ಬೆಟಗೇರಿ:ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯದ ಮೂಲಕ ಇಡೀ ಮನುಕುಲಕ್ಕೆ ಬದುಕಿನ ಸಂದೇಶವನ್ನು ಸಾರಿದ ಸರ್ಮತೋಮುಖ ಚಿಂತಕರಾಗಿದ್ದರು. ಮಹರ್ಷಿ ವಾಲ್ಮೀಕಿ ಅವರು ಮೌಲ್ಯಗಳ ಮಹಾವೃಕ್ಷವೇ ಆಗಿದ್ದರು ಎಂದು ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಭಾವಿಕಟ್ಟಿ ಹೇಳಿದರು.
ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ಅ.20ರಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಆದಿಕವಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಅದಿಮ ಸಂಸ್ಕøತಿಯ ಆಗರವಾದ ರಾಮಾಯಣ ಕಾವ್ಯ ಬಹುಶಿಸ್ತೀಯ ನೆಲೆಯ ಜ್ಞಾನಭಂಡಾರವೂ ಹೌದು. ಪ್ರತಿಯೊಬ್ಬರೂ ತಮ್ಮ ಬಾಳನ್ನು ತಿದ್ದಕೊಳ್ಳಲು ದೊಡ್ಡ ಸಾಧನವೂ ಆಗಿದೆ ಎಂದರು.
ಆದಿಕವಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ ನೆರವೇರಿಸಿದ ಬಳಿಕ ಸಿಹಿ ವಿತರಣೆ ಕಾರ್ಯಕ್ರಮ ನಡೆಯಿತು. ಸ್ಥಳೀಯ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ರಮೇಶ ನೀಲಣ್ಣವರ, ಸುರೇಶ ಬಾಣಸಿ, ವಿಠಲ ಚಂದರಗಿ, ಶಿವಪ್ಪ ಐದುಡ್ಡಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು, ಇದ್ದರು.
ಬೆಟಗೇರಿ ವಿವಿಧಡೆ ವಾಲ್ಮೀಕಿ ಜಯಂತಿ ಆಚರಣೆ : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಿರಿಯ ಮತ್ತು ಕಿರಿಯ ಕನ್ನಡ ಶಾಲೆ, ಗ್ರಾಪಂ ಗ್ರಂಥಾಲಯ, ವಿವಿಡಿ ಸರ್ಕಾರಿ ಪ್ರೌಢ ಶಾಲೆ, ಎಸ್.ಎಸ್.ವೈ. ಪಿಯು ಕಾಲೇಜು, ಸಂಘ, ಸಂಸ್ಥೆಗಳು ಸೇರಿದಂತೆ ವಿವಿಧಡೆ ಆದಿಕವಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದ ಬಳಿಕ ಸಿಹಿ ವಿತರಿಸಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಈ ವೇಳೆ ಶಾಲೆಯ ಮುಖ್ಯೋಪಾಧ್ಯರು, ಶಿಕ್ಷಕರು, ಎಸ್‍ಡಿಎಮ್‍ಸಿ ಅಧ್ಯಕ್ಷರು, ಸದಸ್ಯರು, ಸಂಘ, ಸಂಸ್ಥೆಯ ಮುಖ್ಯಸ್ಥರು, ಪದಾಧಿಕಾರಿಗಳು, ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಗಣ್ಯರು, ಸ್ಥಳೀಯರು ಇದ್ದರು.