Breaking News
Home / Recent Posts / ಹೊಲದಲ್ಲಿ ಐದು ಜೋಳದ ದಂಟು, ಚಿಕ್ಕದಾಗಿರುವ ಕಲ್ಲು ಪೂಜಿಸಿ, ಭೂ ತಾಯಿಗೆ ನೈವೇದ್ಯ

ಹೊಲದಲ್ಲಿ ಐದು ಜೋಳದ ದಂಟು, ಚಿಕ್ಕದಾಗಿರುವ ಕಲ್ಲು ಪೂಜಿಸಿ, ಭೂ ತಾಯಿಗೆ ನೈವೇದ್ಯ

Spread the love

ಬೆಟಗೇರಿ ಗ್ರಾಮದಲ್ಲಿ ಸಡಗರದಿಂದ ನಡೆದ ಭೂಮಿ ತಾಯಿಗೆ ಚರಗ ಚಲ್ಲುವ ಕಾರ್ಯಕ್ರಮ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರೈತರು ತಮ್ಮ ತಮ್ಮ ಹೊಲ-ಗದ್ದೆಗಳÀಲ್ಲಿರುವ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿ ತಾಯಿಗೆ ಉಡಿತುಂಬಿ, ಪೂಜಿಸಿ, ಚರಗ ಚಲ್ಲುವ ಶೀಗಿಹುಣ್ಣಿಮೆ ಕಾರ್ಯಕ್ರಮ ಬುಧವಾರ ಅ.20 ರಂದು ಸಡಗರದಿಂದ ನಡೆಯಿತು.
ಗ್ರಾಮದ ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿತ್ತು, ಇಲ್ಲಿಯ ರೈತ ಕುಟುಂಬದ ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಎತ್ತುಗಳನ್ನು ಶೃಂಗರಿಸಿ, ಎತ್ತಿನ ಬಂಡಿ ಹೂಡಿಕೊಂಡು, ಕೆಲವರು ಕಾಲ್ನಡೆಗೆಯಲ್ಲಿ, ಇನ್ನೂ ಕೆಲವರು ದ್ವಿಚಕ್ರ ವಾಹನಗಳಲ್ಲಿ ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಹೋಗಿ ಶೀಗಿ ಹುಣ್ಣಿಮೆಯ ಚರಗ ಚೆಲ್ಲುವ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಹೊಲ-ಗದ್ದೆಗಳಲ್ಲಿ ಮನೆಯಿಂದ ಒಯ್ದ ಅಡುಗೆ ಬಿಚ್ಚಿಟ್ಟು ಹೊಲದಲ್ಲಿರುವ ಐದು ಜೋಳದ ದಂಟು, ಚಿಕ್ಕದಾದ (ಪಂಚ ಪಾಂಡವರು) ಕಲ್ಲುಗಳನ್ನು ಹುಡುಕಿ ತಂದು ಪೂಜಿಸಿ, ಹೊಲ-ಗದ್ದೆಯ ತುಂಬೆಲ್ಲಾ ನೈವೇದ್ಯ ರೂಪದಲ್ಲಿರುವ ಮೃಷ್ಟಾನ್ನ ಎಡೆಯನ್ನು ಚರಗ ಚಲ್ಲುವ ಮೂಲಕ ಭೂತಾಯಿಗೆ ನಮನ ಸಮರ್ಪಿಸಿದ ಬಳಿಕ ಮನೆಮಂದಿ ಹಾಗೂ ಅಕ್ಕ-ಪಕ್ಕದ ಮನೆಯವರು, ಮಕ್ಕಳು, ಮಹಿಳೆಯರು ಸೇರಿಕೊಂಡು ಒಟ್ಟಿಗೆ ಕುಳಿತು ಭೋಜನ ಸವಿದು ಸಂಭ್ರಮಿಸಿ, ಸಂಜೆ ಹೊತ್ತಿಗೆ ಪ್ರಸಕ್ತ ವರ್ಷದ ಮಳೆ, ಬೆಳೆಗಳ ಕುರಿತು ಚರ್ಚಿಸುತ್ತಾ ತಮ್ಮ ಮನೆಗಳತ್ತ ಮರಳಿದರು.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ