
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.1ರಂದು ನಡೆದ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ವಿವಿಧ ರೂಪಕಗಳ ಮೂಲಕ ಹಲವು ಮಹನ್ ವ್ಯಕ್ತಿಗಳ ವೇಷಭೂಷಣ ಧರಿಸಿದ್ದ ಸÀ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸುಮಾರು 86 ನೋಟ ಬುಕ್ಕ್ ಮತ್ತು ಪೆನ್ನುಗಳನ್ನು ಬೆಟಗೇರಿ ಗ್ರಾಮ ಘಟಕದ ಕರವೇ ಕಾರ್ಯಕರ್ತರು ಕಾಣಿಕೆಯಾಗಿ ನೀಡಿದರು.
ಸ್ಥಳೀಯ ಉಭಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳು ರಾಜ್ಯೋತ್ಸವ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದನ್ನು ಈ ವೇಳೆ ಇಲ್ಲಿಯ ಕರವೇ ಗ್ರಾಮ ಘಟಕದವರು ಶ್ಲಾಘಿಸಿ, ಸ್ಮರಿಸಿದರು.
ಉಭಯ ಶಾಲೆಯ ಮುಖ್ಯೋಪಾಧ್ಯರಾದ ಎಸ್.ಬಿ. ಸನದಿ, ವೈ.ಸಿ. ಶೀಗಿಹಳ್ಳಿ, ಶಂಭು ಹಿರೇಮಠ, ಫಿರೋಜ್ ಮಿರ್ಜಾನಾಯ್ಕ, ವಿಶ್ವನಾಥ ಶೀಗಿಹಳ್ಳಿ ಸೇರಿದಂತೆ ಸ್ಥಳೀಯ ಕರವೇ ಪದಾಧಿಕಾರಿಗಳು, ಕಾರ್ಯಕರ್ತರು, ಮತ್ತೀತರರು ಇದ್ದರು.
IN MUDALGI Latest Kannada News