Breaking News
Home / ಬೆಳಗಾವಿ (page 8)

ಬೆಳಗಾವಿ

ಶಿಕ್ಷಣದಿಂದ ದೇಶ ಪ್ರಗತಿಯಾಗಲು ಸಾಧ್ಯ-ಮಂಗಲಾ ಅಂಗಡಿ

ಮೂಡಲಗಿ: ಭಾರತ ದೇಶದ ಭವಿಷ್ಯ ಯುವ ಶಕ್ತಿಯ ಮೇಲೆ ಅವಲಂಬಿತವಾಗಿದ್ದು, ಸಮಾಜದಲ್ಲಿರುವ ಪ್ರತಿಯೋಬ್ಬ ಕುಟುಂಬದ ಸದಸ್ಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿದಾಗ ಮಾತ್ರ ದೇಶ ಆರ್ಥಿಕವಾಗಿ, ಸಮಾಜಿಕವಾಗಿ ಬಲಿಷ್ಠ ರಾಷ್ಟ್ರವಾಗುವದು ಎಂದು ಬೆಳಗಾವಿ ಲೋಕಸಭಾ ಮಾಜಿ ಸದಸ್ಯೆ ಮಂಗಲಾ ಅಂಗಡಿ ಹೇಳಿದರು. ಅವರು ಗುರ್ಲಾಪೂರದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 2023-24ರಲ್ಲಿ ಸಂಸದರ ಅನುದಾನಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೆರಿಸಿ …

Read More »

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಮೂಡಲಗಿ: ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಅ.21ರಂದು ಸೋಮವಾರ ಸಂಜೆ 4 ಗಂಟೆಗೆ ಶ್ರೀ ಶಿವಬೋಧರಂಗ ಸಿದ್ದ ಸಂಸ್ಥಾನ ಮಠದಲ್ಲಿ ನಡೆಯಲಿದೆ. ಸಭೆಯ ಸಾನಿಧ್ಯವನ್ನು ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ವಹಿಸುವರು. ಅರಬಾವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೇತೃತ್ವದಲ್ಲಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು …

Read More »

ಶಿವಾಪೂರ ಹ ಗ್ರಾಮದಲ್ಲಿ ನವರಾತ್ರಿ ಉತ್ಸವದ ಸತ್ಸಂಗ ಕಾರ್ಯಕ್ರಮ

ಮೂಡಲಗಿ : ಮೂಡಲಗಿ ತಾಲೂಕಿನ ಶಿವಾಪೂರ ಹ ಗ್ರಾಮದ ಶ್ರೀ ಬಸವ ಆಶ್ರಮ ಹೂಲಿಕಟ್ಟಿ-ಶಿವಾಪೂರ ಹ ದಲ್ಲಿ ನವರಾತ್ರಿ ಉತ್ಸವದ ಸತ್ಸಂಗ ಕಾರ್ಯಕ್ರಮ ನಡೆಯಿತು. ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಮಮದಾಪೂರದ ಶ್ರೀ ಚರಮೂರ್ತೇಶ್ವರ ಮಠದ ಡಾ. ವೇ. ಮೂ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರು ವರಗುಣವಾವುದೆಂದರೆ ಉದಾರ. ಪ್ರಪಂಚ ಜೀವನದ ಜೊತೆಗೆ ಪಾರಮಾರ್ಥಿಕ ಚಿಂತನೆ ಅವಶ್ಯಕವಾಗಿದ್ದು ಉದಾರವಾದಿ ಯಾಗಿ ಬದುಕಬೇಕು ಎಂದು ಹೇಳಿದರು. ಸಾನಿಧ್ಯದಲ್ಲಿರುವ ರನ್ನ ತಿಮ್ಮಾಪೂರದ ಶ್ರೋ. ಬ್ರ …

Read More »

ತಿಗಡಿ, ಅವರಾದಿಗೆ ಪದವಿ ಪೂರ್ವ ಮಹಾವಿದ್ಯಾಲಯ ಮಂಜೂರು ಮಾಡಿಸಿದ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮೂಡಲಗಿ ವಲಯದ ತಿಗಡಿ ಮತ್ತು ಅವರಾದಿ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತಿಕರಣಗೊಳಿಸಿ ಕೇಂದ್ರ ಸರ್ಕಾರ ಮಂಜೂರು ನೀಡಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಬುಧವಾರದಂದು ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಈ ಬಾರಿ ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ ಮೂರು ಹೊಸ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತಿಕರಣಗೊಳಿಸಲಾಗಿದ್ದು, ಅದರಲ್ಲಿ ಮೂಡಲಗಿ ವಲಯದಲ್ಲಿ ಎರಡು ಹೊಸ ಸರ್ಕಾರಿ ಪ್ರೌಢಶಾಲೆಗಳು …

Read More »

ಶಿವಾಪುರದಲ್ಲಿ ಕವಿಗೋಷ್ಠಿಯ ಸಂಭ್ರಮ ಭಾವನೆಗಳನ್ನು ಕಟ್ಟಿಕೊಡುವ ಕಲೆಗಾರಿಕೆ ಕವಿಗೆ ಇರಬೇಕು- ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ

ಮೂಡಲಗಿ ತಾಲ್ಲೂಕಿನ ಶಿವಾಪುರ(ಹ) ಗ್ರಾಮದ ಬಸವ ಆಶ್ರಮದಲ್ಲಿ ತಾಲ್ಲೂಕಾ ಚುಸಾಪದಿಂದ ಜರುಗಿದ ದಸರಾ ಕವಿಗೋಷ್ಠಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಉದ್ಘಾಟಿಸಿದರು. ಮೂಡಲಗಿ: ‘ಭಾವನೆಗಳಿಂದ ಹುಟ್ಟಿದ ಕವಿತೆಯನ್ನು ಪದಪುಂಜಗಳ ಮೂಲಕ ಅರ್ಥವತ್ತಾಗಿ ಸೃಜನಾತ್ಮಕವಾಗಿ ಕಟ್ಟಿಕೊಡುವ ಕಲೆಯನ್ನು ಕವಿಯು ಸಿದ್ಧಿಸಿಕೊಳ್ಳಬೇಕು’ ಎಂದು ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ ಹೇಳಿದರು. ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಬಸವ ಆಶ್ರಮದಲ್ಲಿ ಮೂಡಲಗಿ ತಾಲ್ಲೂಕಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಏರ್ಪಡಿಸಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು …

Read More »

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ಎಸ್.ಸಿ/ಎಸ್.ಟಿ ಹಾಗೂ ಅಲ್ಪ ಅಲ್ಪಸಂಖ್ಯಾತರ ಶಾಖಾ ಘಟಕ ಉದ್ಘಾಟನೆ

ಮೂಡಲಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಸಮಜದಲ್ಲಿ ಹಿಂದುಳಿದ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದು, ಮೂಡಲಗಿಯಲ್ಲಿ ನೂತನವಾಗಿ ಆರಂಭಗೊಂಡ ಸಂಘಟನೆಯ ಪದಾಧಿಕಾರಿಗಳು ತಮ್ಮ ಸುತ್ತಮುತ್ತಲಿನ ಬಡವರ ಏಳ್ಗೆಗಾಗಿ ಶ್ರಮೀಶಬೇಕೆಂದು ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಸತ್ತೇಪ್ಪ ಕರವಾಡೆ ಹೇಳಿದರು. ಶನಿವಾರದಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ಎಸ್.ಸಿ/ಎಸ್.ಟಿ ಹಾಗೂ ಅಲ್ಪ ಅಲ್ಪಸಂಖ್ಯಾತರ ಶಾಖಾ …

Read More »

ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ ಕಲ್ಲೋಳಿ ಇದರ 3ನೇ ಶಾಖೆ ಪ್ರಾರಂಭ

  ಮೂಡಲಗಿ: ಕಳೆದ 40 ವರ್ಷಗಳಿಂದ ಸಹಕಾರ. ಸಾಮಾಜಿಕ, ರಾಜಕೀಯ ಚಟುವಟಿಕೆಗಳ ಮೂಲಕ ಈ ಭಾಗದ ಜನರ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಅದರ ಮುಂದುವರೆದ ಭಾಗವಾಗಿ ನನ್ನ ಸೇವೆಯನ್ನು ಇನ್ನಷ್ಟು ನಿಕಟಗೊಳಿಸಬೇಕೆಂಬ ಹಂಬಲದೊಂದಿಗೆ ಸಮೀಪದ ಯಾದವಾಡ ಪಟ್ಟಣದಲ್ಲಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ ಕಲ್ಲೋಳಿ ಇದರ ನೂತನ 3ನೇ ಶಾಖೆಯನ್ನು ಪ್ರಾರಂಭಿಸುತ್ತಿದ್ದೆವೆಂದು ರಾಜ್ಯಸಭಾ ಸಂಸದ ಹಾಗೂ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು. ಶುಕ್ರವಾರ ತಾಲೂಕಿನ …

Read More »

‘ಶಾಲಾ ಕೊಠಡಿಗಳು ಪಠ್ಯದೊಂದಿಗೆ ಸಾಂಸ್ಕøತಿಕ ತಾಣವಾಗಬೇಕು’- ಸಾಹಿತಿ, ಪತ್ರಕರ್ತರ ಬಾಲಶೇಖರ ಬಂದಿ

ಗೋಕಾಕದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಠ್ಯ, ಸಹಪಠ್ಯ ನವರಾತ್ರಿ ಉತ್ಸವ-2024 ವನ್ನು ಮೂಡಲಗಿ ಸಾಹಿತಿ, ಪತ್ರಕರ್ತರ ಬಾಲಶೇಖರ ಬಂದಿ ಉದ್ಘಾಟಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಬಿ.ಕೆ. ಕುಲಕರ್ಣಿ, ಪ್ರಾಚಾರ್ಯರಾದ ಎ.ಬಿ. ಪಾಟೀ, ಐ.ಎಸ್. ಪವಾರ ಚಿತ್ರದಲ್ಲಿರುವರು. ಗೋಕಾಕ: ‘ದೇಶದ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಪ್ರಮುಖವಾಗಿದೆ’ ಎಂದು ಮೂಡಲಗಿಯ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ಇಲ್ಲಿಯ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪಠ್ಯ …

Read More »

ಹಬ್ಬಗಳ‌ ಆಚರಣೆಗಳಿಂದಲೇ ಭಾರತ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಮೂಡಲಗಿ: ಭಾರತ ಹಳ್ಳಿಗಳ ದೇಶ, ಹಬ್ಬಗಳ ದೇಶ.‌ ವಿಶೇಷ ಹಬ್ಬಗಳ ಆಚರಣೆಗಳಿಂದ ಇಡೀ ವಿಶ್ವವೇ ಇಂದು ನಮ್ಮನ್ನು ಗುರುತಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ 41ನೇ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ ಸಚಿವರು, ಭಾರತದಲ್ಲಿ ಎಲ್ಲಾ ಸಮುದಾಯಗಳು ಸೇರಿ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ನಮ್ಮ ಹಬ್ಬಗಳ ವೈಶಿಷ್ಟ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ರಾಜ್ಯದ ಅತಿದೊಡ್ಡ …

Read More »

ಕಾಳಿಕಾ ದೇವಸ್ಥಾನದಲ್ಲಿ ಶೈಲಪುತ್ರಿ ಅಲಂಕಾರ

ಮೂಡಲಗಿ: ಮೂಡಲಗಿ ಪಟ್ಟಣದ ಲಕ್ಷ್ಮೀ ನಗರದಲ್ಲಿನ ಕಾಳಿಕಾ ದೇವಸ್ಥಾನದಲ್ಲಿ ಕಾಳಿಕಾದೇವಿಯು ನವರಾತ್ರಿಯ ಶುಕ್ರವಾರ ಪ್ರಥಮ ದಿನದಂದು ಶೈಲಪುತ್ರಿ ಅಲಂಕಾರದಲ್ಲಿ ಕಂಗೋಳಿಸುತ್ತಿರುವುದು.  

Read More »