Breaking News
Home / Recent Posts / ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು:ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ

ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು:ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ

Spread the love

ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು:ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ

ಬೆಟಗೇರಿ: ಹಿಂದೂ ಪರಂಪರೆಯಲ್ಲಿ ಪ್ರತಿ ದೇವರ ಅವತಾರದ ಹಿಂದೆ ಪೌರಾಣಿಕ ಕತೆಗಳಿವೆ. ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಭಾಗೋಜಿಕೊಪ್ಪ ಹಿರೇಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸೆ.14 ರಂದು ನಡೆದ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ ಎಂದರು.
ಶೈವರು ಮಾತ್ರವಲ್ಲದೇ ಎಲ್ಲ ಜಾತಿಜನಾಂಗದವರು ವೀರಭದ್ರನನ್ನು ಪೂಜಿಸಿದ ಇತಿಹಾಸವಿದೆ. ದೇಶದ ದಶ ದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳು ಕಾಣುತ್ತವೆ. ವೀರಗಾಸೆಯ ಮೂಲಕ ವೀರಭದ್ರನ ಚರಿತ್ರೆ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದೆ ಎಂದು ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಅಭಿಪ್ರಾಯಿಸಿದರು.
ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಸಂಗಯ್ಯ ಹಿರೇಮಠ, ಈರಯ್ಯ ಹಿರೇಮಠ ಸಮ್ಮುಖ ವಹಿಸಿದ್ದರು. ವೀರಭದ್ರೇಶ್ವರ ಜಯಂತಿ ಆಚರಣೆ ಸಮಿತಿ ಪರವಾಗಿ ಕಾರ್ಯಕ್ರಮದಲ್ಲಿದ್ದ ಶ್ರೀಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿರುವ ವೀರಭದ್ರೇಶ್ವರರ ಗದ್ಗುಗೆಗೆ ರುದ್ರಾಭಿಷೇಕ ಮತ್ತು ಭಾವಚಿತ್ರಕ್ಕೆ ಮಹಾಪೂಜೆ, ಸುಮಂಗಲೆಯರಿಂದ ನೈವೇದ್ಯ ಸಮರ್ಪನೆ, ದೀಪೋತ್ಸವ, ಪುರವಂತರಿಂದ ಒಡಪು ಹೇಳುವದು, ಮಹಾಮಂಗಲದೊಂದಿಗೆ ವೀರಭದ್ರೇಶ್ವರ ಜಯಂತ್ಯೋತ್ಸವ ಸರಳವಾಗಿ ಜರುಗಿತು. ಬೆಟಗೇರಿ ಗಜಾನನ ಯುವಕ ಮಂಡಳಿಯವರ ವತಿಯಿಂದ ಮಹಾಪ್ರಸಾದ ಸೇವೆ ನಡೆಯಿತು.
ಹರ, ಗುರು, ಚರಮೂರ್ತಿಗಳು, ಗಣ್ಯರು, ವೀರಭದ್ರಸ್ವಾಮಿ ಪುರವಂತರು, ಭಕ್ತರು, ಮಹಿಳೆಯರು, ವೀರಭದ್ರೇಶ್ವರ ಜಯಂತ್ಯೋತ್ಸವ ಸೇವಾ ಸಮಿತಿ, ಗಜಾನನ ಯುವಕ ಮಂಡಳಿ ಅಧ್ಯಕ್ಷರು, ಸದಸ್ಯರು, ಎಲ್ಲ ಸಮುದಾಯದ ಹಿರಿಯ ನಾಗರಿಕರು, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ