ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ 15ನೇ ಹಣಕಾಸಿನ ಯೋಜನೆಯ ಅನುದಾನದಡಿಯಲ್ಲಿ ಇಲ್ಲಿಯ ರಾಮಣ್ಣ ಹೊಸಟ್ಟಿ ಅವರ ಮನೆಯಿಂದ ನಿಂಗಾಪೂರ ಮುಖ್ಯ ರಸ್ತೆವರೆಗೆ ರಸ್ತೆ ರಿಪೇರಿ ಕೆಲಸಕ್ಕೆ ಚಾಲನೆ ನೀಡುವ ಭೂಮಿ ಪೂಜಾ ಸರಳ ಕಾರ್ಯಕ್ರಮ ಶನಿವಾರ ಜೂ.5 ರಂದು ನಡೆಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಕಾಮಗಾರಿ ಕಾರ್ಯಕ್ಕೆ ಚಾಲನೆ ನೀಡಿದರು. ಹನುಮಂತ ವಡೇರ ಭೂಮಿ ಪೂಜೆ ನೆರವೇರಿಸಿದರು. ಗ್ರಾಪಂ ಸದಸ್ಯ ಬಸಪ್ಪ ದಂಡಿನ ಮಾತನಾಡಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಈಶ್ವರ ಮುಧೋಳ, ಅಶೋಕ ಕೋಣಿ, ಮಾರುತಿ ಚಂದರಗಿ, ಬಸಪ್ಪ ದೇಯಣ್ಣವರ, ಈರಪ್ಪ ಬಳಿಗಾರ, ಲಕ್ಕಪ್ಪ ಚಂದರಗಿ, ಶಂಕರ ಕೋಣಿ, ಮಹಾದೇವ ಹೊರಟ್ಟಿ, ಅಜ್ಜಪ್ಪ ಪೇದನ್ನವರ, ವಿಠಲ ಕೋಣಿ, ಮಹಾದೇವಪ್ಪ ದೇಯಣ್ಣವರ, ಸುರೇಶ ಬಾಣಸಿ, ವಿಠಲ ಚಂದರಗಿ, ಶಿವಾನಂದ ದೇಯಣ್ಣವರ, ನೀಲಪ್ಪ ಪಾರ್ವತೇರ, ಪುಂಡಲೀಕ ಹೊಸಟ್ಟಿ, ಬಸವರಾಜ ಕೋಣಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಸ್ಥಳೀಯರು ಇದ್ದರು.
