ಬೆಟಗೇರಿ:ದೇವಶಿಲ್ಪಿ ವಿಶ್ವಕರ್ಮನು ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ. ಬ್ರಹ್ಮಾಂಡ ತುಂಬೆಲ್ಲಾ ವ್ಯಾಪಿಸಿದ್ದಾನೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಸವಂತ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದ ವತಿಯಿಂದ ಸ್ಥಳೀಯ ಗ್ರಾಮ ದೇವತೆ ದ್ಯಾಮವ್ವದೇವಿ ದೇವಾಲಯದಲ್ಲಿ ಸೆ.17ರಂದು ನಡೆದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿ, ವಿಶ್ವಕರ್ಮ ಒಬ್ಬ ದೇವಶಿಲ್ಪಿಯಾಗಿದ್ದಾನೆ ಎಂದರು.
ಸ್ಥಳೀಯ ವಿಶ್ವಕರ್ಮ ಸಮುದಾಯದ ಯುವ ಮುಖಂಡ ಶಿವರಾಜ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ವಿಜಯ ಹಿರೇಮಠ ಅವರು ವಿಶ್ವಕರ್ಮರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆ ನೆರವೇರಿಸಿದ ಬಳಿಕ ಶ್ರೀ ಕಾಳಿಕಾ ಸ್ವಾ ಮಿಲ್ ಮಾಲೀಕ ಬಸಪ್ಪ ಬಡಿಗೇರ ಅವರಿಂದ ಸಿಹಿ ಮತ್ತು ಮಹಾಪ್ರಸಾದ ಸೇವೆ ನಡೆಯಿತು.
ಈರಣ್ಣ ಬಳಿಗಾರ, ಲಖನ ಚಂದರಗಿ, ಲಕ್ಷ್ಮಣ ಸೋಮಗೌಡ್ರ, ರಾಮಣ್ಣ ಮುಧೋಳ, ಮಲ್ಲಿಕಾರ್ಜುನ ಮೇಳೆಣ್ಣವರ, ಗುಳಪ್ಪ ಪಣದಿ, ಸುರೇಶ ಬಡಿಗೇರ, ಸಂತೋಷ ಬಡಿಗೇರ, ಪ್ರವೀಣ ಪತ್ತಾರ, ಭೀಮಶೆಪ್ಪ ಬಡಿಗೇರ, ಸಂಕೇತ ಬಡಿಗೇರ, ಬಸು ಬಡಿಗೇರ, ಪ್ರಕಾಶ ಬಡಿಗೇರ, ಮಾಂತು ಬಡಿಗೇರ, ಮಹೇಶ ಪತ್ತಾರ, ಈಶ್ವರ ಬಡಿಗೇರ, ಮಂಜು ಪತ್ತಾರ, ಸೇರಿದಂತೆ ವಿಶ್ವಕರ್ಮ ಸಮುದಾಯದ ಹಿರಿಯ ನಾಗರಿಕರು, ಯುವಕರು, ಗ್ರಾಮಸ್ಥರು ಇದ್ದರು.