Breaking News
Home / Recent Posts / 112 ಸಂಖ್ಯೆ ಸಹಾಯವಾಣಿ ವಾಹನ ಕೆಲವೇ ನಿಮಿಷದಲ್ಲಿ ನಿಮ್ಮ ಬಳಿಗೆ ಬರಲಿದೆ – ಎಎಸ್‍ಐ ಐ.ಎಮ್.ಬೇಪಾರಿ

112 ಸಂಖ್ಯೆ ಸಹಾಯವಾಣಿ ವಾಹನ ಕೆಲವೇ ನಿಮಿಷದಲ್ಲಿ ನಿಮ್ಮ ಬಳಿಗೆ ಬರಲಿದೆ – ಎಎಸ್‍ಐ ಐ.ಎಮ್.ಬೇಪಾರಿ

Spread the love

ಬೆಟಗೇರಿ:ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹೊಸದಾಗಿ ಜಾರಿಗೆ ತಂದಿರುವ ತುರ್ತು ಕರೆ ಸಂಖ್ಯೆ 112ಕ್ಕೆ ಕರೆ ಮಾಡಿದರೆ, 112 ಸಂಖ್ಯೆ ಸಹಾಯವಾಣಿ ವಾಹನ ಕೆಲವೇ ನಿಮಿಷದಲ್ಲಿ ನಿಮ್ಮ ಬಳಿಗೆ ಬರಲಿದೆ ಎಂದು ಕುಲಗೋಡ ಪೊಲೀಸ್ ಠಾಣೆ ಎಎಸ್‍ಐ ಐ.ಎಮ್.ಬೇಪಾರಿ ಹೇಳಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ಮತ್ತು ಮೂಡಲಗಿ ಪೊಲೀಸ್ ಠಾಣೆ ಹಾಗೂ ಕುಲಗೋಡ ಪೊಲೀಸ್ ಠಾಣೆ ಸಹಯೋಗದಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶುಕ್ರವಾರ ಜ.29 ರಂದು ಹಮ್ಮಿಕೊಂಡ ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ-112ರ ಕುರಿತು ಸ್ಥಳೀಯ ಸಾರ್ವಜನಿಕರಿಗೆ ಕರಪತ್ರ ವಿತರಣೆ ಹಾಗೂ ತಿಳುವಳಿಕೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಥಳೀಯರು ತುರ್ತು ಕರೆ ಸಂಖ್ಯೆ-112ರ ಸದುಪಯೋಗ ಮಾಡಿಕೊಳ್ಳಬೇಕೆಂದರು.

 :- : ವಾಹನ ಸದುಪಯೋಗ ಮಾಡಿಕೊಳ್ಳಿ : ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರು ತುರ್ತು ಪರಿಸ್ಥಿತಿ, ಅಗ್ನಿ ಅವಗಡ, 24*7 ಪೊಲೀಸ್ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿದರೆ ಕೆಲವೇ ನಿಮಿಷದಲ್ಲಿ ಸಹಾಯವಾಣಿ ವಾಹನ ನಿಮ್ಮ ಬಳಿಗೆ ಬರಲಿದೆ ಪೊಲೀಸ್ ಠಾಣೆಯ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಸಾರ್ವಜನಿಕರು 112ರ ತುರ್ತು ಸ್ಪಂದನೆ ಸಹಾಯ ವ್ಯವಸ್ಥೆಯ ಕೆಲವು ವಿಧಾನಗಳಿಂದ 112 ಸಂಖ್ಯೆಗೆ ಕರೆ ಮಾಡಿ ವಾಹನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನಮಂತ ನರಳೆ ತಿಳಿಸಿದ್ದಾರೆ.
ಗ್ರಾಮದ ಪ್ರಮುಖ ಸ್ಥಳ, ಬೀದಿಗಳಲ್ಲಿ ತುರ್ತು ಕರೆ ಸಂಖ್ಯೆ-112ರ ಕುರಿತು ಸಾರ್ವಜನಿಕರಿಗೆ ತಿಳುವಳಿಗಾಗಿ ಕರಪತ್ರ ವಿತರಣೆ ಹಾಗೂ ಮಾಹಿತಿ ನೀಡುವ ಕಾರ್ಯ ಕುಲಗೋಡ ಪೊಲೀಸ್ ಠಾಣೆ ಸಿಬ್ಬಂದಿಗಳಿಂದ ನಡೆಯಿತು.
ಸ್ಥಳೀಯ ಬೀಟ್ ಪೊಲೀಸ್ ಪೇದೆ ಕೆ.ಸಿ.ಬಾಗಲಿ, ಕೆ.ಎಸ್.ಮದುರ, ಶಿವನಪ್ಪ ಮಾಳೇದ, ಮುತ್ತೆಪ್ಪ ವಡೇರ, ಸುರೇಶ ಬಾಣಸಿ, ಗೌಡಪ್ಪ ಮಾಳೇದ, ಗಿರೆಪ್ಪ ಆನೆಗುಂದಿ, ವಿಜಯ ಪಣದಿ, ಸಿದ್ದು ಬೀರಕನ್ನವರ, ರಾಮಣ್ಣ ಹೊಸಟ್ಟಿ ಸೇರಿದಂತೆ ಸ್ಥಳೀಯರು, ಇತರರು ಇದ್ದರು.


Spread the love

About inmudalgi

Check Also

ರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ

Spread the loveರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ ಮೂಡಲಗಿ: ಸಹಕಾರಿ ಸಂಸ್ಥೆಗಳ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ