ಬೆಟಗೇರಿ ಗಜಾನನ ಯುವಕ ಮಂಡಳಿಯವರಿಂದ ಗಣಪತಿ ಮೂರ್ತಿ ಸ್ಥಾಪನೆ
ಬೆಟಗೇರಿ:ಗ್ರಾಮದ ಗಜಾನನ ಯುವಕ ಮಂಡಳಿ ಸಹಯೋಗದಲ್ಲಿ ಸ್ಥಳೀಯ ಮಾರುಕಟ್ಟೆ ಆವರಣದಲ್ಲಿರುವ ಶ್ರೀ ಗಜಾನನ ವೇದಿಕೆಯಲ್ಲಿ ಸೆ.10 ರಂದು ಗಜಾನನ ಮೂರ್ತಿಯನ್ನು ಸ್ಥಾಪಿಸುವ ಕಾರ್ಯಕ್ರಮ ಅತ್ಯಂತ ಸರಳವಾಗಿ ನಡೆಯಿತು.
ಬೆಟಗೇರಿ ಗ್ರಾಮದ ಗಜಾನನ ಯುವಕ ಮಂಡಳಿ ಅಧ್ಯಕ್ಷ ವೀರಣ್ಣ ಸಿದ್ನಾಳ ಸ್ಥಾಪಿಸಲ್ಪಟ್ಟ ಗಣಪತಿ ಮೂರ್ತಿಗೆ ಪುಷ್ಪಾರ್ಪನೆ ಸಮರ್ಪಿಸಿ ಮಾತನಾಡಿ, ವಿಘ್ನ ನಿವಾರಕ ಎಲ್ಲರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಲಿ, ಕಳೆದೆರಡು ವರ್ಷಗಳಿಂದ ಕರೊನಾ ಮಹಾಮಾರಿಯಿಂದ ಬಂದ ಸಂಕಷ್ಟ ದೂರವಾಗಲೆಂದು ಹಾರೈಸಿ, ಶ್ರೀ ಗಜಾನನ ದರ್ಶನಕ್ಕೆ ಇಲ್ಲಿಗೆ ಬರುವ ಭಕ್ತರು, ಸ್ಥಳೀಯರು ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ತಿಳಿಸಿದರು.
ವಿಜಯ ಹಿರೇಮಠ ಅವರಿಂದ ಗಜಾನನ ಮೂರ್ತಿ ಸ್ಥಾಪಿಸಿ, ಪೂಜೆ, ಪುಷ್ಪಾರ್ಪನೆ, ನೈವೇದ್ಯ ಸಮರ್ಪಿಸಿ ಸಿಹಿ ವಿತರಿಸಿ, ಇಲ್ಲಿಯ ಗಜಾನನ ಯುವಕ ಮಂಡಳಿ ಸದಸ್ಯರು, ಯುವಕರು ಪಟಾಕಿ ಸಿಡಿಸಿ, ಗಜಾನನ ಜಯ ಘೋಷದೊಂದಿಗೆ ಸಂಭ್ರಮಿಸಿದÀ ಬಳಿಕ ವರ್ಣಮಯ ವಿದ್ಯುತ್ ದೀಪ, ಹಲವಾರು ಅಂಲಕಾರಿಕ ವಸ್ತುಗಳಿಂದ ಗಜಮುಖನನ್ನು ಕೂಡ್ರಿಸಿದ ಮಂಟಪವನ್ನು ಶೃಂಗರಿಸಿದರು.
ಕಾರ್ಯದರ್ಶಿ ಸಂಗಯ್ಯ ಹಿರೇಮಠ, ಶಂಭು ಹಿರೇಮಠ, ವಿಜಯ ಹಿರೇಮಠ, ನಾಗೇಶ ಬೆಳಗಲಿ, ಗಿರೀಶ ಗಾಣಗಿ, ವೀರಭದ್ರ ದೇಯಣ್ಣವರ, ಭರಮಪ್ಪ ಪೂಜೇರಿ, ಕಾಳಪ್ಪ ಕಂಬಾರ, ಶಿವು ನಾಯ್ಕರ, ಬಸವರಾಜ ದೇಯಣ್ಣವರ, ಗಜಾನನ ಯುವಕ ಮಂಡಳಿ ಸದಸ್ಯರು, ಯುವಕರು, ಗಣ್ಯರು ಇತರರಿದ್ದರು.