*ಗೋಕಾಕದ ಶ್ರೀ ಸತ್ಯಸಾಯಿ ಬಾಬಾರವರ ೧೪ ನೇ ಆರಾಧನಾ ಮಹೋತ್ಸವ*
ಗೋಕಾಕ:ನಗರದ ಶಿರಡಿ ಬಾಬಾ ಮಂದಿರದಲ್ಲಿ ನಿಂಗಾಪೂರ ಶ್ರೀ ಸಾಯಿನಿತ್ಯೋತ್ಸವ ಟ್ರಸ್ಟ ವತಿಯಿಂದ ಗುರುವಾರ ಏ-24 ರಂದು ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ೧೪ ನೇ ಆರಾಧನಾ ಮಹೋತ್ಸವದ ಅಂಗವಾಗಿ ಅನ್ನ ಪ್ರಸಾದ ವಿತರಿಸುವ ಮೂಲಕ ನಾರಾಯಣ ಸೇವೆ ನಡೆಯಿತು.
ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಉಣ್ಣಿ ಅಧ್ಯಕ್ಷತೆ ವಹಿಸಿದ್ದರು, ಸಾಯಿನಿತ್ಯೋತ್ಸವ ಲೋಕಸೇವಾ ಟ್ರಸ್ಟಿನ ಅಧ್ಯಕ್ಷ ಆರ್ ಆರ್ ನಾಡಗೌಡರ, ಉಪಾಧ್ಯಕ್ಷ ದುಂಡಪ್ಪ ಬೀರಗೌಡ್ರ,ಕಾರ್ಯದರ್ಶಿ ಸಚಿನ್ ಬಾಗೋಜಿ ಟ್ರಸ್ಟಿನ ಸದಸ್ಯರಾದ ರಮೇಶ ಬಿ ಎಲ್, ಭೀಮಶಿ ಹುಲಕುಂದ, ರಾಘವೇಂದ್ರ ಕೆ, ವಿನಾಯಕ ಪರವಿನಾಯ್ಕರ,ನಾಮದೇವ ಉಮರಾಣಿ, ಈರಣ್ಣ ಬೆಳವಿ, ಪ್ರಸಾದ ಕಲಾಲ್, ಸಮೃದ್ಧ ಗಿರೆಣ್ಣವರ ಸೇರಿದಂತೆ ನೂರಾರು ಸಾಯಿಭಕ್ತರು ಪ್ರಸಾದ ಸ್ವೀಕರಿಸಿದರು.