ಆರೋಗ್ಯವಂತ ಸಮಾಜ ರೂಪಿಸಲು ಪ್ರತಿಯೊಬ್ಬರ ಸಹಕಾರಬೇಕಿದೆ: ಎಚ್.ಎನ್.ಬಾವಿಕಟ್ಟಿ
ಬೆಟಗೇರಿ:ಕೋವಿಡ್ ಲಸಿಕೆ ಬಗ್ಗೆ ಸಂಶಯ ಬೇಡ, ಎಲ್ಲರೂ ಲಸಿಕೆ ಪಡೆದು ಕರೊನಾ ಸೋಂಕಿನಿಂದ ಮುಕ್ತರಾಗೊಣ, ಇಂದು ಆರೋಗ್ಯವಂತ ಸಮಾಜ ರೂಪಿಸÀಲು ಪ್ರತಿಯೊಬ್ಬರ ಸಹಕಾರಬೇಕಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಪಿಡಿಒ ಎಚ್.ಎನ್.ಬಾವಿಕಟ್ಟಿ ಹೇಳಿದರು.
ಬೆಳಗಾವಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೋಕಾಕ ತಾಪಂ, ತಾಲೂಕಾ ಆರೋಗ್ಯ ಕೇಂದ್ರ, ಬೆಟಗೇರಿ ಗ್ರಾಪಂ ಹಾಗೂ ಪಿಎಚ್‍ಸಿ ಸಹಯೋಗದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೆ.17 ರಂದು ನಡೆದ ಉಚಿತ ಕೋವಿಡ್-19 ಬೃಹತ್ ಲಸಿಕಾ ಮೇಳ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರೊನಾ ಮಹಾಮಾರಿಯಿಂದ ನಮ್ಮ ಸುತ್ತಮುತ್ತಲಿನ ಅನೇಕ ಜನ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡಿದ್ದೇವೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಕರೊನಾ ಮಹಾಮಾರಿ ತಡೆಗಟ್ಟಲು ಹಾಗೂ ಸಾವು, ನೋವುಗಳ ಪ್ರಮಾಣ ಕಡಿಮೆಯಾಗಲೂ ಸಹಕಾರಿಯಾಗಿದೆ. ಕರೊನಾ ನಿಯಂತ್ರಣದ ನಿಯಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕೆಂದು ಪಿಡಿಒ ಎಚ.ಎನ್.ಬಾವಿಕಟ್ಟಿ ತಿಳಿಸಿದರು.
ಸ್ಥಳೀಯ ಸಹಿಪ್ರಾಕಹೆಮ ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ಬೆಟಗೇರಿ ಮಾತನಾಡಿ, ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸ್ಥಳೀಯರಿಗೆ ತಿಳುವಳಿಕೆ ಮೂಡಿಸುತ್ತಿರುವ ಇಲ್ಲಿಯ ಗ್ರಾಪಂ ಮತ್ತು ಪಿಎಚ್‍ಸಿ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಎಸ್.ಬಿ.ಸನದಿ, ಸರೋಜಾ ಬಿಸನಾಳ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗಣ್ಯರು, ಗ್ರಾಪಂ ಮತ್ತು ಪಿಎಚ್‍ಸಿ ಸಿಬ್ಬಂದಿ, ಸ್ಥಳೀಯರು, ಇತರರು ಇದ್ದರು.