ಬೆಟಗೇರಿ:ಇಂದಿನ ಯುಗದಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠೋಪಕರಣದ ಜೋತೆಗೆ ಆಟೋಪಕರಣಗಳ ಅವಶ್ಯಕತೆಯಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಪಿಡಿಒ ಎಮ್.ಎಲ್.ಯಡ್ರಾಂವಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಸೆ.20ರಂದು ನಡೆದ ಸ್ಥಳೀಯ ಗ್ರಾಪಂ ನಿಧಿಯಿಂದ ಸ್ಥಳೀಯ 7 ಅಂಗನವಾಡಿ ಕೇಂದ್ರದ ಮಕ್ಕಳಿಗೆ ನೋಟ್‍ಬುಕ್ಕ್, ಪಾಠಿ, ಅಂಕಲಿಪಿ, ಪೇನ್ಸಿಲ್, ರಬ್ಬರ್ ಸೇರಿದಂತೆ ಮತ್ತೀತರ ಪಾಠೋಪಕರಣಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಗನವಾಡಿ ಮಕ್ಕಳ ಶೈಕ್ಷಣಿಕ ಕಲಿಕಾ ಗುಣಮಟ್ಟಕ್ಕೂ ಆದ್ಯತೆ ನೀಡಬೇಕು ಎಂದರು.
ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಅವರು, ಸ್ಥಳೀಯ 7 ಅಂಗನವಾಡಿ ಕೇಂದ್ರದ ಕಾರ್ಯಕರ್ತರಿಗೆÉ ಪಾಠೋಪಕರಣಗಳನ್ನು ವಿತರಿಸಿ ಈ ವೇಳೆ ಮಾತನಾಡಿ, ಸ್ಥಳೀಯ ಎಲ್ಲಾ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕಲಿಕಾ ಪಾಠೋಪಕರಣಗಳ ಸದುಪಯೋಗವಾಗಲಿ ಎಂದರು.
ಯುವ ಧುರೀಣ ಹನುಮಂತ ವಡೇರ, ಇಲ್ಲಿಯ ಗ್ರಾಪಂ ಕಾರ್ಯದರ್ಶಿ ಎಮ್.ಪಿ.ತಳವಾರ, ಕರ ವಸೂಲಿಗಾರ ಸುರೇಶ ಬಾಣಸಿ, ಬಸವರಾಜ ಪಣದಿ, ವಿಠಲ ಚಂದರಗಿ, ಮುತ್ತೆಪ್ಪ ವಡೇರ, ಶಿವಾನಂದ ಐದುಡ್ಡಿ, ಈರಣ್ಣ ದಂಡಿನ, ಮೇಳೆಪ್ಪ ಹರಿಜನ, ಶಿವಾನಂದ ತೋಟಗಿ, ತುಕಾರಾಮ ಕುರಿ ಸೇರಿದಂತೆ ಸ್ಥಳೀಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.