ಬೆಟಗೇರಿ ವಿಪಿಜಿಕೆಎಸ್ ಸಂಘದ ನೂತನ ಸದಸ್ಯ ರಮೇಶ ಮುಧೋಳಗೆ ಸನ್ಮಾನ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನೂತನ ಸದಸ್ಯರಾಗಿ ಆಯ್ಕೆಗೊಂಡ ಕಲ್ಲೋಳಿ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಬೆಟಗೇರಿ ಶಾಖೆಯ ಸಲಹಾ ಸಮಿತಿ ಸದಸ್ಯ ರಮೇಶ ದುಂಡಪ್ಪ ಮುಧೋಳ ಅವರನ್ನು ಕಲ್ಲೋಳಿ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಬೆಟಗೇರಿ ಶಾಖೆಯ ವತಿಯಿಂದ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಅವರು ಸನ್ಮಾನಿಸಿದರು.
ಇಲ್ಲಿಯ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಈರಪ್ಪ ದೇಯಣ್ಣವರ, ಪರಪ್ಪ ಗಿರೇಣ್ಣವರ, ನಿಂಗಪ್ಪ ನೀಲಣ್ಣವರ, ಮಾಯಪ್ಪ ಬಾಣಸಿ, ಅಜ್ಜಪ್ಪ ಪೇದನ್ನವರ, ವಿಠಲ ಕೋಣಿ, ಬಸವರಾಜ ಇಟ್ನಾಳ, ಬಸಪ್ಪ ಗೌಡರ, ಹನುಮಂತ ಸವತಿಕಾಯಿ, ರಮೇಶ ಬ್ಯಾಗಿ, ಗಂಗಯ್ಯ ಮಠದ, ಸ್ಥಳೀಯ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿ, ಶಾಖೆಯ ಸಲಹಾ ಸಮಿತಿ ಸದಸ್ಯರು, ಇತರರು ಇದ್ದರು.