Breaking News
Home / ಬೆಳಗಾವಿ (page 25)

ಬೆಳಗಾವಿ

ಅಧ್ಯಕ್ಷರಾಗಿ ಉಮೇಶ ಶೆಕ್ಕಿ, ಅವಿರೋಧ ಆಯ್ಕೆ

ಮೂಡಲಗಿ : ಇಲ್ಲಿನ ಕಲ್ಮೇಶ್ವರ ವೃತ್ತದ ಬಳಿ ಇರುವ ಪಂಚಮಸಾಲಿ ಸಮಾಜದ ಶ್ರೀ ಬಸವ ಸೇವಾ ಯುವಕ ಸಂಘದ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಉಮೇಶ ಶೆಕ್ಕಿ, ಉಪಾಧ್ಯಕ್ಷರಾಗಿ ಸಿದ್ದು ಹಳಸಿ, ಕಾರ್ಯದರ್ಶಿಯಾಗಿ ಈರಪ್ಪ ಅಡಿಬಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂದು ಸಂಘದ ಮಾಜಿ ಅಧ್ಯಕ್ಷ ಕಲ್ಮೇಶ ಗೋಕಾಕ ಅವರು ತಿಳಿಸಿದ್ದಾರೆ.

Read More »

ರಾಮಪ್ಪ ಯರಗಟ್ಟಿ ನಿಧನ

  ಮೂಡಲಗಿ : ತಾಲೂಕಿನ ಕುಲಗೋಡ ಗ್ರಾಮದ ನಿವಾಸಿ ರಾಮಪ್ಪ ತಿಮ್ಮಣಾ ಯರಗಟ್ಟಿ (75) ಬುಧವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು – ಪಿಎಸ್‍ಐ ರಾಜು ಪೂಜಾರಿ

ಮೂಡಲಗಿ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಬೇಕು ಮೂಡಲಗಿ ಪೋಲೀಸ್ ಠಾಣೆಯ ಪಿಎಸ್‍ಐ ರಾಜು ಪೂಜಾರಿ ಹೇಳಿದರು. ಅವರು ಪಟ್ಟಣದ ಕೆ.ಹೆಚ್.ಸೋನವಾಲಕರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರದಂದು ಜರುಗಿದ ಮಾದಕ ವಸ್ತು ನಿರ್ಮೂಲನೆ ದಿನಾಚರಣೆಯಲ್ಲಿ ಮಾತನಾಡಿ, ಮಾದಕ ಪದಾರ್ಥಗಳನ್ನು ಬಳಸುವುದು, ಮಾರಾಟ ಮಾಡುವುದು ಮತ್ತು ಬಳಸುವವರ ಸಹವಾಸ ಮಾಡುವುದು ಅಪರಾಧ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಾಲೆಯ …

Read More »

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಅನ್ವರ ನದಾಫ, ನಿವೃತ್ತ   ಶಿಕ್ಷಕ ಕೆ.ಆರ್.ಕೊತ್ತಲ, ಶಿವಬಸು ಸುಣಧೋಳಿ, ಬಿ.ಪಿ.ಬಂದಿ, ಆರೋಗ್ಯ ನಿರೀಕ್ಷಕ ಪ್ರೀತಮ ಬೋವಿ, ಅಕ್ಷಯ ಕಂಬಾರ, ಗುತ್ತಿಗೆದಾರ ರಾಜು ಪೂಜೇರಿ ಮತ್ತಿತರರು …

Read More »

ಎಂಜಿನಿಯರಿಂಗ್, ಮೆಡಿಕಲ್ ಪ್ರವೇಶಕ್ಕೆ ವಿದ್ಯಾಪೋಷಕದಿಂದ ಆರ್ಥಿಕ ನೆರವು

ಇಂಜಿನೀಯರಿಂಗ್ ಮತ್ತು ಮೆಡಿಕಲ್ ಪದವಿ ಕಲಿಯಲಿಕ್ಕೆ ಕಳೆದ ವರ್ಷದಲ್ಲಿ ವಿದ್ಯಾಪೋಷಕದಿಂದ ಆರ್ಥಿಕ ಸಹಾಯ ಪಡೆದ ವಿದ್ಯಾರ್ಥಿಗಳು ಮೂಡಲಗಿ: ಧಾರವಾಡದ ವಿದ್ಯಾಪೋಷಕ ಸಂಸ್ಥೆಯು 2025-26ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ಪ್ರವೇಶಕ್ಕೆ ಕರ್ನಾಟಕದ ಅರ್ಹ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ನೀಡಲಿದೆ. ವಿದ್ಯಾರ್ಥಿಗಳು 2024-25ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಶೇ.80ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಇಂಜಿನೀಯರಿಂಗ ಮತ್ತು ಮೆಡಿಕಲ್ ಪದವಿಗಳಿಗೆ ಪ್ರವೇಶ …

Read More »

ಲೆಕ್ಕಪತ್ರದ ಗೊಂದಲಕ್ಕೆ ತೆರೆ

ಮೂಡಲಗಿ : ಇಲ್ಲಿನ ಮುಸ್ಲಿಂ ಸಮಾಜವು ಒಗ್ಗಟ್ಟಿಗೆ ಹೆಸರಾಗಿದ್ದು, ಯಾವುದೇ ಕಾರಣಕ್ಕೂ ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯ ಬೇಡ. ಮಸೀದಿ ಲೆಕ್ಕಪತ್ರದ ಬಗ್ಗೆ ಕೆಲವರಿಗೆ ಗೊಂದಲ ಉಂಟಾಗಿದ್ದು, ಗೊಂದಲಕ್ಕೆ ತೆರೆ ಎಳೆಯೋಣ ಎಂದು ಬಿಟಿಟಿ ಕಮೀಟಿ ಪ್ರಭಾರಿ ಅಧ್ಯಕ್ಷ ಮಲೀಕ ಕಳ್ಳಿಮನಿ ಹೇಳಿದರು. ಸೋಮವಾರದಂದು ಪಟ್ಟಣದ ಜುಮ್ಮಾ ಮಸೀದಿ ಮುಂದೆ ಬಿಟಿಟಿ ಕಮೀಟಿ ಆಯೋಜಿಸಿದ ಕಮೀಟಿಯ ಲೆಕ್ಕಪತ್ರ ಬಗ್ಗೆ ವಿವರಣೆ ನೀಡಲು ಕರೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು,ಜುಮ್ಮಾ ಮಸೀದಿಯ ನೂತನ …

Read More »

ಬೈಕ್ ಗೆ ಲಾರಿ ಡಿಕ್ಕಿ,ಇಬ್ಬರ ಸಾವು

ಮೂಡಲಗಿ: ಸಮೀಪದ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿಯ ಗುರ್ಲಾಪೂರ ಹೊರ ವಲಯದ ಮಾಳತೋಟ ಶಾಲೆ ಹತ್ತಿರ ಬೈಕ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಭಾನುವಾರ ಸಾಯಂಕಾಲ 7.30 ಕ್ಕೆ ಸಂಭವಿಸಿದೆ. ಮೂಡಲಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಬೈಕ್ ಸವಾರರಾದ ಮೂಡಲಗಿಯ ಶ್ರೀಶೈಲ ಯುಹಾನ ಹಾದಿಮನಿ, ರಂಗಾಪೂರ ಗ್ರಾಮದ ಸುರೇಶ ಸತ್ಯಪ್ಪ ಮಾರಾಪೂರ ಮೃತ ದುರ್ದೈವಿಗಳು ಎಂದು ತಿಳಿದು …

Read More »

ವೆಂಕಟಾಪೂರ ಗ್ರಾಮದಕ್ಕೆ ರಾಜ್ಯಸಭೆ ಸದಸ್ಯರಾದ ಈರಣ್ಣ ಕಡಾಡಿ ಭೇಟಿ

ಮೂಡಲಗಿ: ರಾಜ್ಯದಲ್ಲಿ ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದು ಕೇಂದ್ರ ಸರ್ಕಾರದಿಂದ ಪೂರೈಸಲ್ಪಡುವ ರಸಗೊಬ್ಬರಗಳು ವಿತರಣಾ ಕೇಂದ್ರಗಳಿಗೆ ತಲುಪಲು ವಿಳಂಬವಾಗುತ್ತಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ತೊಂದರೆಯಾಗಿದೆ ಮತ್ತು ಪದೆ ಪದೇ ಬೆಲೆ ಏರಿಕೆ ಆಗುತ್ತಿರುವುದು ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ ಅದಕ್ಕೆಲ್ಲ ತಕ್ಷಣವೇ ಪರಿಹಾರವನ್ನು ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ತಾಲೂಕಾ ಪ್ರಧಾನ ಸಂಚಾಲಕ ರಮೇಶ ನಾಯಕ ನೇತೃತ್ವದಲ್ಲಿ ರಾಜ್ಯಸಭೆ ಸದಸ್ಯರಾದ ಈರಣ್ಣ ಕಡಾಡಿ ಅವರಿಗೆ ಮನವಿ ಸಲ್ಲಿಸಲಾಯಿತು ವೆಂಕಟಾಪೂರ …

Read More »

ಮೂಡಲಗಿ-ರಂಗಾಪೂರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮೂಡಲಗಿ: 2024-25ನೇ ಸಾಲಿನ ಮಳೆ ಪರಿಹಾರ ಅನುದಾನ ಅಡಿಯಲ್ಲಿ ಮೂಡಲಗಿ ಶಿವಬೋಧರಂಗ ಮಠದಿಂದ ರಂಗಾಪೂರ ಕೂಡುರಸ್ತೆಯ ವರೆಗಿನ ಅರ್ಧ ಕಿ.ಮೀ. ವರೆಗೆ 60 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿವಬೋಧರಂಗ ಮಠದ ಪೀಠಾಧಿಪತಿದತ್ತಾತ್ರಯಬೋಧ ಸ್ವಾಮೀಜಿ ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ನಾಯಕ ಸರ್ವೋತ್ತಮ ಜಾರಕಹೊಳಿ ಅವರು ಮಾತನಾಡಿ, ಬಹಳ ದಿನಗಳ ಬೇಡಿಕೆಯಾಗಿದ್ದ ಮೂಡಲಗಿ-ರಂಗಾಪೂರ-ಮುನ್ಯಾಳ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ದಿಯ …

Read More »

ಜೂ.21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ಸಿಗೊಳಿಸಬೇಕು- ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

ಮೂಡಲಗಿ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಶನಿವಾರ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಯೋಗ ದಿನಾಚರಣೆಯ ಕರಪತ್ರವನ್ನು ಬಿಡುಗಡೆ ಮಾಡಿದರು. ಮೂಡಲಗಿ: ‘ಜೂನ್ 21ರಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯೋಜಿಸಿರುವ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಅಚ್ಚುಕಟ್ಟಾಗಿ ನಡೆಯುವಂತೆ ತಾಲ್ಲೂಕಿನ ಎಲ್ಲ ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು’ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ …

Read More »