Breaking News
Home / ಬೆಳಗಾವಿ / ಸದ್ಗುರು ಶ್ರೀ ಸಿದ್ಧಾರೂಢರು ಶಿವನ ಅವತಾರಿ: ಈಶ್ವರ ಬಳಿಗಾರ

ಸದ್ಗುರು ಶ್ರೀ ಸಿದ್ಧಾರೂಢರು ಶಿವನ ಅವತಾರಿ: ಈಶ್ವರ ಬಳಿಗಾರ

Spread the love

ಬೆಟಗೇರಿ:ಸದ್ಗುರು ಸಿದ್ಧಾರೂಢರು ಮಾನವನ ಅಜ್ಞಾನ ಕಳೆದು ಸುಜ್ಞಾನದ ಸನ್ನಮಾರ್ಗ ತೋರಿಸಿದ ಮಹಾನ್ ದೇವತಾ ಪುರುಷ, ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರು ಶಿವನ ಅವತಾರಿಯಾಗಿದ್ದಾರೆ ಎಂದು ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಸದ್ಭಭಕ್ತರು ಫೆ.12ರಂದು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಹಮ್ಮಿಕೊಂಡ 11ನೇ ವರ್ಷದ ಪಾದಯಾತ್ರೆಗೆ ಸ್ಥಳೀಯ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲಿ ಪಾದಯಾತ್ರೆ ನೇತೃತ್ವ ವಹಿಸಿ ಮಾತನಾಡಿದ ಅವರು, ನೂರಾರು ಜನ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಬೆಟಗೇರಿ ಗ್ರಾಮದಿಂದ ಅಕ್ಕಿಸಾಗರ ಮಾರ್ಗವಾಗಿ ಯರಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಫೆ.15ರಂದು ಹುಬ್ಬಳ್ಳಿ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ ಎಂದರು.
ಸ್ಥಳೀಯ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠಕ್ಕೆ ಹಮ್ಮಿಕೊಂಡ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಸದ್ಗುರು ಶ್ರೀ ಸಿದ್ಧಾರೂಢರ ಸದ್ಭಭಕ್ತರು ಪಾದಯಾತ್ರೆ ಹಮ್ಮಿಕೊಂಡಿದ್ದು ಸದ್ಗುರು ಸಿದ್ಧಾರೂಢರ ಮೇಲೆ ಅಗಾಧ ಭಕ್ತಿಯ ಪರಾಕಾಷ್ಠೆ ತೋರುತ್ತಿದೆ. ಮಹಾಶಿವರಾತ್ರಿ ಪ್ರಯುಕ್ತ ಹುಬ್ಬಳ್ಳಿ ಶ್ರೀಮಠಕ್ಕೆ ಸ್ಥಳೀಯ ಯುವಕರು ಸತತ 11ನೇ ವರ್ಷ ಸಂಚಾಲಕ ಪಾದಯಾತ್ರೆ ಹಮ್ಮಿಕೊಂಡಿರುವುದಕ್ಕೆ ಶುಭ ಹಾರೈಸಿದರು.
ಈರಯ್ಯ ಹಿರೇಮಠ, ಶ್ರೀಧರ ದೇಯಣ್ಣವರ, ಶಿವು ದೇಯಣ್ಣವರ, ಬಸವರಾಜ ಪಣದಿ, ಮಾಯಪ್ಪ ಬಾಣಸಿ, ಮಲ್ಲಪ್ಪ ಕಂಬಿ, ಮಲ್ಲಪ್ಪ ಪಣದಿ, ಸುರೇಶ ಬಾಣಸಿ, ಯಲ್ಲಪ್ಪ ಮೆಳೆಣ್ಣವರ, ಶಿವಲಿಂಗ ಮುಧೋಳ, ಕಲ್ಲಪ್ಪ ನೀಲಣ್ಣವರ, ಬಾಳಪ್ಪ ಕನೋಜಿ, ಸಿದ್ದಪ್ಪ ಹೊರಟ್ಟಿ, ಮಹಾದೇವ ಮಾಳೇದ, ಸುರೇಶ ಸಿದ್ನಾಳ, ದುಂಡಪ್ಪ ಕಂಬಿ, ಬಸಪ್ಪ ಬಳಿಗಾರ, ದುಂಡಪ್ಪ ಮಾಳೇದ, ಭರಮಪ್ಪ ಪೂಜೇರ, ಲಕ್ಷ್ಮಣ ಸೋಮಗೌಡ್ರ, ಸ್ಥಳೀಯ ಸದ್ಗುರು ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸದಸ್ಯರು, ಯುವಕರು, ಸದ್ಗುರು ಸಿದ್ಧಾರೂಢರ ಸದ್ಭÀಕ್ತರು, ಸ್ಥಳೀಯರು ಇದ್ದರು.


Spread the love

About inmudalgi

Check Also

ಬಿಡಿಸಿಸಿ ಬ್ಯಾಂಕಿನ ಠೇವಣಿ ಹಣ ಸಂಪೂರ್ಣ ಸುರಕ್ಷಿತವಾಗಿದ್ದು, ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ: ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ

Spread the loveಬೆಳಗಾವಿ: ಬಿಡಿಸಿಸಿ ಬ್ಯಾಂಕಿನ ಠೇವಣಿ ಹಣ ಸಂಪೂರ್ಣ ಸುರಕ್ಷಿತವಾಗಿದ್ದು, ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಬ್ಯಾಂಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ