Breaking News
Home / Recent Posts / ಭಕ್ತಿಭಾವದಲ್ಲಿ ಜರುಗಿದ ವಿಠ್ಠಲ ಮಂದಿರ ಉತ್ಸವ

ಭಕ್ತಿಭಾವದಲ್ಲಿ ಜರುಗಿದ ವಿಠ್ಠಲ ಮಂದಿರ ಉತ್ಸವ

Spread the love

ಮೂಡಲಗಿ: ನೂರಾರು ಸಂಖ್ಯೆಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸಂತರು ತಾಳ, ಮೃದಂಗಗಳೊಂದಿಗೆ ಭಜನೆ, ಧ್ಯಾನಗಳ ಮೂಲಕ ಇಲ್ಲಿಯ ವಿಠ್ಠಲ ಮಂದಿರದಲ್ಲಿ ವಾರ್ಷಿಕ ಉತ್ಸವ ಕಾರ್ಯಕ್ರಮವು ನಾಲ್ಕು ದಿನಗಳ ವರೆಗೆ ಭಕ್ತಿಭಾವದಲ್ಲಿ ಜರುಗಿತು.

ಪ್ರಾರಂಭದಲ್ಲಿ ಸಂತರಿಂದ ಗ್ರಂಥ ಸ್ಥಾಪನೆ, ಹರಿಪಾಠ, ಪ್ರವಚನ, ಕೀರ್ತನೆಗಳು, ಮಂಗಳಾರತಿ, ದಿಂಡಿ ಉತ್ಸವ, ಗೋಪಾಲ ಕಾಲಾ ಕಾರ್ಯಕ್ರಮಗಳು ಜರುಗಿದವು.
ವಿಠ್ಠಲ ದೇವರ ಅಲಂಕೃತ ಪಾಲಕಿ ಉತ್ಸವವು ವಿಠ್ಠಲ ಮಂದಿರದಿಂದ ಪ್ರಾರಂಭಗೊಂಡು ಹಣಮಂತ ದೇವರ ದೇವಸ್ಥಾನಕ್ಕೆ ತೆರಳಿ ಮರಳಿ ವಿಠ್ಠಲ ಮಂದಿರಕ್ಕೆ ಆಗಮಿಸಿತು. ಪ್ರತಿ ದಿನ ಭಾಗವಹಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು.
ಮೂಡಲಗಿ ಸೇರಿದಂತೆ ತೆಲಸಂಗ, ಬನ್ನೂರ, ಅಥಣಿ, ಗುರ್ಲಾಪುರ, ಕಮಲದಿನ್ನಿ, ರಂಗಾಪುರ, ಶಿವಾಪುರ, ಗೋಕಾಕ, ಬೆಳಗಾವಿ, ಹಾರೂಗೇರಿ, ಮರಕಟ್ಟಿ, ಅಷ್ಟೆ, ತೇರದಾಳ, ಮುಗಳಖೋಡದಿಂದ ಸಂತರು ಭಾಗವಹಿಸಿದ್ದರು.
ಅಣ್ಣಪ್ಪ ದೇಸಾಯಿ, ಮಾಯಪ್ಪ ರಾಜಾಪುರ, ವೆಂಕಪ್ಪ ಶಾಬನ್ನವರ, ಗೋವಿಂದ ಭಸ್ಮೆ, ಪಾಂಡುರಂಗ ಭಸ್ಮೆ, ಗೋಪಾಲ ಭಸ್ಮೆ, ಶೇಖರ ಢವಳೇಶ್ವರ, ಸಿದ್ದಪ್ಪ ದುರದುಂಡಿ, ಲಕ್ಕಪ್ಪ ಕೋರಿಶೆಟ್ಟಿ, ಬಾಬುರಾವ ಗೋಂದಳಿ, ವೆಂಕಟೇಶ ಬಡಿಗೇರ, ಬೀರಪ್ಪ ಗುಡ್ಲಮನಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀಕಾಂತ ಪತ್ತಾರ, ಈರಪ್ಪ ಪತ್ತಾರ, ಈಶ್ವರ ಬಡಿಗೇರ, ಸುಧಾಕರ ಪತ್ತಾರ, ರಾಜು ಬಡಿಗೇರ ಇದ್ದರು.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ