ಎಲ್ಲಕ್ಕಿಂತ ಬೆಟಗೇರಿ ಗ್ರಾಮಸ್ಥರ ಪ್ರೀತಿ, ಅಭಿಮಾನ ದೊಡ್ಡದು: ಡಾ.ರಾಜೇಂದ್ರ ಸಣ್ಣಕ್ಕಿ ಬೆಟಗೇರಿ:ಚುನಾಯಿತ ಜನಪ್ರತಿನಿಧಿಗಳು ತಾವು ಆಯ್ಕೆಗೊಂಡ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸ ಕೈಗೊಳ್ಳಬೇಕು. ಎಲ್ಲಕ್ಕಿಂತ ಬೆಟಗೇರಿ ಗ್ರಾಮಸ್ಥರ ಪ್ರೀತಿ, ಅಭಿಮಾನ ದೊಡ್ಡದು ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು. ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಸೋಮವಾರ ಜು.26ರಂದು ಆಯೋಜಿಸಿದ ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಸದಸ್ಯರ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ …
Read More »ಸೈನಿಕರು ಗಡಿಯಲ್ಲಿ ಹೊರಾಡುತ್ತಾರೆ. ಯೋದರಲ್ಲಿರುವ ದೇಶಪ್ರೇಮ ಮೆಚ್ಚುವಂತಹದಾಗಿದೆ -ಚಕ್ರವರ್ತಿ ಸೂಲಿಬೆಲೆ
ಬೆಟಗೇರಿ: ಸೈನಿಕರ ಜೀವನ ರಾಷ್ಟ್ರಕ್ಕೆ ಸಮರ್ಪನೆಯಾಗುವಂತಹದು, ಭಾರತೀಯರಾಗಿ ಸೈನಿಕರು ಗಡಿಯಲ್ಲಿ ಹೊರಾಡುತ್ತಾರೆ. ಯೋದರಲ್ಲಿರುವ ದೇಶಪ್ರೇಮ ಮೆಚ್ಚುವಂತಹದಾಗಿದೆ. ಜಾತಿ, ಮತ, ಪಂಥ ತೊರೆದರೇ ಮಾತ್ರ ಅದ್ಬುತ ಸಾಧನೆ, ಕೆಲಸ ಮಾಡಲು ಸಾಧ್ಯ. ನಾವೆಲ್ಲರೂ ಭಾರತಾಂಬೆಯ ಮಕ್ಕಳು, ದೇಶಭಕ್ತರಾಗಿ ರಾಷ್ಟ್ರಕ್ಕೆ ಶಕ್ತಿಯಾಗೋಣ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕಾರ್ಗಿಲ್ ವಿಜಯ ದಿವಸ ಸಂಸ್ಮರಣೆ ಅಂಗವಾಗಿ ಜುಲೈ.26ರಂದು ನಡೆದ …
Read More »ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಸತ್ಕರಿಸಿದ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಸತ್ಕರಿಸಿದ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮೂಡಲಗಿ: ನವದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ; ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭೇಟಿಯಾಗಿ ಸತ್ಕರಿಸಿ, ಅಭಿನಂದನೆ ಸಲ್ಲಿಸಿದರು.
Read More »ಭಾರತ ಮಾತೆಯ ನೂತನ ಭವ್ಯ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪನೆ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಲೆನಾಡಗಾಂಧಿ ಎಚ್.ಜಿ.ಗೋವಿಂದೇಗೌಡ ರಾಜ್ಯ ಪ್ರಶಸ್ತಿ ಪುರಸ್ಕøತ ವಿವಿಡಿ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಬೆಟಗೇರಿ ಸೈನಿಕರ ಬಳಗದ ವತಿಯಿಂದ ನಿರ್ಮಿಸಲಾದ ಭಾರತ ಮಾತೆಯ ನೂತನ ಭವ್ಯ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪನೆ, ನಿವೃತ್ತ ಸೈನಿಕರಿಗೆ ಗೌರವ ಸತ್ಕಾರ ಸಮಾರಂಭ ಕಾರ್ಗಿಲ್ ವಿಜಯ ದಿವಸ ಸಂಸ್ಮರಣೆ ಅಂಗವಾಗಿ ಸೋಮವಾರ ಜುಲೈ.26ರಂದು ಮುಂಜಾನೆ 9 ಗಂಟೆಗೆ ನಡೆಯಲಿದೆ. ಕರೊನಾ ರೋಗ ನಿರ್ಮೂಲನಾರ್ಥ ಹಾಗೂ ಲೋಕ …
Read More »ಸುಶ್ಮೀತಾ ಎನ್‍ಎಂಎಂಎಸ್ ಪರೀಕ್ಷೆ ಉತ್ತೀರ್ಣ
ಸುಶ್ಮೀತಾ ಎನ್‍ಎಂಎಂಎಸ್ ಪರೀಕ್ಷೆ ಉತ್ತೀರ್ಣ ಮೂಡಲಗಿ: ಇಲ್ಲಿಯ ಎಸ್‍ಎಸ್‍ಆರ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಶ್ಮೀತಾ ಎಂ. ಗಸ್ತಿ ಎನ್‍ಎಂಎಂಎಸ್ ಪರೀಕ್ಷೆ ಉತ್ತೀರ್ಣರಾಗಿ ಕೇಂದ್ರ ಸರ್ಕಾರದ ಶಿಷ್ಯ ವೇತನ ಪಡೆಯಲು ಅರ್ಹತೆ ಪಡೆದುಕೊಂಡಿರುವಳು. ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಪ್ರಾಚಾರ್ಯ ಕೆ.ಎಸ್. ಹೊಸಟ್ಟಿ ಹಾಗೂ ಸಿಬ್ಬಂದಿ ಅಭಿನಂದಿಸಿರುವರು.
Read More »ರೋಹಿಣಿ ಕೋರೆ 600ಕ್ಕೆ 600 ಅಂಕಗಳು
ರೋಹಿಣಿ ಕೋರೆ 600ಕ್ಕೆ 600 ಅಂಕಗಳು ಮೂಡಲಗಿ: ಇಲ್ಲಿಯ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ರೋಹಿಣಿ ಕೋರೆ 600ಕ್ಕೆ 600 ಅಂಕಗಳನ್ನು ಪಡೆದುಕೊಂಡು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವರು. ಯಶೋಧಾ ಅವಟಿ ಶೇ. 99.16 (ದ್ವಿತೀಯ), ಮಹಾದೇವಿ ದಳವಾಯಿ ಶೇ. 98 (ತೃತೀಯ) ಸ್ಥಾನ ಪಡೆದುಕೊಂಡಿರುವರು. ವಾಣಿಜ್ಯ ವಿಭಾಗ: ಪ್ರಿಯಾ ಬೋಳಿ ಶೇ. 99.83 (ಪ್ರಥಮ), ಹಾಲಪ್ಪ ಹಿರೇಕೋಡಿ 98.50 (ದ್ವಿತೀಯ), …
Read More »ಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ ನೆರೆಪೀಡಿತ 12 ಕಡೆಗಳಲ್ಲಿ ಗಂಜಿಕೇಂದ್ರಗಳು ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ ನೆರೆಪೀಡಿತ 12 ಕಡೆಗಳಲ್ಲಿ ಗಂಜಿಕೇಂದ್ರಗಳು ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಿಡಕಲ್ ಜಲಾಶಯದ ನೀರಿನ ಮಟ್ಟ ಭರ್ತಿಯಾಗುವ ಮಟ್ಟ ತಲುಪಿದ್ದು, ಘಟಪ್ರಭಾ ನದಿಗೆ 1,36,591 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ನೆರೆಪೀಡಿತರ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ …
Read More »ಬೆಟಗೇರಿ ಸುತ್ತಮುತ್ತ ಧಾರಾಕಾರ ಸುರಿದ ಮಳೆ, ಆತಂಕದಲ್ಲಿ ರೈತರು..!
ಬೆಟಗೇರಿ ಸುತ್ತಮುತ್ತ ಧಾರಾಕಾರ ಸುರಿದ ಮಳೆ, ಆತಂಕದಲ್ಲಿ ರೈತರು..! ಬೆಟಗೇರಿ: ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕಳೆದೆರಡು ದಿನ ಜಿಟಿ ಜಿಟಿ ಮಳೆಯಾಗಿದ್ದರೆ, ಶುಕ್ರವಾರ ಜು.23ರಂದು ದಿನವಿಡಿ ಎಡಬಿಡದೇ ಧಾರಾಕಾರ ಮಳೆ ಸುರಿದು ರೈತರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಕಳೆದೆರಡ್ಮೂರೂ ದಿನಗಳಿಂದ ಎಡಬಿಡದೇ ಧರೆಗಿಳಿದ ಈ ಮಳೆ ಭೂಮಿ ತಂಪಾಗಿಸಿ ಈ ಭಾಗದ ರೈತರು ಒಂದಡೆ ನಿಟ್ಟಿಸಿರು ಬಿಡುವಂತಾದರೆ, ಇನ್ನೂಂದಡೆ ಧಾರಾಕಾರ …
Read More »ಘಟಪ್ರಭಾ ನದಿಗೆ 77 ಸಾವಿರ ಕ್ಯೂಸೆಕ್ಸ್ ನೀರು, ನದಿ ತೀರದ ಗ್ರಾಮಗಳ ಭೇಟಿಗೆ ಅಧಿಕಾರಿಗಳಿಗೆ ಸೂಚನೆ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ಜನರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ ನದಿಗೆ 77 ಸಾವಿರ ಕ್ಯೂಸೆಕ್ಸ್ ನೀರು, ನದಿ ತೀರದ ಗ್ರಾಮಗಳ ಭೇಟಿಗೆ ಅಧಿಕಾರಿಗಳಿಗೆ ಸೂಚನೆ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ಜನರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ ಒಳಹರಿವು ಪ್ರಮಾಣ ಹೆಚ್ಚುತ್ತಿರುವುದರಿಂದ ನದಿ ತೀರದ ಗ್ರಾಮಗಳ ನಾಗರೀಕರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ …
Read More »2021-22ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಕೈಗೊಳ್ಳಲು ಸರ್ಕಾರ ಆದೇಶ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲಾ ರೈತರು ನನ್ನ ಬೆಳೆ, ನನ್ನ ಹಕ್ಕು ಅಭಿಯಾನದಡಿಯಲ್ಲಿ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯೋಜನೆ ಅನ್ವಯ 2021-22ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಕೈಗೊಳ್ಳಲು ಸರ್ಕಾರ ಆದೇಶಿಸಿದ್ದು, ರೈತರು ತಮ್ಮ ಜಮೀನುಗಳ ಸರ್ವೆ ನಂ., ಹಿಸ್ಸಾ ನಂಬರ್‍ವಾರು ನೀವು ಬೆಳೆದ ಕೃಷಿ, ತೋಟಗಾರಿಕೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಮುಂಗಾರು ಬೆಳೆ ಸಮೀಕ್ಷೆಯನ್ನು ಸ್ವತ: ನೀವೇ ಕೈಗೊಳ್ಳಬೇಕೆಂದು ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್ ತಿಳಿಸಿದ್ದಾರೆ. ಬೆಳಗಾವಿ …
Read More »