Breaking News
Home / ಬೆಳಗಾವಿ / ಫೆ.12ರಂದು ಬೆಟಗೇರಿ ಸದ್ಗುರು ಸಿದ್ಧಾರೂಢರ ಸದ್ಭಭಕ್ತರಿಂದ ಹುಬ್ಬಳ್ಳಿ ಮಠಕ್ಕೆ ಪಾದಯಾತ್ರೆ

ಫೆ.12ರಂದು ಬೆಟಗೇರಿ ಸದ್ಗುರು ಸಿದ್ಧಾರೂಢರ ಸದ್ಭಭಕ್ತರಿಂದ ಹುಬ್ಬಳ್ಳಿ ಮಠಕ್ಕೆ ಪಾದಯಾತ್ರೆ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸದ್ಗುರು ಸಿದ್ಧಾರೂಢರ ಸದ್ಭಕ್ತರು ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಜಾತ್ರೆಗೆ ಪಾದಯಾತ್ರೆ ಮೂಲಕ ಪ್ರಯಾಣ ಬೆಳಸಲಿರುವ ಪ್ರಯುಕ್ತ ಫೆ.12ರಂದು ಮುಂಜಾನೆ 9 ಗಂಟೆಗೆ ಸ್ಥಳೀಯ ಶ್ರೀ ಬಸವೇಶ್ವರ ವೃತ್ತದಲ್ಲಿ 11ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ. ಬೆಟಗೇರಿ ಗ್ರಾಮದ ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ, ಶರಣರಾದ ಮಲ್ಲಪ್ಪ ಪಣದಿ, ಸಿದ್ದಪ್ಪ ಹೊರಟ್ಟಿ, ಭಾಳಪ್ಪ ಕನೋಜಿ ನೇತೃತ್ವ ವಹಿಸಲಿದ್ದು, ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಅಧ್ಯಕ್ಷತೆ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶರಣರಾದ ಸುಭಾಷ ಕರೆಣ್ಣವರ, ಮಾಯಪ್ಪ ಬಾಣಸಿ ಸೇರಿದಂತೆ ಹರ, ಗುರು, ಚರಮೂರ್ತಿಗಳು, ಗಣ್ಯರು ಸ್ಥಳೀಯ ಗಣ್ಯರು, ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.

ಬೆಟಗೇರಿ ಗ್ರಾಮದಿಂದ ಫೆ.12ರಂದು ಪಾದಯಾತ್ರೆ ಆರಂಭವಾಗಿ ಅಕ್ಕಿಸಾಗರ ಮಾರ್ಗವಾಗಿ ಯರಗಟ್ಟಿ, ಸವದತ್ತಿ, ಅಮ್ಮಿನಬಾವಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಫೆ.15ರಂದು ಪಾದಯಾತ್ರೆ ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠ ತಲುಪಲಿದೆ. ಸ್ಥಳೀಯ ಶರಣಜೀವಿ ಈಶ್ವರ ಬಸಪ್ಪ ಬಳಿಗಾರ ಅವರಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಸತತ 11 ವರ್ಷಗಳಿಂದ ಮಹಾಪ್ರಸಾದ ವ್ಯವಸ್ಥೆ
ಹಮ್ಮಿಕೊಂಡಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮೊಬೈಲ್ ನಂ: 9980705123, 9901139091, 9902081990 ಸಂಪರ್ಕಿಸಬೇಕೆಂದು ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸಂಚಾಲಕ

ಈಶ್ವರ ಬಳಿಗಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಫೆ.೧೦ ರಂದು ಬೃಹತ ಐಚ್ಚಿಕ ರಕ್ತದಾನ ಶಿಬಿರ ಮತ್ತು ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ

Spread the love ಫೆ.೧೦ ರಂದು ಬೃಹತ ಐಚ್ಚಿಕ ರಕ್ತದಾನ ಶಿಬಿರ ಮತ್ತು ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಮೂಡಲಗಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ