Breaking News
Home / ಬೆಳಗಾವಿ / ಡಿ.12ರಂದು ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ

ಡಿ.12ರಂದು ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ

Spread the love

ಡಿ.12ರಂದು ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಸ್ಥಳೀಯ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ sಶುಕ್ರವಾರ ಡಿ.12 ರಂದು ನಡೆಯಲಿದೆ.
ಡಿ.12 ರಂದು ಬೆಳಿಗ್ಗೆ 7 ಗಂಟೆಗೆ ಸ್ಥಳೀಯ ದ್ಯಾಮವ್ವದೇವಿ ದೇವರ ದೇವಸ್ಥಾನದಲ್ಲಿರುವ ಶ್ರೀದೇವಿಯ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಶ್ರೀದೇವಿ ಶೃಂಗಾರಗೊಳಿಸುವ, ಉಡಿತುಂಬುವದು ಪುರಜನರಿಂದ ಪೂಜೆ ಪುನಸ್ಕಾರ, ನೈವೇದ್ಯ ಸಮರ್ಪನೆ ನಡೆದ ಬಳಿಕ ಮಹಾಪ್ರಸಾದ, ದೀಪೋತ್ಸವ, ಕಾರ್ತಿಕೋತ್ಸವ ಜರುಗಿ ಸಂಪನ್ನಗೊಳ್ಳಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ಗ್ರಾಮ ಪಂಚಾಯತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸಂತ ಶರಣರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.


Spread the love

About inmudalgi

Check Also

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಮಾದರಿ- ವೀರೇಶ ಪಾಟೀಲ

Spread the love ಬೆಳಗಾವಿ : ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಭ್ರಾತೃತ್ವದ ಸಂದೇಶ ಸಾರಿದ ಸಂತ. ಅವರೂಬ್ಬರು ಪರಿಪೂರ್ಣ ವ್ಯಕ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ