ತೊಂಡಿಕಟ್ಟಿಯಲ್ಲಿ ಗಾಳೇಶ್ವರ ಮಠ ಮತ್ತು ಏಮ್ ಫಾರ್ ಸೇವಾ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲಾ ಕಟ್ಟಡ ಉದ್ಘಾಟನೆ ತೊಂಡಿಕಟ್ಟಿ: ಅವಧೂತ ಗಾಳೇಶ್ವರ ಮಹಾಸ್ವಾಮಿಜಿಯವರ ಪುಣ್ಯಾರಾಧನೆ ಹಾಗೂ ಸ್ವಾಮಿ ದಯಾನಂದ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲಾ ಪೂಜ್ಯರ ಉಪಸ್ಥಿತಿಯಲ್ಲಿ ಭಾಗವಹಿಸಿದ್ದು ಖುಷಿ ತಂದಿದೆ. ಈ ಸಂಸ್ಥೆಯಿಂದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉನ್ನತ ಮಟ್ಟದ ಹುದ್ದೆ ಅಲಂಕರಿಸುವುದರಲ್ಲಿ ಸಂಶಯವಿಲ್ಲ ಎಂದು ಚನೈ ಅಖಿಲ ಭಾರತ …
Read More »ಇಂದಿನ ಯುಗದಲ್ಲಿ ಎಷ್ಟು ಓದಿದರೂ ಕಡಿಮೆ:ಬಸವರಾಜ ಪಣದಿ
ಇಂದಿನ ಯುಗದಲ್ಲಿ ಎಷ್ಟು ಓದಿದರೂ ಕಡಿಮೆ:ಬಸವರಾಜ ಪಣದಿ ಬೆಟಗೇರಿ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ ಮಕ್ಕಳಿಗೆ ಸಾಮಾನ್ಯ ಜ್ಞಾನ ಅವಶ್ಯಕವಾಗಿದೆ. ಇಂದು ಶಾಲಾ ಮಕ್ಕಳು ಎಷ್ಟು ಓದಿದರೂ ಕಡಿಮೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಮತ್ತು ಸ್ಥಳೀಯ ಗ್ರಾಪಂ ಗ್ರಂಥಾಲಯ ಸಹಯೋಗದಲ್ಲಿ 75ನೇ ವರ್ಷದ ಸಂವಿಧಾನ ಸಂಭ್ರಮ ದಿನಾಚರಣೆ ಪ್ರಯುಕ್ತ ಸ್ಥಳೀಯ ಸರಕಾರಿ ಪ್ರೌಢ …
Read More »ತೊಂಡಿಕಟ್ಟಿ: ಅವಧೂತೈಕ್ಯ ಪುಂಡಲೀಕ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ
ತೊಂಡಿಕಟ್ಟಿ: ಅವಧೂತೈಕ್ಯ ಪುಂಡಲೀಕ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ತೊಂಡಿಕಟ್ಟಿ: ಎಲ್ಲಕ್ಕಿಂತಲೂ ಗುರುವಿನ ಋಣ ತೀರಿಸ ಬೇಕು, ಗಾಳೇಶ್ವರ ಮಠದ ಪೀಠಾಧಿಪತಿ ವೆಂಕಟೇಶ್ವರ ಮಹಾರಾಜರು ಶ್ರೀಮಠ ಪೀಠಾಧಿಪತಿಗಳಾಗಿ ಅವಧೂತೈಕ್ಯ ಪುಂಡಲೀಕ ಮಹಾರಾಜರ ಶಿಲಾಮಂದಿರವನ್ನು ಭಕ್ತ ಸಮೂಹ ಸಹಕಾರದಿಂದ ಕೇವಲ ಒಂದೆ ತಿಂಗಳಲ್ಲಿ ಸುಂದರವಾದ ಮಂದಿರವನ್ನು ನಿರ್ಮಿಸಿ ಗುರುಗಳ ಋಣವನ್ನು ತೀರಿಸಲು ಪ್ರಯತ್ನಿಸಿರುವುದು ಶ್ಲಾಘನಿಯವಾದದ್ದು ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅವರು ರಾಮದುರ್ಗ ತಾಲೂಕಿನ ತೊಂಡಿಕಟ್ಟಿ …
Read More »ಪ್ರತಿಯೊಬ್ಬರೂ ಭಗವಂತನ ನಾಮಸ್ಮರಣೆ ಮಾಡಿ: ಕೇದಾರ್ ಪೀಠದ ಜಗದ್ಗುರುಗಳು
ಬೆಟಗೇರಿ:ಮನುಷ್ಯ ಜನ್ಮ ಸಾರ್ಥಕವಾಗಲು ಪ್ರತಿಯೊಬ್ಬರೂ ದೇವರ ನಾಮಸ್ಮರಣೆ ಮಾಡಿ, ಭಗವಂತನ ಕೃಪಾರ್ಶೀವಾದಕ್ಕೆ ಪಾತ್ರರಾಗಬೇಕು. ವೃತಾಚರಣೆ ಮೂಲಕ ಶ್ರೀಅಯ್ಯಪ್ಪಸ್ವಾಮಿ ನಾಮಸ್ಮರಣೆಗೈಯುತ್ತಿರುವ ಶ್ರೀಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಉತ್ತರಾಖಂಡ ಶ್ರೀಮದ ಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ರಾವಲ್ ಪದವಿ ವಿಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗತ್ಪಾದರು ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಓಂ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ ಡಿ.27ರಂದು ನಡೆದ …
Read More »ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅವಶ್ಯಕವಾಗಿದೆ : ಎಚ್.ಎನ್.ಬಾವಿಕಟ್ಟಿ
ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅವಶ್ಯಕವಾಗಿದೆ : ಎಚ್.ಎನ್.ಬಾವಿಕಟ್ಟಿ ಬೆಟಗೇರಿ:ಇಂದಿನ ಯುಗದಲ್ಲಿ ಗಣಕಯಂತ್ರಗಳ ಪಾತ್ರ ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಪಿಡಿಒ ಎಚ್.ಎನ್.ಬಾವಿಕಟ್ಟಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ವತಿಯಿಂದ ಸ್ಥಳೀಯ ಗ್ರಾಪಂ ಕಾರ್ಯಾಲಯದ ಸಭಾಭುವನದಲ್ಲಿ ಇತ್ತೀಚೆಗೆ ನಡೆದ ಗಣಕಯಂತ್ರ ಪಿತಾಮಹ ಚಾಲ್ಸ್ ಬ್ಯಾಬೇಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಂಪ್ಯೂಟರ್ ಅಪರೇಟರ್ ದಿನಾಚರಣೆ ನಿಮಿತ್ಯ ಸ್ಥಳೀಯ ಗ್ರಾಪಂ …
Read More »ಪುಣೆ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜನವರಿ 02 ರಿಂದ ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ- ರಾಜ್ಯಸಭಾ ಸಂಸದ ಈರಣ್ಣ ಕಡಾಡಿ
ಮೂಡಲಗಿ: ಪುಣೆ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜನವರಿ 02-2025 ರಿಂದ ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ. ಪುಣೆಯಿಂದ ಮಧ್ಯಾಹ್ನ 02.15 ಕ್ಕೆ ಹೊರಟು ರಾತ್ರಿ 07.38 ಕ್ಕೆ ಘಟಪ್ರಭಾ ನಿಲ್ದಾಣಕ್ಕೆ ಆಗಮಿಸಲಿದೆ. ಈ ಸಂದರ್ಭದಲ್ಲಿ ಘಟಪ್ರಭಾ ರೈಲು ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ರೈಲು ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು. ಜನವರಿ 3 ರಂದು …
Read More »ಸಹಕಾರಿ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಸುಭಾಸ ಢವಳೇಶ್ವರ ಆಯ್ಕೆ*
ಸಹಕಾರಿ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಸುಭಾಸ ಢವಳೇಶ್ವರ ಆಯ್ಕೆ ಮೂಡಲಗಿ: ಇಲ್ಲಿಯ ಮೂಡಲಗಿ ಕೋ.ಆಪ್‌ರೇಟಿವ್ ಬ್ಯಾಂಕ್‌ಗೆ ಮುಂದಿನ ಐದು ವರ್ಷಗಳ ಅವಧಿಗೆ ಗುರುವಾರ ಜರುಗಿದ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಭಾಸ ಜಿ. ಢವಳೇಶ್ವರ ಮತ್ತು ಉಪಾಧ್ಯಕ್ಷರಾಗಿ ನವೀನ ಎಂ. ಬಡಗಣ್ಣವರ ಇವರು ಅವಿರೋಧವಾಗಿ ಆಯ್ಕೆಯಾಗಿರುವರು ಎಂದು ಚುನಾವಣಾಧಿಕಾರಿಗಳಾದ ಬೈಲಹೊಂಗಲ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶಾಹೀನ ಅಖತರ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶಿವಲಿಂಗಪ್ಪ …
Read More »ಚುನಾವಣಾ ಕಣದಿಂದ ನಿವೃತ್ತಿ : ಹಳೆ ಪೆನಲ್‍ಗೆ ಬೆಂಬಲ
ಚುನಾವಣಾ ಕಣದಿಂದ ನಿವೃತ್ತಿ : ಹಳೆ ಪೆನಲ್‍ಗೆ ಬೆಂಬಲ ಮೂಡಲಗಿ ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ಇದರ 2024-2029ರ ಚುನಾವಣೆಯಲ್ಲಿ ನಾನು ಶ್ರೀ ಚಂದ್ರಶೇಖರ ಮಲ್ಲಪ್ಪ ಗಾಣಿಗೇರ ಹಿಂದೂಳಿದ (ಅ) ವರ್ಗದಿಂದ ಸ್ಪರ್ಧಿಸಿದ್ದು, ಅನಿವಾರ್ಯ ಕಾರಣ ಗಳಿಂದ ಚುನಾವಣಾ ಕಣದಿಂದ ನಿವೃತ್ತಿ ಹೊಂದಿ ಕಣದಲ್ಲಿರುವ ಶ್ರೀ ಹನುಮಂತ ಯಲ್ಲಪ್ಪ ಪೂಜೇರಿ ಅವರಿಗೆ ಬೆಂಬಲ ಸೂಚಿಸಿರುತ್ತೇನೆ. ನಾನು ಸಹ ಮೂಡಲಗಿ ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ …
Read More »ಆಪತ್ಬಾಂಭವ ಅರ್ಥ ಮಾಂತ್ರಿಕ ಚಿರಮೌನ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ
ಆಪತ್ಬಾಂಭವ ಅರ್ಥ ಮಾಂತ್ರಿಕ ಚಿರಮೌನ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನ ಗೋಕಾಕ: ಆರ್ಥಿಕತೆಯ ಪಿತಾಮಹ, ಜಾಗತಿಕ ಭಾರತದ ಶಿಲ್ಪಿ, ಮಾಜಿ ಪ್ರಧಾನಿ, ಪದ್ಮವಿಭೂಷಣ ಡಾ. ಮನಮೋಹನ ಸಿಂಗ್ ಅವರ ನಿಧನಕ್ಕೆ ಅರಭಾವಿ ಶಾಸಕ ಮತ್ತು ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಡಾ. ಸಿಂಗ್ ಅವರು ದೇಶದ ನಿರ್ಮಾಣಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸೌಮ್ಯ ಸ್ವಭಾವದ, ವಿನಮ್ರತೆಯ ಬುದ್ಧಿ ಜೀವಿಗಳಾಗಿದ್ದ ಅವರು ಭಾರತದ ಉದಾರೀಕರಣದ ಪೀತಾಮಹ ಎನಿಸಿಕೊಂಡಿದ್ದರು. …
Read More »ಡಾ. ಮನ್ ಮೋಹನ್ ಸಿಂಗ್ ಅವರ ನಿಧನಕ್ಕೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂತಾಪ
ಮೂಡಲಗಿ: ಕೇಂದ್ರ ಹಣಕಾಸು ಸಚಿವರಾಗಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ, ಪ್ರಧಾನ ಮಂತ್ರಿಗಳಾಗಿ ಅನೇಕ ಹುದ್ದೆಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿದ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ದೇಶ ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಕಳೆದ 4 ವರ್ಷಗಳಿಂದ ರಾಜ್ಯಸಭೆಯಲ್ಲಿ ಅವರನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರ ಶಾಂತ ಸ್ವಭಾವ , ಜೀವನ ಶೈಲಿ, ರಾಜಕೀಯದ ಹೆಜ್ಜೆಗಳು ಸದಾ ಅನುಕರಣೀಯವಾಗಿದೆ …
Read More »