ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಸದ್ಗುರು ಯಾಲ್ಲಾಲಿಂಗ ಪಿಯು ಕಾಲೇಜಿನ ಕಲಾ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಕುಮಾರ ಕೆಂಚಪ್ಪ ಮಯತ್ತೆಪ್ಪ ಬೋರಗುಂಡಿ ಇತನು ಮರಡಿಮಠದಲ್ಲಿ ಸೆ.8ರಂದು ನಡೆದ ಜಿಲ್ಲಾ ಮಟ್ಟದ ಸೈಕಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸೈಕಿಂಗ್ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.
ಸ್ಥಳೀಯ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಪ್ರಾಚಾರ್ಯರು ಮತ್ತು ಸಿಬ್ಬಂದಿ ಕಾಲೇಜು ವಿದ್ಯಾರ್ಥಿ ಕೆಂಚಪ್ಪ ಬೋರಗುಂಡಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋಕಾಕ ತಾಲೂಕಾ ಕ್ರೀಡಾ ಸಂಯೋಜಕರು ಎಸ್.ಬಿ.ಹುದ್ದಾರ, ಮತ್ತೀತರರು ಇದ್ದರು.
IN MUDALGI Latest Kannada News