ಸೇವಾ ಸಂಸ್ಥೆ .. ಮಾಡಿತು ಸಂತೆಗೆ ವ್ಯವಸ್ಥೆ.
ಮೂಡಲಗಿ; ಇಲ್ಲಿನ ಸ್ಥಳೀಯ ಯುವ ಜೀವನ ಸೇವಾ ಸಂಸ್ಥೆಯು ಕೊರೋನಾ ಸೋಂಕು ಬರದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರಕಾರವು ಸೂಚಿಸಿದ ಪ್ರಕಾರ ಒಬ್ಬರಿಂದ ಒಬ್ಬರು ಅಂತರದಲ್ಲಿ ಇರುವ ಹಾಗೆ ಸಂತೆ ನಡೆಸಲು ನಗರದ ಪ್ರಮುಖ ಸ್ಥಳಗಳಲ್ಲಿ, ಗಾಂಧಿ ಚೌಕ, ಲಕ್ಷ್ಮಿ ನಗರದ ಬಿಇಒ ಕಚೇರಿ ಹತ್ತಿರ,ಕೆಇಬಿ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ ಹೀಗೆ ಅನೇಕ ಕಡೆ ಸಂತೆ ನಡೆಸಲು ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸುಣ್ಣದ ಗೆರೆ ಹಾಕಿ ಅನುಕೂಲ ಮಾಡಿಕೊಡುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಿದರು
ಸ್ವಯಂ ಸೇವಾ ಅಂದರೆ ಇದೇ ಅಲ್ಲವೇ .?