ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈದ್ಗಾ ಮೈದಾನದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತೀಕವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಮೇ.3ರಂದು ಇಲ್ಲಿಯ ಮುಸ್ಲಿಂ ಭಾಂದವರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
ತಮ್ಮ ಧರ್ಮದ ಸಂಪ್ರದಾಯದಂತೆ ಅಂದು ಬೆಳಗ್ಗೆ ಮಸೀದಿಯಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹೊಸ ಬಟ್ಟೆ ತೊಟ್ಟು ಮಕ್ಕಳು ಸೇರಿದಂತೆ ವೃದ್ಧರವರೆಗೆ ಸ್ಥಳೀಯ ಮುಸ್ಲಿಂ ಭಾಂದವರು ಬಬ್ಬರಿಗೊಬ್ಬರು ಅಪ್ಪಿಕೊಂಡು ರಂಜಾನ್ ಹಬ್ಬದ ಶುಭಾಶಗಳನ್ನು ಹಂಚಿಕೊಂಡು ಈದ್-ಉಲ್-ಪಿತರ್ ಸಡಗರ, ಭಕ್ತಿಯಿಂದ ಆಚರಿಸಿದ ಬಳಿಕ ಇಲ್ಲಿಯ ಮುಸ್ಲಿಂ ಭಾಂದವರು ಹಿಂದೂ ಭಾಂದವರಿಗೆ, ಅಕ್ಕ-ಪಕ್ಕದ ಮನೆಯವರಿಗೆ, ಮಿತ್ರರರಿಗೆ ಹಾಗೂ ತಮ್ಮ ಬಂಧು ಭಾಂದವರಿಗೆ ಸವಿ ಸವಿಯಾದ ಅಡುಗೆ ಉಣಬಡಿಸಿ ಸಂಭ್ರಮಿಸಿದರು.
ಸ್ನೇಹ, ಸೌಹಾರ್ದತೆ, ತ್ಯಾಗದ ಸಂಕೇತವಾಗಿರುವ ರಂಜಾನ್ ಹಬ್ಬವನ್ನು ಅಲ್ಹಾನ ಆಜ್ಞೆಯಂತೆ ಆಚರಿಸಬೇಕು. ಪ್ರೀತಿ, ಸಹಬಾಳ್ವೆ, ಸೌಹಾರ್ದತೆಯಿಂದ ಪರೋಪಕಾರಿಯಾಗಿ ಒಬ್ಬ ಒಳ್ಳೆಯ ಮಾನವನಾಗಿ ಧಾರ್ಮಿಕ ಕರ್ತವ್ಯಗಳನ್ನು ನಿಭಾಯಿಸಬೇಕೆಂದು ಸ್ಥಳೀಯ ಮುಸ್ಲಿಂ ಸಮಾಜದ ಹಿರಿಯರಾದ ಗೌಸಸಾಬ ಮಿರ್ಜಾನಾಯ್ಕ ಸಂದೇಶ ನೀಡಿದರು. ನಜೀರ್‍ಸಾಬ ರಾಜೆಖಾನ್ ಅವರು ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಈ ವೇಳೆ ಕುತುಬುಸಾಬ ಮಿರ್ಜಾನಾಯ್ಕ, ರಫೀಕ ಮಿರ್ಜಾನಾಯ್ಕ, ಶ್ಯಾನೂರ್ ಮಿರ್ಜಾನಾಯ್ಕ, ಜಬ್ಬರ್ ನದಾಫ್, ಮೀರಾಸಾಬ ನದಾಫ್, ಬಾಬು ಮಿರ್ಜಾನಾಯ್ಕ, ಬಿಲಾಲ್ ಬೀಳಗಿ, ಹಜರತ್ ಮಿರ್ಜಾನಾಯ್ಕ, ಮಲಿಕಸಾಬ ನದಾಫ್ ಸೇರಿದಂತೆ ಸ್ಥಳೀಯ ಮುಸ್ಲಿಂ ಭಾಂದವರು, ಮಕ್ಕಳು ಇದ್ದರು.
IN MUDALGI Latest Kannada News