ವಿಶ್ವಗುರು ಬಸವಣ್ಣ ಮಹಾನ್ ದಾರ್ಶನಿಕರಾಗಿದ್ದರು: ಶಿವಾನಂದ ಪಟ್ಟಿಹಾಳ
ಬೆಟಗೇರಿ:ವಿಶ್ವಗುರು ಬಸವಣ್ಣನವರ ಕುರಿತು ರಚಿಸಿದ ಗ್ರಂಥವನ್ನು ಇಂದು ಪ್ರತಿ ಮನೆ, ಮನೆಗೆ ನೀಡಬೇಕಿದೆ. ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮಲ್ಲಿ ಅಳವಡಿಕೊಳ್ಳಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯ ಹಾಗೂ ಬೆಂಗಳೂರು ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯ ಶಿವಾನಂದ ಪಟ್ಟಿಹಾಳ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಿರಿಯ ಪತ್ರಕರ್ತ ಅಡಿವೇಶ ಮುಧೋಳ ಅವರ ಪತ್ರಿಕಾ ಕಾರ್ಯಾಲಯಕ್ಕೆ ಡಿ.10ರಂದು ಭೇಟಿ ನೀಡಿ ಬೆಂಗಳೂರು ಕೇಂದ್ರ ಬಸವ ಸಮಿತಿ ಪ್ರಕಟಿಸಿದ ಮಹಾನ್ ದಾರ್ಶನಿಕ ಬಸವಣ್ಣ ಎಂಬ ಗ್ರಂಥವನ್ನು ಅಡಿವೇಶ ಮುಧೋಳ ಅವರಿಗೆ ನೀಡಿದ ಬಳಿಕ ಮಾತನಾಡಿ, 12 ನೇ ಶತಮಾನದಲ್ಲಿಯೇ ಸಮಾನತೆ ತರುವಲ್ಲಿ ಹೊರಾಡಿದ ಮಹಾನ್ ಪುರುಷ, ಬಸವಣ್ಣನವರು ಮಹಾನ್ ದಾರ್ಶನಿಕರು ಸಹ ಆಗಿದ್ದರು ಎಂದರು.
ಈ ವೇಳೆ ಗೋಸಬಾಳ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕ, ಸಾಹಿತಿ ಬಾಳೇಶ ಫಕೀರಪ್ಪನವರ, ಮನ್ನಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಭಿಸಾಬ ನದಾಫ, ಹರೀಶ ದೇಯಣ್ಣವರ, ಪ್ರಮೋಧ ಮುಧೋಳ, ಸಂತೋಷ ಬಡಿಗೇರ ಸೇರಿದಂತೆ ಮತ್ತೀತರರು ಇದ್ದರು.
IN MUDALGI Latest Kannada News