‘ಬೆಳೆ ಸಮೀಕ್ಷೆ’ ಕುರಿತು ಆನ್‍ಲೈನ್ ತರಬೇತಿ ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ದಿನಾಂಕ ಆ. 21ರಂದು ಬೆಳಿಗ್ಗೆ 11.30ಕ್ಕೆ ‘ಬೆಳೆ ಸಮೀಕ್ಷೆ ಮಹತ್ವ ಮತ್ತು ಆಪ್ ಬಳಕೆ’ ವಿಷಯ ಕುರಿತು ಆನ್‍ಲೈನ್‍ದಲ್ಲಿ ಗೂಗಲ್ ಮೂಲಕ ರೈತರಿಗೆ ಉಪನ್ಯಾಸ ಮತ್ತು ತರಬೇತಿ ಇರುವುದು. ಚಿಕ್ಕೋಡಿಯ ಕೃಷಿ ಉಪನಿರ್ದೇಶಕ ಎಲ್.ಐ. ರೂಢಗಿ ಅವರು ವಿಷಯ ಕುರಿತು ಉಪನ್ಯಾಸ ಮತ್ತು ತರಬೇತಿ ನೀಡುವರು. ರೈತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ಕೃಷಿ …
Read More »2020-21ನೇ ಸಾಲಿನ ಹಂಗಾಮಿನ ಕಬ್ಬಿಗೆ ಎಫ್.ಆರ್.ಪಿ (ಪೇರ್ ಆಂಡ್ಯ ರೆಮ್ಯುನೇಷನ್) ಬೆಲೆ ನಿಗದಿ ಮಾಡಿ – ಈರಣ್ಣ ಕಡಾಡಿ
ಮೂಡಲಗಿ: 2020-21ನೇ ಸಾಲಿನ ಹಂಗಾಮಿನ ಕಬ್ಬಿಗೆ ಎಫ್.ಆರ್.ಪಿ (ಪೇರ್ ಆಂಡ್ಯ ರೆಮ್ಯುನೇಷನ್) ಬೆಲೆ ನಿಗದಿ ಮಾಡುವ ಕುರಿತು ರಾಜ್ಯ ಸಕ್ಕರೆ ಸಚಿವರಾದ ಶಿವರಾಮ ಹೆಬ್ಬಾರ ಅವರನ್ನು ರಾಜ್ಯಸಭಾ ಸದಸ್ಯ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬುಧುವಾರ ಅ-19 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸಕ್ಕರೆ ಸಚಿವರನ್ನು ಭೇಟಿಯಾಗಿ ಬಾಕಿ ಉಳಿದಿರುವ ರೈತರ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಈ …
Read More »ಹಾನಿಕಾರಕ ತ್ಯಾಜ್ಯ ವಸ್ತುಗಳನ್ನು ನದಿಗೆ ಬಿಟ್ಟರೆ ಕಾನೂನು ಕ್ರಮ ರಾಕೇಟ್ ಕಾರ್ಖಾನೆಗೆ ಎಚ್ಚರಿಕೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ನಗರದ ಹೊರವಲಯದಲ್ಲಿರುವ ರಾಕೇಟ್ ಇಂಡಿಯಾ ಲಿ., ಕಾರ್ಖಾನೆಯು ರಾಸಾಯನಿಕಗಳಿಂದ ಕೂಡಿದ ಹಾನಿಕಾರಕ ತ್ಯಾಜ್ಯ ವಸ್ತುಗಳನ್ನು ಮಾರ್ಕಂಡೇಯ ನದಿಗೆ ಬಿಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ನದಿ ತೀರದ ಜಮೀನುಗಳಲ್ಲಿ ರೈತರು ಬೆಳೆದ ಬೆಳೆಗಳು ಹಾನಿಯಾಗುತ್ತವೆ. ಮಾರಕವಾಗುವ ತ್ಯಾಜ್ಯ ವಸ್ತುಗಳನ್ನು ಇನ್ನು ಮುಂದೆ ನದಿಗೆ ಬಿಟ್ಟರೆ ಕಾರ್ಖಾನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಎಚ್ಚರಿಕೆ ನೀಡಿದ್ದಾರೆ. …
Read More »ಮೂಡಲಗಿ ಪಟ್ಟಣದಲ್ಲಿ ಇಂದು ಮತ್ತೆ ಕೊರೋನಾ ಕೇಸ್ ಪತ್ತೆ .
ಮೂಡಲಗಿ ಪಟ್ಟಣದಲ್ಲಿ ಇಂದು 1 ಕೊರೋನಾ ಕೇಸ್ ಪತ್ತೆ . ಮೂಡಲಗಿ: ಪಟ್ಟಣದ 1 ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಪಟ್ಟಣದ ಮಹಿಳೆಗೆ ಸೋಂಕು ದೃಢಪಟ್ಟಿದ್ದುನ್ನು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಕೊರೋನಾ ಕೇಸುಗಳು ಮೂಡಲಗಿ ನಗರಕ್ಕೆ ಒಂದೊಂದಾಗಿ ಹೆಜ್ಜೆಯಿಡುತ್ತಿದ್ದು ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ ಜಾಗೃತಿಯಾಗಬೇಕಾಗಿದೆ. ಇವತ್ತು ಪತ್ತೆಯಾದ ಸೋಂಕಿತರ ಮನೆಯ ಸುತ್ತಮುತ್ತ ಸೀಲ್ ಡೌನ್ …
Read More »ಮೂಡಲಗಿ ಸ್ಮಶಾನದ ತುಂಬೆಲ್ಲ ಕೊರೋನಾ ಪಿಪಿ ಕಿಟ್, ಜನತೆ ಆತಂಕದಲ್ಲಿ !
ಮೂಡಲಗಿ: ಕೋವಿಡ್ 19 ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಶವಸಂಸ್ಕಾರದಲ್ಲಿ ಬಳಸಿದ ಪಿಪಿಇ ಕಿಟ್, ಹ್ಯಾಂಡಗ್ಲೌಜ ಮತ್ತು ಶವಕ್ಕೆ ಪ್ಯಾಕ್ ಮಾಡಿದ ಪ್ಲಾಸ್ಟಿಕ್‍ಗಳು ಸ್ಮಶಾನದಲ್ಲಿ ಕಂಡು ಬಂದಿವೆ ಎಂದು ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ತಿಳಿಸಿದ್ದಾರೆ. ಸ್ಮಶಾನದಲ್ಲಿ ಗಿಡಗಳನ್ನು ಹಚ್ಚಿ ಪೋಷಣೆ ಮಾಡುತ್ತಿರುವ ಈರಪ್ಪ ಢವಳೇಶ್ವರ ಪ್ರತಿದಿನದಂತೆ ನೆಟ್ಟ ಗಿಡಗಳ ವೀಕ್ಷಣೆಗೆ ಹೋದಾಗ ಶವಸಂಸ್ಕಾರ ಮಾಡಿದ ವಸ್ತುಗಳ ಪೋಟೋಗಳನ್ನು ವೈರಲ್ ಮಾಡಿದ್ದಾರೆ. ಈ ಬಗ್ಗೆ ಪತ್ರಿಕೆ ವಿಚಾರಿಸಿದಾಗ ಸೋಂಕಿನಿಂದ ಮೃತಪಟ್ಟವರ …
Read More »ನದಿ ತೀರದ ಗ್ರಾಮಗಳ ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ – ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಮಳೆಯಿಂದಾಗಿ ನೆರೆಯ ಭೀತಿ ಅನುಭವಿಸುತ್ತಿರುವ ಘಟಪ್ರಭಾ ನದಿ ತೀರದ ಗ್ರಾಮಗಳ ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಮಂಗಳವಾರದಂದು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರಾಶ್ರಿತ ಕುಟುಂಬಗಳಿಗೆ ಗಂಜಿ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿರುವುದಾಗಿ ಹೇಳಿದ್ದಾರೆ. ಅಡಿಬಟ್ಟಿ, ಮೆಳವಂಕಿ, ಉದಗಟ್ಟಿ, ಬಳೋಬಾಳ, ಬೀರನಗಡ್ಡಿ, ಮಸಗುಪ್ಪಿ, ವಡೇರಹಟ್ಟಿ, ಹುಣಶ್ಯಾಳ ಪಿಜಿ, ಪಟಗುಂದಿ, …
Read More »ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಉಪಾಧ್ಯಕ್ಷರಾಗಿ ಶ್ರೀನಿವಾಸ ಆಯ್ಕೆ..!
ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಉಪಾಧ್ಯಕ್ಷರಾಗಿ ಶ್ರೀನಿವಾಸ ಆಯ್ಕೆ..! ಬೆಳಗಾವಿ: ನಗರದ ಜನತಾದಳ ಪಕ್ಷದ ಕಾರ್ಯಾಲಯದಲ್ಲಿ ಇಂದು ಪಕ್ಷದ ಹಿರಿಯರು ಹಾಗೂ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಮತ್ತು ಕಾರ್ಯಕರ್ತರ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ಲಮಾಣಿಯವರನ್ನು ಆಯ್ಕೆ ಮಾಡಿ ಆದೇಶ ನೀಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜನತಾದಳದ ರಾಜ್ಯಾದ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆದೇಶದ ಮೇರೆಗೆ ಬೆಳಗಾವಿ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಪಕ್ಷದ ಕಾರ್ಯಕರ್ತರ …
Read More »ರಾಯಣ್ಣ ಅಭಿಮಾನಿಗಳಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು – ಪ್ರಕಾಶ ಮಾದರ
ಮೂಡಲಗಿ: ಬ್ರಿಟೀಷರ ವಿರುದ್ಧ ಅಪ್ರತಿಮವಾಗಿ ಹೋರಾಡಿ ದೇಶಕ್ಕಾಗಿ ತನ್ನ ಅಮೂಲ್ಯ ಪ್ರಾಣವನ್ನೇ ಬಲಿಕೊಟ್ಟ ಸ್ವಾತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣ ನ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸರು ಅನುಮತಿ ನೀಡದೇ ಇದ್ದದ್ದು ಅಕ್ಷಮ್ಯ. ತಕ್ಷಣವೇ ಪೊಲೀಸರು ಮೂರ್ತಿ ಪ್ರತಿಷ್ಠಾಪನೆಗೆ ಕೊಡದಿದ್ದರೆ ಕನ್ನಡ ಪರ ಸಂಘಟನೆಗಳು ಹಾಗೂ ರಾಯಣ್ಣ ಅಭಿಮಾನಿಗಳಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಪ್ರಕಾಶ ಮಾದರ ಹೇಳಿದರು. ಬೆಳಗಾವಿ ಸಮೀಪ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ …
Read More »ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಿದ್ದರಿಂದ ನದಿ ತೀರದ ಗ್ರಾಮಗಳ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ – ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ನೆರೆಯ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಿಡಕಲ್ ಜಲಾಶಯವು ಸಂಪೂರ್ಣ ಭರ್ತಿಯಾಗಿದ್ದು, ಈಗಾಗಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಿದ್ದರಿಂದ ನದಿ ತೀರದ ಗ್ರಾಮಗಳ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಸಂಜೆ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ …
Read More »ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆಗೆ ಅವಮಾನ ಮಾಡಿದ ಜೀಲ್ಲಾಡಳಿತ ಕ್ರಮಕ್ಕೆ ಖಂಡನೆ
ಮೂಡಲಗಿ : ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮೊದಲು ನಾಡಿನ ಸ್ವಾಂತಂತ್ರ್ಯಕ್ಕಾಗಿ ಕಿತ್ತೂರು ಚನ್ನಮ್ಮನ ಬಲಗೈ ಬಂಟನಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಸೇನಾನಿ ಕೆಚ್ಚೇದೆಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆಗೆ ಅವಮಾನ ಮಾಡಿದ ಜೀಲ್ಲಾಡಳಿತ ಕ್ರಮ ಖಂಡಿಸಿ ಹೋರಾಟದ ಮಾರ್ಗ ಹೀಡಿಯಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ಸುರೇಶ ನಾಯ್ಕ ಸರಕಾರವನ್ನು ಒತ್ತಾಯಿಸಿದ್ದಾರೆ. ಅಗಸ್ಟ 15 ರಂದು ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿದ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ …
Read More »