ವಿದ್ಯಾರ್ಥಿ ಶಂಕರಾನಂದ ಮುಧೋಳ,ವಿದ್ಯಾರ್ಥಿನಿ ಪ್ರಿಯಾಂಕಾ ತಡಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ
ಬೆಟಗೇರಿ:ಚಿಕ್ಕೋಡಿ ಶೈಕ್ಷಣೀಕ ಜಿಲ್ಲಾ ಶಿಕ್ಷಣ ಇಲಾಖಾ ಸಹಯೋಗದಲ್ಲಿ ಗೋಕಾಕ ಮಹರ್ಷಿ ವಾಲ್ಮಿಕಿ ಕ್ರೀಡಾಂಗಣದಲ್ಲಿ ಇತೀಚೆಗೆ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಕುಮಾರ ಶಂಕರಾನಂದ ಮುಧೋಳ ಇತನು 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕುಮಾರಿ ಪ್ರಿಯಾಂಕಾ ತಡಸಿ 3000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಗೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ: ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಶಿಕ್ಷಕರು, ಅತಿಥಿ ಶಿಕ್ಷಕರು, ಎಸ್‍ಡಿಎಮ್‍ಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ ಮತ್ತು ಸದಸ್ಯರು, ಶಿಕ್ಷಣಪ್ರೇಮಿಗಳು, ಸ್ಥಳೀಯರು ವಿದ್ಯಾರ್ಥಿ ಕುಮಾರ ಶಂಕರಾನಂದ ಮುಧೋಳ, ಕುಮಾರಿ ಪ್ರಿಯಾಂಕಾ ತಡಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
IN MUDALGI Latest Kannada News