Breaking News
Home / ಬೆಳಗಾವಿ / ಮೇ.2ರಿಂದ ಗೋಸಬಾಳ ಮಾರುತಿ ದೇವರ ಓಕುಳಿ

ಮೇ.2ರಿಂದ ಗೋಸಬಾಳ ಮಾರುತಿ ದೇವರ ಓಕುಳಿ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಶ್ರೀ ಮಾರುತಿ ದೇವರ ಓಕುಳಿ ಇದೇ ಶನಿವಾರ ಮೇ.2ರಿಂದ ಸೋಮವಾರ ಮೇ.4 ರವರೆಗೆ ಜರುಗಲಿದೆ.

ಮೇ.3 ರಂದು ಮುಂಜಾನೆ 7ಗಂ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ಮತ್ತು ಕುಂಕುಮ ಪೂಜೆ ಕಾರ್ಯಕ್ರಮ ನಡೆದ ಬಳಿಕ ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡ ಪೂಜೆ ನಡೆಯಲಿದೆ. ರವಿವಾರ ಮೇ.4ರಂದು ಮುಂಜಾನೆ 7ಗಂ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ನಂತರ ಸಾಯಂಕಾಲ 5 ಗಂಟೆಗೆ ನಡು ಓಕುಳಿ ಜರುಗಲಿದೆ.
ಸೋಮವಾರ ಮೇ.5ರಂದು ಮುಂಜಾನೆ 6ಗಂ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ನಡೆದ ನಂತg ಪುರಜನರಿಂದ ಪೂಜೆ-ಪುನಸ್ಕಾರ, ನೈವೈದ್ಯ ಅರ್ಪಣೆ ನಡೆಯಲಿದ್ದು, ವಿವಿಧ ಗ್ರಾಮಗಳಿಂದ ವಿವಿಧ ದೇವರ ಪಲ್ಲಕ್ಕಿಗಳ ಆಗಮನ, ಸಾಯಂಕಾಲ 5 ಗಂಟೆಗೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ದೇವರುಗಳ ಓಕಳಿ ಕೊಂಡಕ್ಕೆ ಪಲ್ಲಕ್ಕಿ ಪ್ರದಕ್ಷೀಣೆ ನಡೆದ ಬಳಿಕ ಕಡೆ ಓಕಳಿ ಜರುಗಲಿದೆ. ಸಂಜೆ 8 ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ.
ಅದೇ ದಿನ ರಾತ್ರಿ 10-30 ಕ್ಕೆ ಸುಣಧೋಳಿಯ ಜಡಿಸಿದ್ಧೇಶ್ವರ ನಾಟ್ಯ ಸಂಘದವರಿಂದ ಅರವತ್ತು ಹಳ್ಳಿಯ ಅರಸ ಎಂಬ ಸುಂದರ ಸಾಮಾಜಿಕ ನಾಟಕ ಜರುಗಲಿದೆ ಎಂದು ಇಲ್ಲಿಯ ಶ್ರೀ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.


Spread the love

About inmudalgi

Check Also

‘ಬಸವೇಶ್ವರ ಕೋ.ಅಪ್ ಕ್ರೆಡಿಟ್ ಸೊಸೈಟಿಗೆ ರೂ.5.05 ಕೋಟಿ ಲಾಭ’- ಮಲ್ಲಿಕಾರ್ಜುನ ಢವಳೇಶ್ವರ

Spread the loveಮೂಡಲಗಿ: ‘ಮೂಡಲಗಿಯ ಬಸವೇಶ್ವರ ಅರ್ಬನ್ ಕೋ.ಅಪ್ ಕ್ರೆಡಿಟ್ ಸೊಸಾಯಿಟಿಯು 2024-25 ಆರ್ಥಿಕ ವರ್ಷದ ಕೊನೆಯಲ್ಲಿ ರೂ.5.05 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ