ಬಸವ ಪಿರಮಿಡ್ ಹಿಲ್ಸ್ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಚಾಪು ಮೂಡಿಸಲಿದೆ:ಗಜಾನನ ಮನ್ನಿಕೇರಿ
ಬೆಟಗೇರಿ: ಗೋಕಾಕ ಮನಸಾಕ್ಷಿ ಫೌಂಡೇಶನ್ ಹಾಗೂ ಬಗರನಾಳ ಬಸವ ಪಿರಮಿಡ್ ಹಿಲ್ಸ್ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸಿ ಸತ್ಕರಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ಗೋಕಾಕ ತಾಲೂಕಿನ ಬಗರನಾಳ ಗ್ರಾಮದಲ್ಲಿ ಗೋಕಾಕ ಮನಸಾಕ್ಷಿ ಫೌಂಡೇಶನ್ ಹಾಗೂ ಬಗರನಾಳ ಬಸವ ಪಿರಮಿಡ್ ಹಿಲ್ಸ್ ಅವರ ಸಹಯೋಗದಲ್ಲಿ ಇತ್ತೀಚೆಗೆ ಹೊಸ ವರ್ಷದ ಪ್ರಯುಕ್ತ ನಡೆದ ವಿವಿಧ ವಲಯದ ಸಾಧಕರ ಸತ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಗೋಕಾಕ ನಗರ, ಬೆಟಗೇರಿ ಮತ್ತು ಕೌಜಲಗಿ ಹಾಗೂ ಬಗರನಾಳ ಸೇರಿದಂತೆ ಸುತ್ತಲಿನ ಹತ್ತೂರಿನಲ್ಲಿ ಬಗರನಾಳ ಬಸವ ಪಿರಮಿಡ್ ಹಿಲ್ಸ್ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಚಾಪು ಮೂಡಿಸಲಿದೆ. ಬಗರನಾಳ ಬಸವ ಪಿರಮಿಡ್ ಹಿಲ್ಸ್‍ಗೆ ಭೇಟಿ ನೀಡಿದವÀರ ಸಂಕಲ್ಪ ಇಡೇರಲಿದೆ ಎಂದರು.
ಗೋಕಾಕ ಮನಸಾಕ್ಷಿ ಫೌಂಡೇಶನ್ ಹಾಗೂ ಬಗರನಾಳ ಬಸವ ಪಿರಮಿಡ್ ಹಿಲ್ಸ್ ಸಂಸ್ಥೆಗಳ ಅಧ್ಯಕ್ಷ ಮಲ್ಲಿಕಾರ್ಜುನ ಕರಜಗಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಭಯ ಸಂಸ್ಥೆಗಳ ಸಹಯೋಗದಲ್ಲಿ ಆಧ್ಯಾತ್ಮೀಕ ವಲಯದ ಆಸಕ್ತರಿಗೆ ಸಹಕಾರ ನೀಡಲಿದೆ. ಬಗರನಾಳ ಬಸವ ಪಿರಮಿಡ್ ಹಿಲ್ಸ್ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ಕೇಲವೆ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ, ನಿವೃತ್ತ ಸೈನಿಕ ಮಲ್ಲಪ್ಪ ಕಂಕಣವಾಡಿ, ಕಲ್ಲೋಳಿ ಪಟ್ಟಣದ ಡಾ.ತುಕಾರಾಮ ಉಮರಾಣಿ, ಟ್ಯಾಕ್ವಾಂಡೋ ತರಬೇತಿದಾರ ಅಮೃತ ಕದ್ದು, ಪ್ರಗತಿ ಪರ ರೈತ ರಾಮಯ್ಯ ವಿಭೂತಿ ಅವರನ್ನು ಗೋಕಾಕ ಮನಸಾಕ್ಷಿ ಫೌಂಡೇಶನ್ ಹಾಗೂ ಬಗರನಾಳ ಬಸವ ಪಿರಮಿಡ್ ಹಿಲ್ಸ್ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಕರಜಗಿಮಠ ಅವರು ಸತ್ಕರಿಸಿದರು.
ಬಸವಣೆಪ್ಪ ಉಳ್ಳಾಗಡ್ಡಿ, ಮಹಾಂತೇಶ ಬೆನ್ನಾಡಿ, ಗೋಪಾಲ ಪಾಟೀಲ, ಸುಭಾಷ ಮುಗಳಖೋಡ, ಹುಚ್ಚೇಶ ಮುರನಾಳ, ಶಂಕರ ಯಮಕನಮರಡಿ ಸೇರಿದಂತೆ ಗೋಕಾಕ, ಬಗರನಾಳ ಹಾಗೂ ಸುತ್ತಲಿನ ಹತ್ತೂರಿನ ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಮತ್ತೀತರರು ಇದ್ದರು. ಸಂಗಿತಾ ಗೌಡರ ಕಾರ್ಯಕ್ರಮ ನಿರೂಪಿಸಿದರು. ಉದಯ ಕರಜಗಿಮಠ ಮೊದಲಿಗೆ ಸ್ವಾಗತಿಸಿ, ಕೊನೆಗೆ ವಂದಿಸಿದರು.