Breaking News
Home / Recent Posts / ಬೆಟಗೇರಿ ಗ್ರಾಮದಲ್ಲಿ ವೈಭವದ ಬನ್ನಿ ವಿನಿಮಯ

ಬೆಟಗೇರಿ ಗ್ರಾಮದಲ್ಲಿ ವೈಭವದ ಬನ್ನಿ ವಿನಿಮಯ

Spread the love

ಬೆಟಗೇರಿ ಗ್ರಾಮದಲ್ಲಿ ವೈಭವದ ಬನ್ನಿ ವಿನಿಮಯ

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಪುರ ಜನರಿಂದ ಬನ್ನಿ ವಿನಿಮಯ ಕಾರ್ಯಕ್ರಮ ಶುಕ್ರವಾರ ಅ.15ರಂದು ವೈಭವದಿಂದ ನಡೆಯಿತು.


ಗ್ರಾಮದ ಪ್ರತಿ ಮನೆಗಳಲ್ಲಿ ಹಾಗೂ ಅಕ್ಕ-ಪಕ್ಕದ ಮನೆಯಲ್ಲಿರುವ ವೃದ್ಧರಿಗೆ, ಹಿರಿಯರಿಗೆ ಮಕ್ಕಳು, ಮಹಿಳೆಯರು, ವೃದ್ದರು ಜಾತಿ, ಮತ, ಪಂಥ ಎನ್ನದೇ ಒಬ್ಬರಿಗೊಬ್ಬರೂ ‘ನಾನು ನೀನು ಬಂಗಾರದಂಗ ಇರೋಣಾ’ ಅಂತಾ ಬನ್ನಿ ವಿನಿಮಯ ಮಾಡಿಕೊಂಡು, ಹಿರಿಯರ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದುಕೊಳ್ಳುವ ದೃಶ್ಯ ಸ್ಥಳೀಯರಲ್ಲಿ ಅವಿನಾಭಾವ ಸಂಬಂಧ ಬೆಸೆಯುವಂತಿತ್ತು.
ಇಲ್ಲಿಯ ಎಲ್ಲಾ ದೇವರ ದೇವಾಲಯಗಳಲ್ಲ್ಲಿ ಪುರ ಜನರಿಂದ ಪೂಜೆ, ನೈವೇದ್ಯ ಸಮರ್ಪಪನೆ, ದೀಪೋತ್ಸವ ಸಡಗರದಿಂದ ನಡೆದು, ಊರಿನ ಪ್ರಮುಖ ಬೀದಿಗಳಲ್ಲಿ ಪುರದೇವರ ಪಲ್ಲಕ್ಕಿ ಉತ್ಸವ ಜರುಗಿದ ಬಳಿಕ ಸಂಜೆ 7 ಗಂಟೆಗೆ ಗ್ರಾಮದ ಅಂಬೇಡ್ಕರ ವೃತ್ತದಲ್ಲಿ ಗ್ರಾಮಸ್ಥರು ಬನ್ನಿ ಪೂಜೆ, ಪುರದೇವರ ಪಲ್ಲಕ್ಕಿಗಳಿಗೆ ಬನ್ನಿ ವಿನಿಮಯ ಮಾಡಿಕೊಳ್ಳುವದು ಸಂಭ್ರಮದಿಂದ ಜರುಗಿತು. ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಮಕ್ಕಳು, ಯುವಕರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನವರಾತ್ರಿ ಪ್ರಯುಕ್ತ ಒಂಬತ್ತು ದಿನಗಳ ಕಾಲ ಗ್ರಾಮದ ಹೊರವಲಯದಲ್ಲಿರುವ ಬನ್ನಿ ಗಿಡಕ್ಕೆ ಬ್ರಾಹ್ಮಿ ಮಹೊರ್ತದಲ್ಲಿ ಸ್ಥಳೀಯ ಸುಮಂಗಲೆಯರು ದಿನಕ್ಕೊಂದು ಬಣ್ಣದ ಸೀರೆಯನ್ನಿಟ್ಟು ಪ್ರದರ್ಶಕ್ಷಣೆಯ ಹಾಕಿ ಅರಿಸಿನ, ಕುಂಕುಮದ ಪೂಜೆ, ಪುನಸ್ಕಾರ, ನೈವೇದ್ಯ ಸಮರ್ಪಿಸಿ ಶ್ರೀದೇವಿಯ ಆರಾಧನೆ ಮಾಡಿ, ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ ಸಂಭ್ರಮಿಸಿದರು.


Spread the love

About inmudalgi

Check Also

ಎನ್ಡಿಡಿಬಿ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಗೌರವ ಸಮರ್ಪಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ : ಗುಜರಾತ್ ದಲ್ಲಿರುವ ಎನ್ಸಿಡಿಎಫ್ಐ ಹೊಸ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್ಡಿಡಿಬಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ