ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೀರಸಿದ್ಧೇಶ್ವರ ದೇವಸ್ಥಾನ ದಾಸೋಹ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸ್ಥಳೀಯ ಬೀರಸಿದ್ಧೇಶ್ವರ ದೇವಸ್ಥಾನದ ಅರ್ಚಕ ಗುರಪ್ಪ ಮಾಕಾಳಿ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಬೀರಸಿದ್ಧೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಸುಭಾಷ ಕರೆಣ್ಣವರ, ಕಾರ್ಯದರ್ಶಿ ಮಾಯಪ್ಪ ಬಾಣಸಿ, ವಿಠ್ಠಲ ಕೋಣಿ, ಸದಾಶಿವ ಕುರಿ, ಬಸಪ್ಪ ಮಾಕಾಳಿ, ಬಸಪ್ಪ ಮಾಲದಿನ್ನಿ, ಸದ್ಬಕ್ತರು, ಸ್ಥಳೀಯರು, ಇತರರು ಇದ್ದರು.