Breaking News
Home / ತಾಲ್ಲೂಕು (page 197)

ತಾಲ್ಲೂಕು

ಬಸವ್ವ ಬಾಳಪ್ಪ ಸಂಗಟಿ. ನಿಧನ

ನಿಧನ ವಾರ್ತೆ ಬಸವ್ವ ಬಾಳಪ್ಪ ಸಂಗಟಿ ಮೂಡಲಗಿ:ಸಮೀಪದ ಕಲ್ಲೋಳಿ ಪಟ್ಟಣದ ಬಸವ್ವ ಬಾಳಪ್ಪ ಸಂಗಟಿ (60) ಗುರುವಾರ (ಮೇ-27) ರಂದು ಆಕಸ್ಮಿಕವಾಗಿ ನಿಧನ ಹೊಂದಿದರು, ಮೃತರಿಗೆ ಪತಿ, ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.

Read More »

 ಸೋಕಿತರಿಗೆ ನೆರವಾದ ಜನಹಿತ ಟ್ರಸ್ಟ್  ನಿತ್ಯವೂ ಕುಲಗೋಡ ಕೋವಿಡ್ ಕೇಂದ್ರದ ರೋಗಿಗಳಿಗೆ ಮೂರು ಹೊತ್ತು ಊಟ ಉಪಹಾರ

 ಸೋಕಿತರಿಗೆ ನೆರವಾದ ಜನಹಿತ ಟ್ರಸ್ಟ್  ನಿತ್ಯವೂ ಕುಲಗೋಡ ಕೋವಿಡ್ ಕೇಂದ್ರದ ರೋಗಿಗಳಿಗೆ ಮೂರು ಹೊತ್ತು ಊಟ ಉಪಹಾರ  ಕುಲಗೋಡ: ಕೋವಿಡ್ ಸೊಂಕಿತರು ಇದ್ದರೆ ಅದೇ ಕುಟುಂಬದ ಸದಸ್ಯರು ಊಟ ಉಪಹಾರವನ್ನು ಆಸ್ಪತ್ರೆ ಬಾಗಿಲಲ್ಲಿ ಇಟ್ಟು ಹೋಗುತ್ತಿರುವ ಹಾಗೂ ಮನೆಯಲ್ಲಿ ಸೊಂಕಿತರಿದ್ದರೆ ಅವರ ರೂಮ್ ಮುಂದೆ ಊಟ ಉಪಹಾರ ಇಡುತ್ತಿರುವ ಇಂದಿನ ದಿನಗಳಲ್ಲಿ ಮುಧೋಳ ಜನ ಹಿತ ಟ್ರಸ್ ಸೊಂಕಿತರ ಸ್ನೇಹಿಯಾಗಿ ಅವರು ಚಿಕಿತ್ಸೆ ಪಡೆಯುತ್ತಿರುವ ಸ್ಥಳಕ್ಕೆ ಹೋಗಿ ಊಟ ಉಪಹಾರ …

Read More »

ಕರೊನಾ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಫಾಗಿಂಗ್

ಬೆಟಗೇರಿ:ಮಹಾಮಾರಿ ಕರೊನಾ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಪಂ ಸಿಬ್ಬಂದಿ ಅವರು ಕಳೆದೊಂದು ವಾರದಿಂದ ಗ್ರಾಮದ ಪ್ರಮುಖ ಸ್ಥಳ, ಓಣಿಗಳಲ್ಲಿ ಆಗಾಗ ಫಾಗಿಂಗ್ ಮಾಡುತ್ತಿರುವ ಕಾರ್ಯ ನಡೆದಿದೆ. ಸ್ಥಳೀಯ ಸಾರ್ವಜನಿಕರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು. ಕರೊನಾ ವೈರಸ್ ಹರಡದಂತೆ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು. ಲಾಕ್‍ಡೌನ್ ಸಮಯದಲ್ಲಿ ಅನವಶ್ಯಕವಾಗಿ ಸ್ಥಳೀಯರು ತಿರುಗಾಡಬಾರದು ಎಂದು ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಸ್ಥಳೀಯರಿಗೆ …

Read More »

ಮೂಡಲಗಿ ತಾಲೂಕಿನ ರೈತ ಸಂಘ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳು ವಾಪಸ ಪಡೆಯಬೇಕೆಂದು ಆಗ್ರಹ

ಮೂಡಲಗಿ: ದಿಲ್ಲಿಯಲ್ಲಿ ಕೃಷಿ ಮಸೂದ್ದೆ ವಾಪಸ ಪಡೆಯಬೇಕೆಂದು ಆಗ್ರಹಿಸಿ ಹೋರಾಟ ಪ್ರಾರಂಭವಾಗಿ ಆರು ತಿಂಗಳ ಪುರೈಸಿದ ಹಿನ್ನಲೇಯಲ್ಲಿ ಪಟ್ಟಣ ಉಪ ಕೃಷಿ ಉತ್ಪನ ಮಾರುಕಟ್ಟೆ ಮುಂದೆ ಮೂಡಲಗಿ ತಾಲೂಕಿನ ರೈತ ಸಂಘದವರು ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳು ವಾಪಸ ಪಡೆಯಬೇಕೆಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ್ ಅಂಗಡಿ ಮಾತನಾಡಿ ಕಳೆದ ಆರು ತಿಂಗಳನಿನಿಂದ ದಿಲ್ಲಿಯಲ್ಲಿ ನಿರಂತರವಾಗಿ ರೈತ …

Read More »

ಸೋಂಕಿತರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಉಪವಿಭಾಗಾಧಿಕಾರಿ ಡಾ. ಶಶಿಧರ ಬಗಲಿ

ಸೋಂಕಿತರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಉಪವಿಭಾಗಾಧಿಕಾರಿ ಡಾ. ಶಶಿಧರ ಬಗಲಿ ಗೋಕಾಕ: ಸಮೀಪದ ಬಳೋಬಾಳ ಗ್ರಾಮದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೊಂಕಿತರನ್ನು ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ. ಶಶಿಧರ ಬಗಲಿ ಭೇಟಿ ಮಾಡಿ ದೈರ್ಯ ತುಂಬುವ ಕಾರ್ಯವನ್ನು ಮಾಡಿದರು. ಕೊರೋನಾ 2ನೇ ಅಲೆ ಅತಿ ವೇಗವಾಗಿ ಹರಡುತ್ತಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಆದರೂ ಕೂಡಾ ಜನರು ಕೋರೋನಾ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ತೋರುತ್ತಿದ್ದಾರೆ. …

Read More »

ಕೋರೋನಾ ರಕ್ಷಣಾ ಕಿಟಗಳನ್ನು ಬುಧವಾರದಂದು ಶಾಸಕರ ಕಾರ್ಯಾಲಯದ ಆವರಣದಲ್ಲಿ ವಿತರಣೆ

ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರು ವೈಯಕ್ತಿಕವಾಗಿ ಗೋಕಾಕ ಮತಕ್ಷೇತ್ರದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತ್, ನಗರಸಭೆ, ಪುರಸಭೆ, ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾನಿಟೈಜರ , ಮಾಸ್ಕ, ಹ್ಯಾಂಡ್ ಗ್ಲೋಜ್, ಫೇಸ ಸೀಲ್ಡಗಳನೊಳಗೊಂಡ ಕೋರೋನಾ ರಕ್ಷಣಾ ಕಿಟಗಳನ್ನು ಬುಧವಾರದಂದು ತಮ್ಮ ಕಾರ್ಯಾಲಯದ ಆವರಣದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಸುರೇಶ ಸನದಿ, ಲಕ್ಷೀಕಾಂತ ಎತ್ತಿನಮನಿ, ಕೆಂಪಣ್ಣ ಮೈಲನ್ನವರ …

Read More »

ರಸಗೋಬ್ಬರದ ದಾಸ್ತಾನು ಮಾಡಲು ಕೃಷಿ ಇಲಾಖೆಗೆ ನೀಡಿದ ನಿರ್ದೇಶನದಂತೆ ದಾಸ್ತಾನವಿದ್ದು, ರೈತರು ಕೃಷಿ ಇಲಾಖೆಯಿಂದ ಪಡೆದು ಹೆಚ್ಚಿನ ಇಳುವರಿ ಪಡೆಯಿರಿ- ಶಾಸಕ ರಮೇಶ ಜಾರಕಿಹೊಳಿ

ಗೋಕಾಕ: ಮುಂಗಾರ ಹಂಗಾಮಿಗಾಗಿ ರೈತರಿಗೆ ಬಿತ್ತನೆ ಬೀಜಗಳು ಅವಶ್ಯಕತೆಗಣುನವಾಗಿ ಹಾಗೂ ರಸಗೋಬ್ಬರದ ದಾಸ್ತಾನು ಮಾಡಲು ಕೃಷಿ ಇಲಾಖೆಗೆ ನೀಡಿದ ನಿರ್ದೇಶನದಂತೆ ದಾಸ್ತಾನವಿದ್ದು, ಅದನ್ನು ರೈತರು ಕೃಷಿ ಇಲಾಖೆಯಿಂದ ಪಡೆದು ಹೆಚ್ಚಿನ ಇಳುವರಿ ಪಡೆಯುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬುಧವಾರದಂದು ನಗರದ ತಮ್ಮ ಕಛೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಯಾವುದೇ ರೀತಿಯ ತೊಂದರೆಗಳಾದಂತೆ ಗಮನ ಹರಿಸಲು …

Read More »

ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಸೋಂಕಿತರಿಗೆ ವ್ಯವಸ್ಥಿತ ಚಿಕಿತ್ಸೆ ನೀಡಿದರೆ ಕೊರೋನಾ ತಡೆಗಟ್ಟಲು ಸಾಧ್ಯ – ಶಾಸಕ ರಮೇಶ ಜಾರಕಿಹೊಳಿ

ಗೋಕಾಕ: ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ಇಳಿಮುಖ ವಾಗಲು ವೈದ್ಯರ ಪಾತ್ರ ಬಹುಮುಖ್ಯವಾಗಿದ್ದು, ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಸೋಂಕಿತರಿಗೆ ವ್ಯವಸ್ಥಿತ ಚಿಕಿತ್ಸೆ ನೀಡಿದರೆ ಕೊರೋನಾ ತಡೆಗಟ್ಟಲು ಸಾಧ್ಯ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬುಧವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಭೆಯನ್ನು ನಡೆಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮೊದಲಿಗಿಂತ ಕೊರೋನಾ ಪ್ರಕರಣಗಳಲ್ಲಿ ಭಾರಿ ಇಳಿಮುಖ ಕಂಡಿದ್ದು, ಗ್ರಾಮೀಣ ಭಾಗದಲ್ಲಿ ಸೋಂಕಿನ ಲಕ್ಷಣಗಳನ್ನು ಕಂಡುಬಂದರೆ ಕೂಡಲೇ ಸಮೀಪದ …

Read More »

ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಪಿಡಿಓಗಳು ಪೀಲ್ಡ್‍ಗಿಳಿದು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು – ಮಾಜಿ ಸಚಿವ ಶಾಸಕ ರಮೇಶ ಜಾರಕಿಹೊಳಿ

ಗೋಕಾಕ: ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಪಿಡಿಓಗಳು ಪೀಲ್ಡ್‍ಗಿಳಿದು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸಚಿವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬುಧವಾರದಂದು ನಗರದ ತಾಲೂಕಾ ಪಂಚಾಯತ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪಿಡಿಓಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಸಂಘಟಿತವಾಗಿ ಕಾರ್ಯಮಾಡಿದರೆ ಕರೋನಾ ಚೈನ ಬ್ರೇಕ್ ಮಾಡಬಹುದು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುಧ್ಧ ಕಠಿಣ ಕ್ರಮ ಜರುಗಿಸಲಾಗುವದೆಂದು ಎಚ್ಚರಿಕೆ ನೀಡಿದರು. ಗ್ರಾಮದಲ್ಲಿ ಒಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ …

Read More »