ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಾರ್ವಜನಿಕರು ಮತ್ತು ರೈತರು ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿ ಕಛೇರಿಗೆ ಭೇಟಿ. ನಿಮ್ಮ ಕೃಷಿ ಜಮೀನು ಮಾಲೀಕ ಮರಣ ಹೊಂದಿದ್ದರೆ, ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಬೆಟಗೇರಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಗೌಡಪ್ಪ ಸಸಾಲಟ್ಟಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಹಾಗೂ ಕಂದಾಯ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಯಾದ ಇ-ಪೌತಿ/ವಾರಸಾ ಖಾತೆ ಆಂದೋಲನದಡಿಯಲ್ಲಿ ತಮ್ಮ ಕೃಷಿ ಜಮೀನನ ಮಾಲೀಕರು ನಿಧನರಾಗಿದ್ದರೆ, ತಮ್ಮ ಕುಟುಂಬದ ಉತ್ತರಾಧಿಕಾರಿಗಳ ಹೆಸರಿಗೆ ತಮ್ಮ ಜಮೀನು ಬದಲಾವಣೆ ಮಾಡಿಕೊಳ್ಳಬೇಕು. ಸರ್ಕಾರದಿಂದ ದೊರಕುವ ವಿವಿಧ ಸಹಾಯ, ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುತ್ತೆದೆ. ತಮ್ಮ ಜಮೀನು ಮಾಲೀಕ ಮರಣ ಹೊಂದಿದ್ದರೆ ತಕ್ಷಣ ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಇ ಪೌತಿ ಖಾತೆ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.