೆಲವು ಮುಂಜಾಗ್ರತ ಕ್ರಮಗಳ ಕುರಿತು ಇಲ್ಲಿಯ ರೈತರಿಗೆ ಮಾಹಿತಿ ನೀಡಬೇಕು ಅಂಬುವುದು ಸ್ಥಳೀಯ ರೈತರ ಒತ್ತಾಯವಾಗಿದೆ.


Spread the love

About inmudalgi

Check Also

ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಬಸವ ರಂಗಮಂಟಪದಲ್ಲಿ ಜರುಗಿದ 31ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ

Spread the love ಮೂಡಲಗಿ: ‘ಅಯ್ಯಪ್ಪಸ್ವಾಮಿ ಮಾಲಧಾರಿಗಳ ಕಠಿಣ ವ್ರತವು ತಪಸ್ಸು ಇದ್ದಂತೆ. ದೇವರ ಮೇಲಿರುವ ಭಕ್ತಿಯಿಂದ ಶಾಂತಿ, ನೆಮ್ಮದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ