ಬೆಟಗೇರಿ:ಗ್ರಾಮ ಪಂಚಾಯತಿ ಸಹಯೋಗದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಸುಮಾರು 3.25 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಸ್ಥಳೀಯ ಬಸವ ನಗರ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಭೂಮಿ ಪೂಜೆ ಕಾರ್ಯಕ್ರಮ ಶನಿವಾರ ಸೆ.4ರಂದು ನಡೆಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಶಾಲೆಯ ಶಿಕ್ಷಕ ಬಿ.ಎ.ಉಪ್ಪಾರಟ್ಟಿ ಅವರು, ಶಾಲೆಯ ಸಮಗ್ರ ಅಭಿವೃದ್ಧಿಗೆ ಸಹಾಯ, ಸಹಕಾರ ನೀಡುತ್ತಿರುವ ಇಲ್ಲಿಯ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಸ್ಥಳೀಯರ ಶೈಕ್ಷಣಿಕ ಶ್ಲಾಘನೀಯ ಸೇವಾ ಕಾರ್ಯದ ಕುರಿತು ಹೇಳಿದರು.
ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಈಶ್ವರ ಮುಧೋಳ, ಅಶೋಕ ಕೋಣಿ, ಈರಣ್ಣ ಬಳಿಗಾರ, ಸುಭಾಷ ಜಂಬಗಿ, ಸುರೇಶ ವಡೇರ, ನೀಲಪ್ಪ ಪಾರ್ವತೇರ, ಅಜ್ಜಪ್ಪ ಪೇದನ್ನವರ, ಬಸವರಾಜ ದೇಯಣ್ಣವರ, ಅಡಿವೆಪ್ಪ ಕತ್ತಿ, ಶಿವಬಸು ಬಾಣಸಿ, ಅಪ್ಪಣ್ಣ ಆಶೆಪ್ಪಗೋಳ, ಯಲ್ಲಪ್ಪ ಬಾಣಸಿ, ತುಕಾರಾಮ ಕುರಿ, ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗ, ಶಾಲೆಯ ಶಿಕ್ಷಕರು, ಗ್ರಾಮಸ್ಥರು ಇದ್ದರು.