ಚಿನ್ನದ ಪದಕ ಪಡೆದ ಪುಂಡಲೀಕ ಲಕಾಟಿ ಸಾಧನೆ ಮೆಚ್ಚುವಂತದ್ದಾಗಿದೆ: ಮಲ್ಲಿಕಾರ್ಜುನ ನೀಲಣ್ಣವರ
ಬೆಟಗೇರಿ:ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪುಂಡಲೀಕ ಲಕಾಟಿ ಚಿನ್ನದ ಪದಕ ಪಡೆದು ದೇಶದ ಮತ್ತು ನಾಡಿನ ಹಾಗೂ ಹುಟ್ಟೂರಿನ ಕೀರ್ತಿ ಹೆಚ್ಚಿಸಿದ ಸಾಧನೆ ಮೆಚ್ಚುವಂತದ್ದಾಗಿದೆ ಎಂದು ಬೆಟಗೇರಿ ಗ್ರಾಮದ ಬಸವೇಶ್ವರ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ನೀಲಣ್ಣವರ ಹೇಳಿದರು.
ನೇಪಾಳ ದೇಶದ ಪೋಖರಾ ನಗರದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಚಿನ್ನದ ಪದಕ ಪಡೆದಿರುವ ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿ ಅವರಿಗೆ ಗ್ರಾಮದ ಬಸವೇಶ್ವರ ಸೌಹಾರ್ದ ಸಹಕಾರಿ ಕಾರ್ಯಾಲಯದಲ್ಲಿ ನ.6ರಂದು ಹಮ್ಮಿಕೊಂಡ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವ ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿ ಅವರಿಗೆ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಇಲ್ಲಿಯ ಬಸವೇಶ್ವರ ಸೌಹಾರ್ದ ಸಹಕಾರಿ ವತಿಯಿಂದ ಸನ್ಮಾನಿಸಿದರು.
ಕಲ್ಲಪ್ಪ ಹುಬ್ಬಳ್ಳಿ, ಈಶ್ವರ ಬಡಿಗೇರ, ಶಿವನಪ್ಪ ಕಂಬಿ, ಶಿವು ಮೇಳೆನ್ನವರ, ಅಶೋಕ ದೇಯನ್ನವರ, ಅಪ್ಪಯ್ಯಪ್ಪ ಸಿದ್ನಾಳ, ಬಸವರಾಜ ಮಾಳೇದ, ವೀರಭದ್ರ ದಂಡಿನ, ಮುಖ್ಯ ಕಾರ್ಯನಿರ್ವಾಹಕ ಈರಣ್ಣ ಸಿದ್ನಾಳ, ಗುಳಪ್ಪ ಪಣದಿ, ಬಸವೇಶ್ವರ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಗ್ರಾಹಕರು, ಗ್ರಾಮಸ್ಥರು ಇದ್ದರು.