Breaking News
Home / ಬೆಳಗಾವಿ (page 311)

ಬೆಳಗಾವಿ

ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಪ್ರಥಮಾಧ್ಯತೆ.-ಬಾಲಚಂದ್ರ ಜಾರಕಿಹೊಳಿ ಹೇಳಿಕೆ.

ಎಸ್‍ಎಸ್‍ಎಲ್‍ಸಿ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಪ್ರಥಮಾಧ್ಯತೆ.-ಬಾಲಚಂದ್ರ ಜಾರಕಿಹೊಳಿ ಹೇಳಿಕೆ. ಗೋಕಾಕ: ಅರಭಾಂವಿ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿದ್ದು, ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಕಳೆದ 15ವರ್ಷಗಳಿಂದ ಶ್ರಮಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಸಾಧನೆ ಅಪಾರವಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ವಲಯದ ವಿದ್ಯಾರ್ಥಿನಿಯೋರ್ವಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆಯನ್ನುಂಟು ಮಾಡಿದೆ ಎಂದು ಶಾಸಕ ಮತ್ತು …

Read More »

ಸಹಕಾರಿ ಸಂಘ, ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿವಿದ್ದಂತೆ.

ಬೆಟಗೇರಿ: ಗ್ರಾಮೀಣ ವಲಯದ ಸಹಕಾರಿ ಸಂಘ, ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿವಿದ್ದಂತೆ. ಸಂಘ ಸಂಸ್ಥೆಗಳು ಸಮಗ್ರ ಪ್ರಗತಿ ಸಾಧಿಸಲು ಸ್ಥಳೀಯರ ಸಹಕಾರ ಅವಶ್ಯಕವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕ ಸತೀಶ ಕಡಾಡಿ ಅವರು ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಶಾಖೆಯಲ್ಲಿ ಸೋಮವಾರ ನ.2ರಂದು ನಡೆದ ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕರಾಗಿ ಅವಿರೂಧವಾಗಿ ಆಯ್ಕೆಯಾಗಿರುವ ಸತೀಶ ಕಡಾಡಿ ಅವರ ಸತ್ಕಾರ ಹಾಗೂ …

Read More »

ನಿಧನ ವಾರ್ತೆ ಉದ್ದಪ್ಪ ಮನ್ನಾಪೂರ

ನಿಧನ ವಾರ್ತೆ ಉದ್ದಪ್ಪ ಮನ್ನಾಪೂರ (85) ಮೂಡಲಗಿ: ಸಮೀಪದ ಮನ್ನಾಪೂರ ಗ್ರಾಮದ ಉದ್ದಪ್ಪ ದೇವಪ್ಪ ಮನ್ನಾಪೂರ (85) ಹೃಧಯಾಘತದಿಂದ ರವಿವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರೂ ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ನಿಶ್ವಾರ್ಥ ಸೇವೆ ಆತ್ಮ ತೃಪ್ತಿ ನೀಡುತ್ತದೆ: ಪ್ರೊ.ಕೆ.ಜೆ.ಮಾಲಗಾಂವೆ

ನಿಶ್ವಾರ್ಥ ಸೇವೆ ಆತ್ಮ ತೃಪ್ತಿ ನೀಡುತ್ತದೆ: ಪ್ರೊ.ಕೆ.ಜೆ.ಮಾಲಗಾಂವೆ ಐನಾಪೂರ: ನಮ್ಮ ಸೇವೆಯು ಪ್ರಾಮಾಣಿಕವಾಗಿದ್ದರೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಐನಾಪೂರದ ಕೆ.ಆರ್.ಇ.ಎಸ್. ಸಂಸ್ಥೆ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ. ಕೆ.ಜೆ. ಮಾಲಗಾಂವೆ ಹೇಳಿದರು. ಅವರು ನವ್ಯಸ್ಪೂರ್ತಿ ಸಮಾಜ ಸಂಸ್ಥೆ, ಐನಾಪೂರ ಹಾಗೂ ಕೆ.ಆರ್.ಇ.ಎಸ್. ಹೈಸ್ಕೂಲ್ ಸನ್ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಬಳಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಜಗತ್ತನ್ನೇ ತಲ್ಲಣಗೊಳಿಸಿದ …

Read More »

‘ಭಾರತೀಯ ರಾಷ್ಟ್ರೀಯ ಏಕತೆಯು ವಿಶ್ವಕ್ಕೆ ಮಾದರಿಯಾಗಿದೆ

‘ಭಾರತೀಯ ರಾಷ್ಟ್ರೀಯ ಏಕತೆಯು ವಿಶ್ವಕ್ಕೆ ಮಾದರಿಯಾಗಿದೆ’ ಮೂಡಲಗಿ: ‘ಭಾರತ ದೇಶವು ವಿವಿಧತೆಯಲ್ಲಿ ಏಕತೆ ಸಾಧಿಸಿರುವುದು ಇಡೀ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು. ಇಲ್ಲಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಮೂಡಲಗಿ ಪೊಲೀಸ್ ಇಲಾಖೆಯಿಂದ ಆಚರಿಸಿದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಏಕತೆಯು ಯಾರದೇ ಒತ್ತಾಯಕ್ಕಾಗಿ ಇರದೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಅಂತರಾತ್ಮದ ಬದ್ಧತೆಯಾಗಿರಬೇಕು ಎಂದರು. ಏಕತೆ ದಿನಾಚರಣೆಯನ್ನು ಭಾರತ ದೇಶವನ್ನು ಒಂದುಗೂಡಿಸಿದ …

Read More »

ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮೂಡಲಗಿ : ಪಟ್ಟಣದ ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಮ್ಮ ಕಚೇರಿಯಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ತಮ್ಮ ವಾಹನಗಳಿಗೆ ಕನ್ನಡದ ಬಾವುಟ ಕಟ್ಟಿ ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ವಾಹನದಲ್ಲಿ ಸಂಚರಿಸುವ ಮೂಲಕ ಕನ್ನಡ ರಾಜ್ಯೋತ್ಸವನ್ನು ಆಚರಿಸಿದರು

Read More »

ಅರಭಾವಿ ಪಟ್ಟಣದ ಏಳ್ಗೆಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಅರಭಾವಿ ಪಟ್ಟಣದ ಏಳ್ಗೆಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಸನ್ಮಾನ ಸ್ವೀಕರಿಸಿ ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಏಳ್ಗೆಗಾಗಿ ಶ್ರಮಿಸಿ ಮಾದರಿ ಪಟ್ಟಣವನ್ನಾಗಿ ಪರಿವರ್ತಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು. ಸಮೀಪದ ಅರಭಾವಿ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಬೆಳಗಾವಿಯಲ್ಲಿ …

Read More »

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕರೋನ ಜಾಗೃತಿ – ಮೂಡಲಗಿಯ ಮಂಜುನಾಥ ರೇಳೆಕರ

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕರೋನ ಜಾಗೃತಿ. ಕರ್ನಾಟಕ ರಾಜ್ಯೋತ್ಸವದ ದಿನ ಜವಾರಿ ಬಳಸಿ ಕರೋನ ಓಡಿಸಿ‌ ಕರ್ನಾಟಕದ 30 ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನದ ಎರಡನೇ ಜಿಲ್ಲೆ ಬೆಳಗಾವಿಯಲ್ಲಿ ಮೂಡಲಗಿಯ ಮಂಜುನಾಥ ರೇಳೆಕರ ಕನ್ನಡ ಧ್ವಜದ ಚಿತ್ರವನ್ನು ಮೈಮೇಲೆ ಬಳಿದುಕೊಂಡು ಅದರ ಮೇಲೆ ಜವಾರಿ ಬಳಸಿ ಕರೋನ ಓಡಿಸಿ ಎಂಬ ಪದಗಳನ್ನು ಬರೆಸಿ ಜಾಗೃತಿ ಅಭಿಯಾನ ಮಾಡಿದ್ದು ಎಲ್ಲರೂ ಜವಾರಿ ಸಾವಯವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಮಾರಕ ರೋಗಗಳಿಂದ ದೂರವಿರೋನ ಎಂಬ …

Read More »

ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು

ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು ಮೂಡಲಗಿ: ಕನ್ನಡದ ಉಳಿವಿಗೆ ಕನ್ನಡಿಗರು ಪ್ರತಿ ದಿನದ ವ್ಯವಹಾರ, ವ್ಯಾಪರ ಇತರೆ ಚಟುವಟಿಕೆಗಳಲ್ಲಿ ಕನ್ನಡವನ್ನೆ ಬಳಸಬೇಕು ಅನಿವಾರ್ಯ ಇದ್ದರೆ ಮಾತ್ರ ಇತರ ಭಾಷೆ ಬಳಸಬಹುದು. ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು ಎಂದು ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಹೇಳಿದರು. ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ …

Read More »

ಭುವನೇಶ್ವರಿ ವೇಷದಲ್ಲಿ ಗಮನಸೆಳೆದ ಆರೋಹಿ

ಆರೋಹಿ ನಾಡಗೌಡರ ಭುವನೇಶ್ವರಿ ವೇಷದಲ್ಲಿ ಗಮನಸೆಳೆದ ಆರೋಹಿ ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣಾ ನಾಡಗೌಡರ ಪುಟಾಣಿಯು ಭಾನುವಾರ ಆಚರಿಸಿದ 65ನೇ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ನಾಡದೇವಿ ಭುವನೇಶ್ವರಿ ವೇಷದಲ್ಲಿ ಗಮನಸೆಳೆದಳು. ಆರೋಹಿ ಇಲ್ಲಿಯ ಪುರಸಭೆಯ ಮಾಜಿ ಉಪಾಧ್ಯಕ್ಷ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆ ನಿರ್ದೇಶಕ ರವಿ ಪಿ. ಸೋನವಾಲಕರ ಮತ್ತು ವಿದ್ಯಾ ಇವರ ಮೊಮ್ಮಗಳಾಗಿದ್ದು, ತಾಯಿ ಶೃತಿ ಮಗುವಿನ ವೇಷವನ್ನು ಸಿದ್ಧಗೊಳಿಸಿದ್ದರು.

Read More »