Breaking News
Home / ಬೆಳಗಾವಿ / ಬೆಟಗೇರಿ ಸುತ್ತಲಿನ ಹಳ್ಳಿಗಳಲ್ಲಿ ವೀಳ್ಯದೆಲೆಗೆ ಬಂಗಾರದ ಬೆಲೆ..!

ಬೆಟಗೇರಿ ಸುತ್ತಲಿನ ಹಳ್ಳಿಗಳಲ್ಲಿ ವೀಳ್ಯದೆಲೆಗೆ ಬಂಗಾರದ ಬೆಲೆ..!

Spread the love

ಬೆಟಗೇರಿ ಸುತ್ತಲಿನ ಹಳ್ಳಿಗಳಲ್ಲಿ ವೀಳ್ಯದೆಲೆಗೆ ಬಂಗಾರದ ಬೆಲೆ..!

ವರದಿ: ಅಡಿವೇಶ ಮುಧೋಳ. ಬೆಟಗೇರಿ
ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ವಿಳ್ಯದ ಎಲೆಗೆ ಈಗ ಬಂಗಾರದ ಬೆಲೆ ಬಂದಿದೆ.! ವೀಳ್ಯದೆಲೆ ಸತತ ತಿನ್ನುವ ಹವ್ಯಾಸಿಗರು ಮತ್ತು ಪಾನ್ ಬೀಡಾ ಜೀಗಿಯುವ ಗ್ರಾಹಕರಿಗೆ ವೀಳ್ಯದ ಎಲೆ ತಿನ್ನಲು ಭಾರಿ ಲೆಕ್ಕ ಹಾಕುವ ಪರಿಸ್ಥಿತಿ ಎದುರಾಗಿದೆ.
ಸ್ಥಳೀಯ ವೀಳ್ಯದೆಲೆ ಮಾರಾಟಗಾರರು ಗ್ರಾಹಕರಿಗೆ ಈ ಹಿಂದೆ ಒಂದು ರೂಪಾಯಿಗೆ ಮೂರ್ನಾಲ್ಕು ವೀಳ್ಯದೆಲೆಗಳನ್ನು ಕೂಡುತ್ತಿದ್ದರು. ಈಗ ಐದು ರೂಪಾಯಿಗೆ ನಾಲ್ಕೈದು ವೀಳ್ಯದೆಲೆಗಳನ್ನು ಮಾತ್ರ ನೀಡುತ್ತಿದ್ದಾರೆ. ಬೇಕಾದರೆ ತೆಗೆದುಕೊಳ್ಳಿ ಇಲ್ಲಾ ಅಂದರೆ ನಮ್ಮ ಕಡೆ ಎಲೆ ಇಲ್ಲಾ.. ಅಂತಾ ಹೇಳುತ್ತಿದ್ದಾರೆ. ಪಾನಬೀಡಾ ಅಂಗಡಿಯವರು ಸಹ ಪಾನ್ ಬೀಡಾಗಳಿಗೆ ಕೇವಲ ಒಂದು ವೀಳ್ಯದೆಲೆ ಮಾತ್ರ ಹಾಕಿ ಕೂಡುತ್ತಿದ್ದಾರೆ. ಅಲ್ಲದೇ ಪಾನ್ ಬೀಡಾಗಳ ಬೆಲೆಗಳಲ್ಲಿ ದಿಡರನೇ ಬೆಲೆ ಸಹ ಏರಿಕೆ ಕಂಡಿದೆ. ಹೀಗಾಗಿ ವೀಳ್ಯದೆಲೆ ತಿನ್ನುವ ಗ್ರಾಹಕರು ವಿಳ್ಯದ ಎಲೆ ಖರೀದಿಸಲು ಲೆಕ್ಕ ಹಾಕುವಂತಾಗಿದೆ.
ಚಳಿಗಾಲದಲ್ಲಿ ವಿಳ್ಯದ ಎಲೆ ಬೆಳೆಯ ಇಳುವರಿ ಬರದ ಕಾರಣ ವೀಳ್ಯದೆಲೆಯ ಬೆಲೆಯಲ್ಲಿ ಭಾರಿ ಏರಿಕೆಯಾದ ಹಿನ್ನಲೆಯಲ್ಲಿ ಹಳ್ಳಿಗಳಲ್ಲಿರುವ ಕಿರಾಣಿ ಮತ್ತು ಪಾನ್ ಬೀಡಾ ಅಂಗಡಿಯವರು ವೀಳ್ಯದೆಲೆ ಖರೀದಿಸಲು ಪರದಾಡುವಂತಾಗಿದೆ. ಕೇವಲ ಒಂದು ಸಾವಿರ ವೀಳ್ಯದೆಲೆಗೆ ಎಂಟು ನೂರು ರೂಪಾಯಿಂದ ಒಂಬತ್ತು ನೂರು ರೂಪಾಯಿ ಕೂಟ್ಟು ಖರೀದಿಸಿ, ಗ್ರಾಹಕರಿಗೆ ಹೀಗೆ ನಾವು ಎಲೆ ಕೂಡಬೇಕು ಅಂಬುವುದು ತಿಳಿದಂಗ ಆಗೈತಿರಿ ಎಂದು ಸ್ಥಳೀಯ ಕಿರಾಣಿ ಮತ್ತು ಪಾನ ಬೀಡಾ ಅಂಗಡಿ ಮಾಲೀಕರು ಹೇಳುವ ಮಾತಿದು.
ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ವೀಳ್ಯದೆಲೆ ಮಾರಾಟದಲ್ಲಿ ಭಾರಿ ಪ್ರಮಾಣದ ಬೆಲೆ ಏರಿಕೆ ಕಂಡಿದ್ದರಿಂದ ಚಿಲ್ಲರೆ ವ್ಯಾಪಾರ ಮಾಡುವÀ ಕಿರಾಣಿ ಮತ್ತು ಪಾನ್ ಬೀಡಾ ಅಂಗಡಿಯವರು ಸ್ವಲ್ಪ ಪ್ರಮಾಣದಲ್ಲಿ ವೀಳ್ಯದೆಲೆ ಖರೀದಿಸುತ್ತಿರುವದರಿಂದ ವೀಳ್ಯದೆಲೆಗಳು ಸ್ಥಳೀಯ ಅಂಗಡಿಗಳಲ್ಲಿ ಬೇಗನೆ ಖಾಲಿಯಾಗುತ್ತಿರುವದರಿಂದ ಇನ್ನೂಳಿದ ಗ್ರಾಹಕರಿಗೆ ವಿಳ್ಯದ ಎಲೆ ಸಿಗದೇ ತಂಬಾಕು ಸುಣ್ಣ ಸೇರಿಸಿ ಕೈಯಲ್ಲಿ ತಿಕ್ಕಿಕೊಂಡು ಕೇವಲ ತಂಬಾಕು ತಿನ್ನುವ ದುಸ್ಥಿತಿ ಬಂದೂದಗಿದೆ
ವೀಳ್ಯದೆಲೆ ಮಾರಾಟಗಾರರು ಕೂಟಷ್ಟು ಗ್ರಾಹಕರು ತೆಗೆದುಕೊಳ್ಳಬೇಕು ಹೆಚ್ಚಿಗೆ ಮತ್ತೊಂದೂ ವಿಳ್ಯದ ಎಲೆ ಕೇಳಿದರೆ ಆ ಕೂಡುವ ಎಲೆ ಸಹ ಇಲ್ಲಾ ಅನ್ನುತ್ತಿದ್ದಾರೆ. ಹೀಗಾಗಿ ವೀಳ್ಯದೆಲೆಗೆ ಬಂಗಾರದ ಬೆಲೆ ಬಂದಂತಾಗಿದೆ ಎಂದು ಗ್ರಾಹಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

“ಒಂದು ವೀಳ್ಯದೆಲೆಯಲ್ಲಿ ಅರ್ಧ ತಿಂದು, ಇನ್ನರ್ಧ ಎಲೆ ಜೋಪಾನವಾಗಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ವೀಳ್ಯದೆಲೆಗೆ ಭಾರಿ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ಮತ್ತೂಬ್ಬರಿಗೆ ಒಂದರ್ಧ ಎಲೆ ಕೂಡದಂತಾಗಿದೆ. ಐದು ರೂಪಾಯಿಗೆ ಕೇವಲ ನಾಲ್ಕೈದು ವೀಳ್ಯದೆಲೆ ಕೂಡುತ್ತಿದ್ದಾರೆ.

* ವಿಠ್ಠಲ ಕೋಣಿ. ಗ್ರಾಹಕ ಬೆಟಗೇರಿ.


Spread the love

About inmudalgi

Check Also

ಆರ್.ಡಿ.ಎಸ್. ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love.ಮೂಡಲಗಿ : ದಿನಾಂಕ 23-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ