Breaking News
Home / ಬೆಳಗಾವಿ / ಎಲ್ಲ ದಾನಗಳಲ್ಲಿ ಶ್ರೇಷವಾದದು ನೇತ್ರದಾನ : ಅಭಿನವ ಶಿವಾನಂದ ಮಹಾಸ್ವಾಮೀಜಿ

ಎಲ್ಲ ದಾನಗಳಲ್ಲಿ ಶ್ರೇಷವಾದದು ನೇತ್ರದಾನ : ಅಭಿನವ ಶಿವಾನಂದ ಮಹಾಸ್ವಾಮೀಜಿ

Spread the love

ಎಲ್ಲ ದಾನಗಳಲ್ಲಿ ಶ್ರೇಷವಾದದು ನೇತ್ರದಾನ : ಅಭಿನವ ಶಿವಾನಂದ ಮಹಾಸ್ವಾಮೀಜಿ

ಬೆಟಗೇರಿ:ಮನುಷ್ಯನಿಗೆ ಕಣ್ಣು ಅತ್ಯಂತ ಮಹತ್ವಪೂರ್ಣವಾಗಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಬಡ ಬಗ್ಗರಿಗೆ, ಮಧ್ಯಮ ವರ್ಗದವರಿಗೂ ಉಚಿತ ಕಣ್ಣಿನ ಪೂರೆ ತಪಾಸಣಾ ಶಿಬಿರ ಅನುಕೂಲಕರವಾಗಿದೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜ.5 ರಂದು ನಡೆದ ಉಚಿತ ಕಣ್ಣಿನ ಪೂರೆ ತಪಾಸಣಾ ಬೃಹತ್ ಶಿಬಿರದ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲ ದಾನಗಳಲ್ಲಿ ನೇತ್ರದಾನ ಶ್ರೇಷ್ಠವಾಗಿದೆ. ಗೋಕಾಕ ಲಾಯನ್ಸ್ ಕ್ಲಬ್ ಮತ್ತು ಸ್ಥಳೀಯ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆ ಮಾಡಿದ ಈ ಕಾರ್ಯ ಶ್ಲಾಘಃನೀಯವಾಗಿದೆ ಎಂದರು.
ಗೋಕಾಕ ಲಾಯನ್ಸ್ ಕ್ಲಬ್, ಗೋಕಾಕ ತಾಲೂಕಿನ ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗ್ರಾಮ ಪಂಚಾಯತಿ, ಗಜಾನನ ಯುವಕ ಮಂಡಳ, ರಕ್ಷಣಾ ವೇದಿಕೆ, ಗೋಕಾಕ ತಾಲೂಕಾ ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೂರೆ ತಪಾಸಣಾ ಬೃಹತ್ ಶಿಬಿರ ನಡೆಯಿತು.
ಬೆಟಗೇರಿ ಹಾಗೂ ಸುತ್ತಲಿನ ಹತ್ತೂರಿನ ಸುಮಾರು 250ಕ್ಕೂ ಹೆಚ್ಚು ಜನ ರೋಗಿಗಳ ನೇತ್ರ ತಪಾಸನೆ ಬಳಿಕ 53 ಜನ ರೋಗಿಗಳನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ನಂದಾದೀಪ ನೇತ್ರ ಆಸ್ಪತ್ರೆಗೆ ಉಚಿತ ಕಣ್ಣಿನ ಪೂರೆ ಚಿಕಿತ್ಸೆಗೆ ಕಳುಹಿಸಲಾಯಿತು ಎಂದು ಗೋಕಾಕ ಲಾಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ ಲಗಮಪ್ಪಗೋಳ ತಿಳಿಸಿದ್ದಾರೆ.
ಗೋಕಾಕ ಲಾಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ ಲಗಮಪ್ಪಗೋಳ, ಸುರೇಶ ಶಿಂದಿಹಟ್ಟಿ, ಅಶೋಕ ಪಾಟೀಲ, ಎಚ್.ಬಿ.ಪಾಟೀಲ, ಜಿ.ಎಸ್.ಸಿದ್ಧಾಪೂರಮಠ, ಮಹೇಂದ್ರ ಪೋರವಾಲ, ಯಲ್ಲಾಲಿಂಗ ದೇಯಣ್ಣವರ, ಬಸವರಾಜ ದೇಯಣ್ಣವರ, ಈರಣ್ಣ ಬಳಿಗಾರ, ಡಾ.ಸರಸ್ವತಿ ತಂಬಾಕೆ, ಉದಯಕುಮಾರ ಆಲಾಸೆ, ಡಾ.ಹುಂಡೆಕರ, ಶಂಕರ ದೊಡ್ಡಮನಿ, ಶ್ರೀಶೈಲ ಹಂಜಿ, ಅಶೋಕ ಪಾಟೀಲ, ಕೃಷ್ಣಶರ್ಮ ಪಾಟೀಲ, ಅಶೋಕ ದೇಯಣ್ಣವರ, ಲಕ್ಕಪ್ಪ ಚಂದರಗಿ, ಪರಶುರಾಮ ಗೊಲ್ಲರ, ವಿಠಲ ಭಂಗಿ, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ನೇತ್ರ ತಪಾಸಣೆಗೆ ಒಳಗಾದ ರೋಗಿಗಳು, ಮತ್ತೀತರರು ಇದ್ದರು.


Spread the love

About inmudalgi

Check Also

*ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ*

Spread the love*ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ* ಬೆಂಗಳೂರು: ದುಬೈನಲ್ಲಿ ನಡೆದ ಭಾರತ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ