ಬೆಳಗಾವಿ: ರವಿವಾರದ ಮಧ್ಯಾಹ್ನದ ಕರ್ನಾಟಕ ಆರೋಗ್ಯ ಇಲಾಖೆ ಕೊರೋನಾ ಬುಲೆಟಿನ್ ಬಿಡುಗಡೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಯಾರಿಗೂ ಸೋಂಕು ದೃಢ ಪಟ್ಟಿಲ್ಲ. ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ೪೨ ಕ್ಕೆಉಳಿದಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಹಾವಳಿ ಆರಂಭವಾದಾಗಿನಿಂದ ಈವರೆಗೆ 749 ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ನಿನ್ನೆಯ ವರದಿ ಪ್ರಕಾರ 171 ಜನ ಶಂಕಿತರ ರಿಪೋರ್ಟ್ ಬರಬೇಕಿತ್ತು. ಒಟ್ಟು ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ೩೮೮ …
Read More »ಕಲೆಯಲ್ಲಿ ಕೊರೋನಾ ಜಾಗೃತಿ
ಕಲೆಯಲ್ಲಿ ಕೊರೋನಾ ಜಾಗೃತ ಮೂಡಲಗಿ: ಕೊರೋನಾ ಸಾಂಕ್ರಾಮಿಕ ಕಾಇಲೆ ನಿಯಂತ್ರಿಸಲು ನಾನಾ ರೀತಿಯ ಜಾಗೃತಿಗಳು ನಡೆಯುತ್ತಿವೆ ಆ ನಿಟ್ಟಿನಲ್ಲಿ ಸ್ಥಳೀಯ ಮೂಡಲಗಿ ಶಿಕ್ಷಣ ಸಂಸ್ಥೆಯ ಫ್ರೌಡ ಶಾಲೆಯ ಚಿತ್ರಕಲಾ ಶಿಕ್ಷಕ ಎಸ್.ಎಸ್.ಕುರಣೆ ಅವರು ತಮ್ಮ ಕುಂಚದಿಂದ ವಿಷೇಷ ರೀತಿಯ ಚಿತ್ರ ಬಿಡಿಸಿ ಜಾಗೃತಿ ಮೂಡಿಸಿದ್ದಾರೆ. ಚಿತ್ರದಲ್ಲಿ ಮನೆ ರಚಿಸಿ ಹೊರಗೆ ಇದೆ ಕೊರೋನಾ ನಾವೆಲ್ಲಾ ಮನ್ಯಾಗ ಇರೋಣ ಎಂದು ಬರೆದು. ಮನೆಯಲ್ಲೆ ಸುರಕ್ಷಿತರಾಗಿರೋಣ ಎಂಬ ಸಂದೇಶ ನೀಡಿದ್ದಾರೆ.
Read More »ಪ್ರಮುಖ ಸುದ್ದಿ ಮದ್ಯ ಮಾರಾಟ ಬೇಡವೇ ಬೇಡ : ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ, (ಏ.18): ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಯಾವುದೇ ಕಾರಣಕ್ಕೂ ಅದು ಸಮುದಾಯಕ್ಕೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಹೆಚ್ಚು ಮಾದರಿಗಳ ಪರಿಶೀಲನೆಗೆ ಅಗತ್ಯವಿರುವ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಬೆಳಗಾವಿ ಜಿಲ್ಲೆಗೂ ಒದಗಿಸಲು ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು. ಕೋವಿಡ್ -19 ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಶನಿವಾರ (ಏ.18) ಅಧಿಕಾರಿಗಳ ಜತೆ ಅವರು ಚರ್ಚೆ ನಡೆಸಿದರು. ಕ್ವಾರಂಟೈನ್ …
Read More »ಬೆಳಗಾವಿಯಲ್ಲಿ ಮತ್ತೊಂದು ಕೊರೊನಾ ಸೋಂಕು ಪತ್ತೆ..ಬೆಚ್ಚಿ ಬಿದ್ದ ಕುಂದಾನಗರಿ ಜನ
ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಮತ್ತೊಂದು ಕೊರೊನಾ ಸೋಂಕು ಪತ್ತೆಯಾಗಿದ್ದು. ಹಿರೇಬಾಗೇವಾಡಿಯ ವ್ಯಕ್ತಿಯಲ್ಲಿ ಸೋಂಕು ದೃಢವಾಗಿದೆ. ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದ್ದು ಸಧ್ಯ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹಿರೇಬಾಗೇವಾಡಿಯ 45 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈತನಿಗೆ 128ನೇ ಸೋಂಕಿತ ವ್ಯಕ್ತಿಯಿಂದ ಕೊರೊನಾ ಸೋಂಕು ಹರಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
Read More »ಕೊರೋನಾ,ಕರ್ತವ್ಯ ನಿರತರಿಗೆ ಪುರಿ,ಪಲ್ಯ ಊಟ ಬಡಿಸಿದ ಶ್ರೀನಾಥ
ಮೂಡಲಗಿ: ಕೊರೋನಾ ಸೋಂಕು ತಡೆಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೋಲಿಸ ಇಲಾಖೆ,ವೈದ್ಯಕೀಯ ಸೇವಾ ಸಿಬ್ಬಂದಿ,ಆಶಾ ಕಾರ್ಯಕರ್ತೆಯರು,ಪುರಸಭೆ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಪಟ್ಟಣದ ಹೃದಯ ಸಿರಿವಂತ ಜನತೆ ದಿನಕ್ಕೊಬ್ಬರಂತೆ ವಿವಿಧ ಬಗೆಯ ಭೋಜನ ಉಣ ಬಡಿಸುತ್ತಿರುವುದು,ನೀರು ಪೊರೈಸುತ್ತಿರುವುದು ಶ್ಲಾಘನೀಯ ಎನ್ನುವುದಕ್ಕಿಂತ ಮಾನವೀಯತೆಗೆ ಮಾದರಿಯಾಗುತ್ತಿದ್ದಾರೆ ಆ ಸಾಲಿನಲ್ಲಿ ಇಲ್ಲಿಯ ಡಿ.ಕೆ.ಶಿವಕುಮರ ಅಸೋಸಿಯೇಷನ್ ಬೆಳಗಾವಿ ಜಿಲ್ಲಾದ್ಯಕ್ಷ ಶ್ರೀನಾಥ ಕರಿಹೊಳಿ ಎಂಬ ಯುವಕ ಸೇವಾ ನಿರತರಿಗೆ ಪುರಿ,ಪಲ್ಯ,ಮೈಸೂರು ಪಾಕ್ ಉಣಬಡಿಸಿ, “ಕೊರೋನಾ ಮಹಾಮಾರಿಯಿಂದ ಪರದಾಡಿತ್ತಿರುವ ಕೂಲಿ …
Read More »ಲಾಕ್ ಡೌನ್ ಬಂದೋಬಸ್ತಿಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು
ಬೆಳಗಿನ ಜಾವ ಮನೆಯಿಂದ ಠಾಣೆಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು …. ಬೆಳಗಾವಿ- ಬೆಳಗಿನ ಜಾವ ಮನೆಯಿಂದ ಕರ್ತವ್ಯ ನಿಭಾಯಿಸಲು ಠಾಣೆಗೆ ಬರುತ್ತಿದ್ದ ಬೆಳಗಾವಿಯ ಖಡೇಬಝಾರ್ ಠಾಣೆಯ ಪಿ ಎಸ್ ಐ ಗಣಾಚಾರಿ ಬೈಕ್ ಸ್ಕೀಡ್ ಆಗಿ ಬಿದ್ದು ಸ್ಥಳದಲ್ಲೇ ಸಾವನ್ನೊಪ್ಪಿದ್ದಾರೆ. ಬೆಳಗಾವಿ ಮಹಾನಗರದಲ್ಲಿ ಲಾಕ್ ಡೌನ್ ಬಿಗಿಗೊಳಿಸಲು ಬೆಳಗಿನ ಜಾವದಿಂದಲೇ ಬೆಳಗಾವಿ ಪೋಲೀಸರು ಲಾಕ್ ಡೌನ್ ಬಿಗಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು ಯಳ್ಳೂರ ರಸ್ತೆಯ ನಿವಾಸಿಯಾಗಿದ್ದ ಖಡೇಬಝಾರ್ …
Read More »ಪೋಲಿಸ್ ಇಲಾಖೆಯ ಹದ್ದಿನ ಕಣ್ಣು ಮೂಡಲಗಿಯಲ್ಲಿ ಜನಸಂದಣಿ ನಿಯಂತ್ರಿಸಲು ಡ್ರೋಣ ಕ್ಯಾಮರಾದಿಂದ ನಿಗಾ
ಮೂಡಲಗಿ : ಪಟ್ಟಣದಲ್ಲಿ ಕೆಲವರು ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮನೆಯಿಂದ ವಿನಾಕಾರಣ ಹೊರಗೆ ಬಂದು ಅನ್ಯರ ಜೀವದೊಂದಿಗೆ ಚೆಲ್ಲಾಟ ನಡೆಸಿದ್ದು, ಪೋಲಿಸರು ಮತ್ತು ಪುರಸಭೆಯವರು ಸಾಕಷ್ಟೂ ಮುಂಜಾಗೃತ ಕ್ರಮ ಕೈಗೊಂಡಿದ್ದರು ಜನರು ಹೊರಗೆ ಬರುತ್ತಿರುವದರಿಂದ ಮೂಡಲಗಿ ಪಟ್ಟಣದಲ್ಲಿ ಇಂದು ಮನೆಯಿಂದ ಹೊರಗೆ ಬರುವವರ ಮೇಲೆ ನಿಗಾವಹಿಸಲು ಮೂಡಲಗಿ ಪೋಲಿಸರು ಡ್ರೋಣ ಕ್ಯಾಮರಾ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗವಿ ಜಿಲ್ಲೆಯಲ್ಲಿ ಹೆಚ್ಚಾಗಿ ಕೊರೋನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ …
Read More »ಹಳ್ಳೂರ : ಗ್ರಾಮದ ಜನರ ಮೇಲೆ ಹದ್ದಿನ ಕಣ್ಣು
ಹಳ್ಳೂರ : ಬೆಳಗಾವಿ ಜಿಲ್ಲೆಯಲ್ಲಿ ಮತ್ತೇ ಗುರುವಾರ 17 ಜನರಿಗೆ ಕರೋನಾ ಸೋಂಕು ದೃಢಪಟ್ಟಿದ್ದರಿಂದ ಬೆಳಗಾವಿ ಜಿಲ್ಲೆಯನ್ನು ಹೈ-ಅಲರ್ಟ ಘೋಷಿಸಲಾಗಿದೆ. ಗ್ರಾಮದಲ್ಲಿ ಮನೆಯಿಂದ ಹೊರಗೆ ಬರುವವರ ಮೇಲೆ ಡ್ರೋಣ ಕ್ಯಾಮರಾ ಮೂಲಕ ಹದ್ದಿನ ಕಣ್ಣು ಇಡಲಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್ ವೈ ತಾಳಿಕೋಟಿ ಹಾಗೂ ಗ್ರಾಮದ ಬೀಟ್ ಪೋಲಿಸ್ ಎನ್ ಎಸ್ ಒಡೆಯರ್ ತಿಳಿಸಿದರು ಕೆಲವರು ಲಾಕ್ ಡೌನ್ ಆದೇಶ ಉಲ್ಲಂಘಿಸಿ ಅನ್ಯರ ಜೀವನದೊಂದಿಗೆ ಚೆಲ್ಲಟ ನಡೆಸಿದ್ದು, …
Read More »ಬೆಳಗಾವಿಯಲ್ಲಿ ಮತ್ತೆ 5 ಜನರಲ್ಲಿ ಕೊರೊನಾ ಸೋಂಕು
ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಇಂದು ಹೊಸದಾಗಿ ಮತ್ತೆ 44 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 5 ಹೊಸ ಕೊರೊನ ಸೋಂಕಿತರ ಪ್ರಕರಣ ಕಂಡುಬಂದಿದ್ದು, ಇವರಲ್ಲಿ ಮೂವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಒಟ್ಟೂ 41 ಜನರಿಗೆ ಸೋಂಕು ತಗುಲಿದಂತಾಗಿದೆ. ಬೆಂಗಳೂರಿನಲ್ಲಿ 1 ಹೊಸ ಪ್ರಕರಣ ಪತ್ತೆಯಾಗಿದೆ. ಬೆಳಿಗ್ಗೆಯಷ್ಟೇ ರಾಜ್ಯದಲ್ಲಿ 38 ಪ್ರಕರಣ …
Read More »ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ 2 ಟಿಎಮ್‌ಸಿ ನೀರು
ಗೋಕಾಕ: ಸಾರ್ವಜನಿಕರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದ ಮೂಲಕ ಘಟಪ್ರಭಾ ಬಲದಂಡೆ ಕಾಲುವೆಗೆ ಗುರುವಾರ ಸಂಜೆಯಿಂದ ಮುಂದಿನ ೧೦ ದಿನಗಳ ವರೆಗೆ ನೀರನ್ನು ಹರಿಸಲಾಗುತ್ತಿದೆ ಎಂದು ಕೆ. ಎಮ್. ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ೨ ಟಿಎಂಸಿ ಮತ್ತು ಸಿಬಿಸಿ ಕಾಲುವೆಗೆ ೫೫೦೦ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. …
Read More »