ಮೂಡಲಗಿ: ತಾಲೂಕಿನ ಪಿ.ಜಿ.ಹುಣಶ್ಯಾಳ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಮೊಹರಮ್ ಹಬ್ಬದ ಪ್ರಯುಕ್ತ ವಿವಿಧ ಜಾನಪದ ತಂಡಗಳಿಂದ ಕರ್ಬಲ್ ಮತ್ತು ರಿವಾಯತ್ ಪದಗಳ ಹಾಗೂ ಭಜಂತ್ರಿ ಕಲಾವಿದರಿಂದ ಶಹನಾಯಿ ವಾದನ ಕಾರ್ಯಕ್ರಮ ಜರುಗಿತು. ಪ್ರತಿ ವರ್ಷ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂದವರು ಭಾವೈಕ್ಯತೆಯಿಂದ ಮೊಹರಂ ಹಬ್ಬ ಆಚರಿಸುವ ವಾಡಿಕೆ. ಮೊಹರಂ ಕತ್ತಲ ರಾತ್ರಿ ಅಂಗವಾಗಿ ನಡೆದ ಕರ್ಯಕ್ರಮದಲ್ಲಿ ಲೇಜಿಮ್,ಹಲಗಿ ಕುಣಿತದೊಂದಿಗೆ ಹಾಡುಗಳ ಸ್ಪರ್ದೆಯಲ್ಲಿ ಮೂಡಲಗಿಯ ಎರಡು ಹಾಗೂ ಹುಣಶ್ಯಾಳ …
Read More »ಮೂಡಲಗಿಯ ಸಹಕಾರಿಯ ಸಿರಿ ‘ದಿ. ಮೂಡಲಗಿ ಕೋ.ಆಪರೇಟಿವ ಬ್ಯಾಂಕ್
ಮೂಡಲಗಿಯ ಸಹಕಾರಿಯ ಸಿರಿ ‘ದಿ. ಮೂಡಲಗಿ ಕೋ.ಆಪರೇಟಿವ ಬ್ಯಾಂಕ್’ ಮೂಡಲಗಿ: ದಿ. ಮೂಡಲಗಿ ಕೋ. ಆಪ್‍ರೇಟಿವ ಬ್ಯಾಂಕ್ ಲಿ. ಇದರ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತಿ ಪೂಜೆಯು ಆ. 10 ಬುಧವಾರ ಬೆಳಿಗ್ಗೆ 10ಕ್ಕೆ ಜರುಗಲಿದೆ. ಪೂಜಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂಡಲಗಿ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಅರಭಾವಿಯ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಸಿದ್ದಲಿಂಗ ಸ್ವಾಮೀಜಿ, ಸುಣಧೋಳಿಯ …
Read More »ಶಂಕ್ರೆಪ್ಪ ಗಂಗಪ್ಪಾ ತಿಪ್ಪಿಮನಿ ನಿಧನ
ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ನಿವಾಸಿ ಶಂಕ್ರೆಪ್ಪ ಗಂಗಪ್ಪಾ ತಿಪ್ಪಿಮನಿ (90) ಇವರು ಸೋಮವಾರ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು. ಮೂವರು ಪುತ್ರಿಯರು ಹಾಗೂ ಮೊಮ್ಮಕಳು, ಮರಿಮೊಮ್ಮಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
Read More »ಶತಾಯುಷಿ ಭೀಮವ್ವ ರಂಗಪ್ಪ. ಬಿ.ಪಾಟೀಲ್ ನಿಧನ
ಮೂಡಲಗಿ : ತಾಲ್ಲೂಕಿನ ತಿಗಡಿ ಗ್ರಾಮದ ಉಪ್ಪಾರ ಸಮಾಜದ ಹಿರಿಯ ಜೀವ, ಶತಾಯುಷಿ ಭೀಮವ್ವ ರಂಗಪ್ಪ. ಬಿ.ಪಾಟೀಲ್ (೧೦೧) ಅವರು ಸೋಮವಾರದಂದು ನಿಧನರಾದರು. ಮೃತರಿಗೆ ಗುತ್ತಿಗೆದಾರ ವಾಯ್. ಆರ್. ಬಿ.ಪಾಟೀಲ್ ಸೇರಿ ಐದು ಜನ ಮಕ್ಕಳು, ಮೂವರು ಪುತ್ರಿಯರು, ೭೬ ಜನ ಮೊಮ್ಮಕ್ಕಳು, ಮರಿ ಮಕ್ಕಳು, ಗಿರಿ ಮಕ್ಕಳು ಸೇರಿದಂತೆ ಅಪಾರ ಬಂಧು- ಬಳಗವಿದೆ. ಮೃತರ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು …
Read More »ಆ.10ರಂದು ಮೂಡಲಗಿ ಕೋ. ಆಪ್ ಬ್ಯಾಂಕ್ ನೂತನ ಕಟ್ಟಡದ ವಾಸ್ತುಶಾಂತಿ
ಮೂಡಲಗಿ: ಇಲ್ಲಿಯ ದಿ. ಮೂಡಲಗಿ ಕೋ.ಆಪರೇಟಿವ ಬ್ಯಾಂಕ್ ಲಿ. ದ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತಿ ಪೂಜೆಯು ಆ. 10 ಬುಧವಾರ ಬೆಳಿಗ್ಗೆ 10ಕ್ಕೆ ಜರುಗಲಿದೆ. ಪೂಜಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂಡಲಗಿ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಅರಭಾವಿಯ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಸಿದ್ದಲಿಂಗ ಸ್ವಾಮೀಜಿ, ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ. …
Read More »ಶಿಕ್ಷಕರು ಸಂಸ್ಕøತಿಯ ರಾಯಭಾರಿಗಳಾಗಬೇಕು: ಶಿವಲಿಂಗ ಸಿದ್ನಾಳ
ಮೂಡಲಗಿ: ಶಿಕ್ಷಕರು ಮಕ್ಕಳಿಗೆ ನಾಲ್ಕು ಅಕ್ಷರ ಕಡಿಮೆ ಕಲಿಸಿದರೂ ಪರವಾಗಿಲ್ಲ ಸಂಸ್ಕಾರ ಕಲಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಮಹಾಲಿಂಗಪೂರ ಕೆ.ಎಲ್.ಇ ಪಿಯು ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು. ತಾಲೂಕಿನ ಅವರಾದಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಸ್ಫರ್ಧೆಗಳು ಹಗು ಸಾಂಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಕಂಡು ಪ್ರತಿಭೆಯನ್ನು ಪೆÇ್ರೀತ್ಸಾಹಿಸಿ ಮಕ್ಕಳ ಭವಿಷ್ಯತ್ತು …
Read More »ಚೈತನ್ಯ. ಶಾಲೆಯಲ್ಲಿ “ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಉದ್ಘಾಟನೆ
“ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮ ಶನಿವಾರ ರಂದು ಚೈತನ್ಯ ಆಶ್ರಮ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಬೆಟಗೇರಿಯ ಪ್ರೌಢಶಾಲೆಯ ರಮೇಶ ಅಳಗುಂಡಿ ಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಆಧುನಿಕ ಕೃಷಿ ಪದ್ದತಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಬಳಸಿ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯುವ ಕುರಿತು ಸಲಹೆ ನೀಡಿದರು. ಗುರ್ಲಾಪೂರ ಪ್ರೌಢಶಾಲಾ ವಿಜ್ಞಾನ ಶಿಕ್ಷಕ ರಾದ ಶಿವಲಿಂಗ ಅರಗಿ ಯವರು ಮಾತನಾಡುತ್ತಾ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿರುವ …
Read More »ಖಾಲಿ ಇರುವ 30 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ
ಮೂಡಲಗಿ : ಶಿಶು ಅಭೀವೃದ್ದಿ ಯೋಜನೆ ಅರಭಾವಿ ವ್ಯಾಪ್ತಿಯಲ್ಲಿ ಖಾಲಿ ಇರುವ 30 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಸಿಡಿಪಿಒ ಯಲ್ಲಪ್ಪ ಗದಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರಭಾವಿ ವ್ಯಾಪ್ತಿಯ ಹುಣಶ್ಯಾಳ ಪಿ.ಜಿ ಮುಂಜೋಜಿ ತೋಟ, ಬಳೋಬಾಳ ರಾಮಲಿಂಗೇಶ್ವ ಗುಡಿ, ಧರ್ಮಟ್ಟಿ, ಅರಭಾವಿ, ದುರದುಂಡಿ ಸೋಲ್ಲಾಪೂರ ತೋಟ, ಮೂಡಲಗಿ ಲಕ್ಷ್ಮೀ ನಗರ, ಮೂಡಲಗಿ ನಾಗಲಿಂಗನಗರ ಸೇರಿದಂತೆ ಅರಬಾವಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ …
Read More »ಶ್ರೀ ವೇಮನ್ ಸೊಸಾಯಿಟಿಯ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆ
ಮೂಡಲಗಿ: ಸಹಕಾರ ತತ್ವದಡ್ಡಿಯಲ್ಲಿ ಹುಟ್ಟಿದ ವೇಮನ ಸೊಸಾಯಿಟಿಯು ಕಳೆದ 21 ವರ್ಷಗಳ ಕಾಲ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ ಪ್ರಗತಿ ಪಥದತ ಸಾಗುತ್ತಿರುವುದು ಶ್ಲಾಘನಿಯ, ಇನ್ನೂ ಹೆಚ್ಚಿನ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿ ಸಾಮಾನ್ಯ ಜನರಿಗೆ ಹಣಕಾಸಿನ ನೇರವು ನೀಡಿ ಸಾವಲಂಬಿ ಜೀವನ ನಡೆಸಲು ಸಹಕರಿಸ ಬೇಕೆಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಹೇಳಿದರು. ಬುಧವಾರ ಪಟ್ಟಣದಲ್ಲಿ ಜರುಗಿದ ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ …
Read More »ಶ್ರೀ ವೆಂಕಟೇಶ್ವರ ಅರ್ಬನ್ ಕೋ.ಅಪ್ ಸೊಸೈಟಿ ಉದ್ಘಾಟನೆ
‘ಸಂಘ, ಸಂಸ್ಥೆಗಳಲ್ಲಿ ಸಹಕಾರ, ವಿಶ್ವಾಸ ಇದ್ದರೆ ಅಭಿವೃದ್ಧಿ ಇರುತ್ತದೆ’ ಮೂಡಲಗಿ: ‘ಸಂಘ, ಸಂಸ್ಥೆಗಳಲ್ಲಿ ಸಹಕಾರ ಮತ್ತು ಪರಸ್ಪರ ವಿಶ್ವಾಸ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಇರುತ್ತದೆ’ ಎಂದು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಹೇಳಿದರು. ಇಲ್ಲಿಯ ನೂತನ ಶ್ರೀ ವೆಂಕಟೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ಸಂಸ್ಥೆಗಳು ಜನರ ಆರ್ಥಿಕ ಸುಧಾರಣೆ ಜೊತೆಗೆ ಸಂಸ್ಥೆಯು ಬೆಳೆಯಬೇಕು ಎಂದರು. ರಾಘವೇಂದ್ರ ಆಚಾರ್ಯ …
Read More »