ತುರ್ತು ಕರೆ 112 ಸಂಖ್ಯೆ ಸದುಪಯೋಗ ಪಡೆದುಕೊಳ್ಳಬೇಕು: ಬಿ.ಬಿ.ಬಿರಾದಾರ.
ಬೆಟಗೇರಿ:ಸಾರ್ವಜನಿಕರು, ಶಾಲಾ ಮಕ್ಕಳು ತುರ್ತು ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹೊಸದಾಗಿ ಜಾರಿಗೆ ತಂದಿರುವ ತುರ್ತು ಕರೆ ಸಂಖ್ಯೆ 112ಕ್ಕೆ ಕರೆ ಮಾಡಿದರೆ, 112ವಾಹನ ಕೆಲವೇ ನಿಮಿಷದಲ್ಲಿ ನಿಮ್ಮ ಬಳಿಗೆ ಬರಲಿದೆ ಎಂದು ಕುಲಗೋಡ ಪೊಲೀಸ್ ಠಾಣೆ ಪೊಲೀಸ್ ಪೇದೆ ಬಿ.ಬಿ.ಬಿರಾದಾರ ಹೇಳಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ಮತ್ತು ಮೂಡಲಗಿ ಪೊಲೀಸ್ ಠಾಣೆ ಹಾಗೂ ಕುಲಗೋಡ ಪೊಲೀಸ್ ಠಾಣೆ ಸಹಯೋಗದಲ್ಲಿ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಡಿ.15ರಂದು ಒಂದೇ ಭಾರತ, ಒಂದೇ ತುರ್ತು ಕರೆ 112ಸಂಖ್ಯೆ ಕುರಿತು ತಿಳುವಳಿಕೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುರ್ತು ಪರಿಸ್ಥಿತಿ, ಅಗ್ನಿ ಅವಗಡ ಸೇರಿದಂತೆ ಹಲವು ಸಮಸ್ಯೆಗಳಿಗೆ ತುರ್ತು ಸ್ಪಂದನೆಯ ಪೊಲೀಸ್ ಸಹಾಯಕ್ಕಾಗಿ 112ಸಂಖ್ಯೆಗೆ ಕರೆ ಮಾಡಿದರೆ ಕೆಲವೇ ನಿಮಿಷದಲ್ಲಿ ಸಹಾಯವಾಣಿ ವಾಹನ ನಿಮ್ಮ ಬಳಿಗೆ ಬರಲಿದೆ. ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಸಾರ್ವಜನಿಕರು, ಶಾಲಾ ಮಕ್ಕಳು 112ಸಂಖ್ಯೆಗೆ ಕರೆ ಮಾಡಿ ವಾಹನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪೊಲೀಸ್ ಪೇದೆ ಬಿ.ಬಿ.ಬಿರಾದಾರ ತಿಳಿಸಿದರು.
ಸ್ಥಳೀಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಕಾರ್ಯಕ್ರಮದ ಅಧ್ಯಕ್ಷತೆ, ಪತ್ರಕರ್ತ ಅಡಿವೇಶ ಮುಧೋಳ ಮುಖ್ಯಅತಿಥಿಗಳಾಗಿ, ಪೊಲೀಸ್ ಪೇದೆ ಗಂಗಾಧರ ಟಪಾಲದಾರ, ಪೊಲೀಸ್ ಪೇದೆ ಅಡಿವೇಶ ವೇಷದಾರಿ ಅವರು, ತುರ್ತು ಕರೆ 112 ಸಂಖ್ಯೆ ಮತ್ತು ವಾಹನದ ಸಹಾಯ ಕುರಿತು ಮಾತನಾಡಿದರು.
ಮೋಹನ ತುಪ್ಪದ, ಮಲ್ಲಿಕಾರ್ಜುನ ಹಿರೇಮಠ, ವಿ.ಬಿ.ಬಿರಾದಾರ, ಎ.ಬಿ.ತಾಂವಶಿ, ವಾಯ್.ಎಮ್.ವಗ್ಗರ, ರಾಕೇಶ ನಡೋಣಿ, ಶುಭಾ.ಬಿ., ಪ್ರಕಾಶ ಕುರಬೇಟ, ಮಲ್ಹಾರಿ ಪೋಳ, ಜಿ.ಆರ್.ಭಾಗೋಜಿ, ಅನಂತ ಕರಿಕಟ್ಟಿ, ಎಸ್.ಜೆ.ಜಿಡ್ಡಿಮನಿ, ಪ್ರೌಢ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.