ಕರೋನಾ: ಗುರ್ಲಾಪೂರದ ಹೆದ್ದಾರಿ ಮೇಲೆ ಮೇಲೆ ಹದ್ದಿನ ಕಣ್ಣು
ಗುರ್ಲಾಪೂರ: ದೇಶ್ಯಾದಂತ ಜರುಗಿದ ಪ್ರಜಾ ಕರ್ಪೂದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿಯ ಮುಧೋಳ ನಿಪ್ಪಾನಿ ರಾಜ್ಯ ಹೆದ್ದಾರಿಯಲ್ಲಿ ಕರೋನ ಸೊಂಕಿನ ತಪಸನೆ ಹಾಗೂ ಗ್ರಾಮದಲ್ಲಿ ಜನರೆಲ್ಲ ಹೊರಗಡೆ ಬರದೆ ಬೆಂಬಲ ವ್ಯಕ್ತಪಡಿಸಿದರು.
ರವಿವಾರ ಜರುಗಿದ ಸ್ವಯಂ ಪ್ರೇರಿತ ಪ್ರಜಾ ಕರ್ಪೂ ಇಲ್ಲಿಯ ಆರೋಗ್ಯ, ಕಂದಾಯ, ಪುರಸಭೆ, ಪೋಲಿಸ್ ಇಲಾಖೆಗಳ ಸಹಯೋಗದೊಂದಿಗೆ ಜರುಗಿತು. ಬಿಕೋ ಎನ್ನುತ್ತಿದ್ದ ಗ್ರಾಮದಲ್ಲಿ ಜನರು ತಮ್ಮ ದಿನ ನಿತ್ಯದ ಕಾರ್ಯಕ್ರಮಗಳನ್ನು ಮುಗಿಸಿ ಮನೆಯವರೊಂದಿಗೆ ಕಾಲ ಕಳೇದರು. ಗ್ರಾಮಕ್ಕೆ ಹೊಂದಿಕೊಂಡಿರುವ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿ ಬಹುತೇಕ ವಾಹನಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆಯವರು, ಪುರಸಭೆ, ಪೋಲಿಸ್ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸಿದರು.
ಈ ಸಂದರ್ಭಲ್ಲಿ ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗಳಖೋಡ, ಪಿ.ಎನ್ ಭೋವಿ, ಪುರಸಭೆ ಸದಸ್ಯ ಆನಂದ ಟಪಾಲದಾರ, ಅನ್ವರ ನದಾಫ್, ಸಿದ್ದು ಗಡ್ಡೆಕರ, ಬಸು ಝಂಡೇಕುರುಬರ, ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪೋಲಿಸ್ ಸಿಬ್ಬಂದಿ ಹಾಜರಿದ್ದರು.
ವರದಿ:ಕೆ.ವಾಯ್ ಮೀಶಿ