ಬೆಟಗೇರಿ:ಗ್ರಾಮದ ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ತುಳಸಿ ವಿವಾಹ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಸಡಗರದಿಂದ ಮಂಗಳವಾರ ನ.16 ರಂದು ನಡೆಯಿತು.
ಸ್ಥಳೀಯ ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದ ಗದ್ದುಗೆ ಮಹಾಪೂಜೆ, ಅಭಿಷೇಕ, ಪುರಜನರಿಂದ ತುಳಸಿ ಕಟ್ಟೆಗೆ ವಿಶೇಷ ಪೂಜೆ, ಪುನಸ್ಕಾರ, ನೈವೇದ್ಯ ಸಮರ್ಪಿಸುವ ಕಾರ್ಯಕ್ರಮ ನಡೆದ ಬಳಿಕ ವಿಠಲದೇವರ ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಜರುಗಿತು.
ಸಂತರಾದ ಬಸಪ್ಪ ಮುರಗೋಡ, ಸದಾಶಿವ ದಂಡಿನ, ಬಸಪ್ಪ ದಂಡಿನ, ಈರಪ್ಪ ಮಾಡಲಗಿ, ವೀರಭದ್ರಪ್ಪ ದಂಡಿನ, ಅಡಿವೆಪ್ಪ ಕನೋಜಿ, ಉಮೇಶ ಬಳಿಗಾರ, ಬಸಪ್ಪ ನಾಡಗೌಡ, ಬಾಳಪ್ಪ ಕನೋಜಿ, ವಿಠಲ ಬಡಿಗೇರ, ಬಸಪ್ಪ ಹುಬ್ಬಳ್ಳಿ, ಇಲ್ಲಿಯ ಪಾಂಡುರಂಗ ವಿಠಲ ರುಕ್ಮೀಣಿ ದೇವರ ಸೇವಾ ಸಮಿತಿ ಸದಸ್ಯರು, ಸಂತರು, ಶರಣರು, ಮಹಿಳೆಯರು, ಗ್ರಾಮಸ್ಥರು ಇದ್ದರು.