Breaking News
Home / ಬೆಳಗಾವಿ / ಪ್ರತಿಯೊಬ್ಬರೂ ಕನ್ನಡ ನಾಡು, ನುಡಿ ಬೆಳಿಸೋಣ : ಬಸವರಾಜ ಖಾನಪ್ಪನವರ

ಪ್ರತಿಯೊಬ್ಬರೂ ಕನ್ನಡ ನಾಡು, ನುಡಿ ಬೆಳಿಸೋಣ : ಬಸವರಾಜ ಖಾನಪ್ಪನವರ

Spread the love

ಪ್ರತಿಯೊಬ್ಬರೂ ಕನ್ನಡ ನಾಡು, ನುಡಿ ಬೆಳಿಸೋಣ : ಬಸವರಾಜ ಖಾನಪ್ಪನವರ

ಬೆಟಗೇರಿ:ಇಂದು ನಾಡಿನ ಕಲೆ, ಸಂಸ್ಕøತಿ, ಸಂಪ್ರದಾಯ ಉಳಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಕನ್ನಡ ನಾಡು ಕಟ್ಟೋಣ, ಕನ್ನಡ ಭಾಷೆ ಬೆಳೆಸೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಸಹಯೋಗದಲ್ಲಿ ನಾನು ಕರವೇ ಕಾರ್ಯಕರ್ತ ಸದಸ್ಯತ್ವ ಅಭಿಯಾನ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಾನು ಕರವೇ ಕಾರ್ಯಕರ್ತ ಸದಸ್ಯತ್ವ ಅಭಿಯಾನದ ಕರಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಕಾಕ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಘಟಕದ ಕರವೇ ಸಂಘಟನೆ ಸ್ಥಾಪಿಸಿ, ಎಲ್ಲರೂ ಈ ಕರವೇ ಸಂಘಟನೆಗೆ ಸೇರಿ ಕನ್ನಡ ಪರ ಹೋರಾಟಗಾರರಾಗಿ ಕನ್ನಡ ನಾಡು, ನುಡಿ ಬೆಳಿಸೋಣ ಎಂದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಉಪಾಧ್ಯಕ್ಷ ದೀಪಕ ಹಂಜಿ, ಸಂಚಾಲಕ ಮಲ್ಲಪ್ಪ ಸಂಪಗಾಂವ, ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ, ರಾಮಣ್ಣ ಮಾಳೇದ, ಈರಪ್ಪ ಕನೋಜಿ, ನಾಗಪ್ಪ ಹಿಡಕಲ, ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಸದಸ್ಯರು, ಸ್ಥಳೀಯ ಕನ್ನಡ ಪರ ಅಭಿಮಾನಿ ಬಳಗದ ಸದಸ್ಯರು, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ