Breaking News
Home / ಬೆಳಗಾವಿ / ದಾಸ ಸಾಹಿತ್ಯದಲ್ಲಿ ಕನಕದಾಸರಿಗೆ ಶ್ರೇಷ್ಠ ಸ್ಥಾನವಿದೆ: ರಮೇಶ ಅಳಗುಂಡಿ

ದಾಸ ಸಾಹಿತ್ಯದಲ್ಲಿ ಕನಕದಾಸರಿಗೆ ಶ್ರೇಷ್ಠ ಸ್ಥಾನವಿದೆ: ರಮೇಶ ಅಳಗುಂಡಿ

Spread the love

ಬೆಟಗೇರಿ:ಕನಕದಾಸರು ಮತ್ತು ಪುರದಂರದಾಸರು ಕನ್ನಡ ಸಾರಸ್ವತ ಲೋಕದ ಎರಡು ಕಣ್ಣುಗಳಿದ್ದಂತೆ, ದಾಸ ಸಾಹಿತ್ಯದಲ್ಲಿ ಕನಕದಾಸರಿಗೆÉ ಶ್ರೇಷ್ಠ ಸ್ಥಾನವಿದೆ ಎಂದು ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.

ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನ.8ರಂದು ನಡೆದ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕನಕದಾಸರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸಿದ ಬಳಿಕ ಮಾತನಾಡಿ, ಕನಕದಾಸರು ರಚಿಸಿದ ಕೃತಿಗಳು ಇಂದಿಗೂ ಸಹ ಜನಸಾಮಾನ್ಯರ ನಾಲಿಗೆಯ ಮೇಲೆ ನಲಿದಾಡುತ್ತಿವೆ ಎಂದರು.
ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ ಮುಖ್ಯಅತಿಥಿಗಳಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳನ್ನು ಈ ವೇಳೆ ಸತ್ಕರಿಸಿದರು.
ಈರಣ್ಣ ಪಟಗುಂದಿ, ಪ್ರಕಾಶ ಕುರಬೇಟ, ರಾಕೇಶ ನಡೋಣಿ, ಈಶ್ವರ ಮುನವಳ್ಳಿ, ವಾಯ್.ಎಮ್.ವಗ್ಗರ, ಮಲ್ಹಾರಿ ಪೋಳ, ಬಸವರಾಜ ಭೋಸಲೆ, ಸವಿತಾ ಜೋಗಿ, ಆನಂದ ಬಡಿಗೇರ, ಮಂಜುನಾಥ ಸವತಿಕಾಯಿ, ನಾಗರಾಜ ಅರಳಿಮಟ್ಟಿ, ಕಿರಣ ಕಮತ, ಸಿರಾಜಅಹ್ಮದ ಜಿಡ್ಡಿಮನಿ, ಎಸ್‍ಡಿಎಮ್‍ಸಿ ಸದಸ್ಯರು, ಎನ್.ಟಿ.ಪೂಜೇರಿ, ಹನುಮಂತ ಹಾಲಣ್ಣವರ, ದುಂಡಪ್ಪ ದೇಯಣ್ಣವರ, ಸ್ಥಳೀಯರು, ಶಿಕ್ಷಕರು, ಅತಿಥಿಶಿಕ್ಷಕರು, ವಿದ್ಯಾರ್ಥಿಗಳು, ಇದ್ದರು.


Spread the love

About inmudalgi

Check Also

ಕೃಷಿಕ ಸಮಾಜ ಹಾಗೂ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಇವರ ಸಹಯೋಗದಲ್ಲಿ ಕಿಸಾನ ಗೋಷ್ಠಿ ಕಾರ್ಯಕ್ರಮ

Spread the loveಮೂಡಲಗಿ :ರೈತ ದಿನಾಚರಣೆಯ ಅಂಗವಾಗಿ ಗೋಕಾಕ ಕೃಷಿ ಇಲಾಖೆಯ ವತಿಯಿಂದ ಆತ್ಮ (ATMA) ಯೋಜನೆ, ಗೋಕಾಕ್/ಮೂಡಲಗಿ ತಾಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ