Breaking News
Home / ಬೆಳಗಾವಿ / ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳ ಪ್ರವಚನ ಆಯೋಜನೆ ಪೂರ್ವಭಾವಿ

ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳ ಪ್ರವಚನ ಆಯೋಜನೆ ಪೂರ್ವಭಾವಿ

Spread the love

ವರದಿ: ಅಡಿವೇಶ ಮುಧೋಳ.
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ಯ ಏ.26 ರಿಂದ ಏ.29 ರವರೆಗೆ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಪ್ರವಚನ
ಹಮ್ಮಿಕೊಂಡಿರುವ ಪ್ರಯುಕ್ತ ಬೆಟಗೇರಿ ಪಿಕೆಪಿಎಸ್
ಸಭಾಂಗಣದಲ್ಲಿ ಇತ್ತೀಚೆಗೆ ಸ್ಥಳೀಯರಿಂದ ಪೂರ್ವಭಾವಿ
ಸಭೆ ಜರುಗಿತು.
ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ನಡೆಯಲಿರುವ ಪ್ರವಚನ ಆಯೋಜನೆ ಸಮಿತಿ ಸಂಚಾಲಕ ಈಶ್ವರ ಬಳಿಗಾರ ಮಾತನಾಡಿ, ಏ.26 ರಿಂದ ಏ.29
ರವರೆಗೆ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಜಿ
ಅವರಿಂದ ಐದು ದಿನಗಳ ಕಾಲ ಪ್ರತಿ ದಿನ ಸಾಯಂಕಾಲ 7 ಗಂಟೆಯಿಂದ 8 ಗಂಟೆಯವರೆಗೆ ಪ್ರವಚನ, ಏ.30
ರಂದು ಮುಂಜಾನೆ 10 ಗಂಟೆಗೆ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ
ಸ್ವಾಮೀಜಿ ಅವರಿಂದ ಬೆಟಗೇರಿ ಗ್ರಾಮದಲ್ಲಿ ಪ್ರವಚನ
ಜರುಗಲಿದೆ. ಸ್ಥಳೀಯರ ಸಹಾಯ, ಸಹಕಾರ
ಅವಶ್ಯಕವಾಗಿದೆ. ಸಹಾಯ, ಸಹಕಾರ ನೀಡಬೇಕೆಂದು
ಸ್ಥಳೀಯರಲ್ಲಿ ಮನವಿ ಮಾಡಿಕೊಂಡರು.
ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಬಸವಂತ ಕೋಣಿ
ಮಾತನಾಡಿ, ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ
ಬೆಟಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಪ್ರವಚನ
ಆಯೋಜನೆಗೆ ಅಗತ್ಯವಾದ ಸಕಲ ಕಾರ್ಯಕ್ಕೆ ಸಹಾಯ,
ಸಹಕಾರ ನೀಡುವುದಾಗಿ ಈ ವೇಳೆ ಭರವಸೆ ನೀಡಿದರು.
ಬೆಟಗೇರಿ ಗ್ರಾಪಂ ಗ್ರಂಥಾಲಯ ಮತ್ತು ಅರಿವು
ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ಪ್ರವಚನ
ಆಯೋಜನೆಯ ಹಲವಾರು ಮಹತ್ವದ ವಿಷಯಗಳ
ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ
ವೇಧಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ
ಹಿರೇಮಠ ಸಮ್ಮುಖ ವಹಿಸಿದ್ದರು.
ಲಕ್ಷ್ಮಣ ನೀಲಣ್ಣವರ, ಲಕ್ಷ್ಮಣ ಸೋಮಗೌಡ್ರ, ಗೌಡಪ್ಪ
ದೇಯಣ್ಣವರ, ಈಶ್ವರಚಂದ್ರ ಬೆಟಗೇರಿ, ಈರಸಂಗಪ್ಪ
ದೇಯಣ್ಣವರ, ಈರಣ್ಣ ಬಳಿಗಾರ, ಶ್ರೀಧರ ದೇಯಣ್ಣವರ,
ಹಜರತ ಮಿರ್ಜಾನಾಯ್ಕ, ಈರಪ್ಪ ದೇಯಣ್ಣವರ,
ಹನುಮಂತ ವಗ್ಗರ, ರಾಮಣ್ಣ ನೀಲಣ್ಣವರ, ದುಂಡಪ್ಪ
ಕಂಬಿ, ಅಡಿವೆಪ್ಪ ಮುರಗೋಡ, ಮಲ್ಲಪ್ಪ ಪಣದಿ, ಸುಭಾಷ ಕರೆಣ್ಣವರ, ಸುರೇಶ ಬಾಣಸಿ, ಭೀಮಶೆಪ್ಪ ಹೊಂಗಲ ಸೇರಿದಂತೆ ಕೊಪ್ಪಳ ಮತ್ತು ಹೊಸಳ್ಳಿ ಶ್ರೀಗಳಿಂದ ಹಮ್ಮಿಕೊಂಡಿರುವ ಪ್ರವಚನ ಆಯೋಜನೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಯುವಕರು,
ಸ್ಥಳೀಯ ಹಿರಿಯ ನಾಗರಿಕರು ಇದ್ದರು.


Spread the love

About inmudalgi

Check Also

*ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಚಾತುರ್ಯ ಆಗಿಲ್ಲ-ಬಿಇಒ ಪ್ರಕಾಶ ಹಿರೇಮಠ*

Spread the love *ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಚಾತುರ್ಯ ಆಗಿಲ್ಲ-ಬಿಇಒ ಪ್ರಕಾಶ ಹಿರೇಮಠ* ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಇರುವ ಎಸ್‌ಎಸ್‌ಎಲ್‌ಸಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ