ಮೂಡಲಗಿ: ಸಾರ್ವಜನಿಕ ಸೇವೆಗಳಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಭವಿಷ್ಯತ್ತಿನ ಭವ್ಯ ಸುಂದರ ಸಮಾಜ ಸೃಷ್ಠಿಸುವಲ್ಲಿ ಮಹತ್ವದ ಹಾಗೂ ಜವಾಬ್ದಾರಿಯುತ ಕರ್ತವ್ಯವು ಶಿಕ್ಷಕರದಾಗಿದೆ. ಸಾಮಾಜಿಕವಾಗಿ ಉತ್ತಮ ಸ್ವಾಸ್ಥö್ಯ ನಿರ್ಮಾಣ ಮಾಡುವ ಮಹತ್ತರ ಕೆಲಸ ಶಿಕ್ಷಕ ಸಮುದಾಯದ ಮೇಲಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು. ಅವರು ಸಮೀಪದ ಕೌಜಲಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಡಾ. ಅಂಬೇಡ್ಕರ ಭವನದಲ್ಲಿ ಜರುಗಿದ ದೈಹಿಕ ಶಿಕ್ಷಕರಾದ ಸಿದ್ದಾರೋಢ ನಾಗನೂರ …
Read More »ಭಾವೈಕ್ಯೆತೆಯಿಂದ ಕೂಡಿದ ನಾಡು ಶಾಂತವಾಗಿರುತ್ತದೆ: ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ
ಭಾವೈಕ್ಯೆತೆಯಿಂದ ಕೂಡಿದ ನಾಡು ಶಾಂತವಾಗಿರುತ್ತದೆ: ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಬೆಟಗೇರಿ: ಪುರಾಣ ಪ್ರವಚನಗಳನ್ನು ಶ್ರೀಗಳಿಂದ ಪ್ರತಿಯೊಬ್ಬರೂ ಶ್ರವಣ ಮಾಡಿ ಭಗವಂತ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು. ಭಾವೈಕ್ಯೆತೆಯಿಂದ ಕೂಡಿದ ನಾಡು ಶಾಂತವಾಗಿರುತ್ತದೆ ಮತ್ತು ಸುಭಿಕ್ಷವಾಗಿರುತ್ತದೆ ಎಂದು ಅನಂತಪುರದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು. ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಮೌನಮಲ್ಲಿಕಾರ್ಜುನ ಮಠದಲ್ಲಿ ಶ್ರಾವಣ ಅಧಿಕಮಾಸದ ಪ್ರಯುಕ್ತ ಒಂದು ತಿಂಗಳ ತನಕ ನಡೆದ ನಾಲ್ವವಾಡ ಶ್ರೀ ವೀರೇಶ್ವರ ಶರಣರ ಮಹಾಪುರಾಣ ಪ್ರವಚನ ಕಾಯಕ್ರಮದ …
Read More »ರಾಜ್ಯಕ್ಕೆ ಒಟ್ಟು 5,491 ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಮಂಜೂರು
ಮೂಡಲಗಿ: ದೇಶದ 63,000 ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಗಣಕೀಕರ ಕಾರ್ಯವನ್ನು 2,516 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಒಟ್ಟು 5,491 ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ನವದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯಸಭೆ ಮುಂಗಾರು …
Read More »ಪಿಎಲ್‍ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಬಡನಿಂಗಗೋಳ, ಉಪಾಧ್ಯಕ್ಷರಾಗಿ ಬೈರುಗೋಳ ಪುನರಾಯ್ಕೆ
ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ಪಿಎಲ್‍ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಬಡನಿಂಗಗೋಳ, ಉಪಾಧ್ಯಕ್ಷರಾಗಿ ಬೈರುಗೋಳ ಪುನರಾಯ್ಕೆ ಗೋಕಾಕ : ದಿ.ಗೋಕಾಕ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಜಾರಕಿಹೊಳಿ ಸಹೋದರರ ನೇತೃತ್ವದ ಗುಂಪಿನ ಮಸಗುಪ್ಪಿಯ ಅಪ್ಪಯ್ಯಾ ನಿಂಗಪ್ಪ ಬಡನಿಂಗಗೋಳ ಮತ್ತು ಉಪಾಧ್ಯಕ್ಷರಾಗಿ ರಾಜಾಪೂರದ ರಾಜು ಸತ್ತೆಪ್ಪ ಬೈರುಗೋಳ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಗುರುವಾರದಂದು ಇಲ್ಲಿನ ಬ್ಯಾಂಕಿನ ಸಭಾಗೃಹದಲ್ಲಿ ನಡೆದ …
Read More »ವಿದ್ಯುತ್ ವ್ಯತ್ಯಯ
ವಿದ್ಯುತ್ ವ್ಯತ್ಯಯ ಮೂಡಲಗಿ: 110/11 ಕೆವಿ ಮೂಡಲಗಿ ಹಾಗೂ ನಾಗನೂರ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ಕಾರ್ಯ ನಿರ್ವಹಣೆ ಕಾರ್ಯ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಅ 4 ರಂದು ಮು. 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೂಡಲಗಿ ಪಟ್ಟಣ, ಗುರ್ಲಾಪೂರ, ಮುನ್ಯಾಳ, ಕಮಲದಿನ್ನಿ, ರಂಗಾಪೂರ, ನಾಗನೂರ, ಧರ್ಮಟ್ಟಿ, ಗುಜನಟ್ಟಿ, ಜೋಕಾನಟ್ಟಿ ಮತ್ತು ಪಟಗುಂದಿ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪಸೆಟ್ ಮಾರ್ಗಗಳ ಪೀಡರಗಳಿಗೆ ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ …
Read More »ಕೌಜಲಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜರುಗಿದ ಪ್ರಸಕ್ತ ಸಾಲಿಕ ಸಮೂಹ ಮಟ್ಟದ ಕ್ರೀಡಾಕೂಟ
ಮೂಡಲಗಿ: ಶೈಕ್ಷಣಿಕವಾಗಿ ಸದೃಢರಾಗಲು ಕ್ರೀಡಾಕೂಟಗಳು ಅತ್ಯಾವಶ್ಯಕವಾಗಿವೆ. ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಸರ್ವ ಶ್ರೇಷ್ಠ ಹಾಗೂ ಸರ್ವಕಾಲಿಕವಾಗಿ ಮನುಷ್ಯನ ಪರಿಪಕ್ವ ಜೀವನ ನಡೆಸುವಲ್ಲಿ ಮಹತ್ವದ ಪಾತ್ರವನ್ನು ಕ್ರೀಡೆಗಳು ನಿರ್ವಹಿಸುತ್ತವೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಆರೀಪ್‍ಹುಸೇನ ಟೋಪಿಚಾಂದ ಹೇಳಿದರು. ಅವರು ಸಮೀಪದ ಕೌಜಲಗಿಯ ಕರ್ನಾಟಕ ಪಬ್ಲಿಕ್( ಉರ್ದು) ಶಾಲೆಯಲ್ಲಿ ಜರುಗಿದ ಪ್ರಸಕ್ತ ಸಾಲಿಕ ಸಮೂಹ ಮಟ್ಟದ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಶೈಕ್ಷಣಿಕ ಪೈಪೋಟಿಯ ಯುಗದಲ್ಲಿ ಅಂಕಗಳಿಗೆ ಮಾನ್ಯತೆಯ ಜೊತೆಯಲ್ಲಿ …
Read More »ರಾಷ್ಟ್ರ ಮಟ್ಟದ ಅಟಲ್ ಲ್ಯಾಬ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಯಾದವಾಡ ಗ್ರಾಮದ ವಿದ್ಯಾರ್ಥಿಗಳು ಭಾಗಿಯಾರುವುದು ಹೆಮ್ಮೆಯ ಸಂಗತಿ – ಈರಣ್ಣ ಕಡಾಡಿ
ಮೂಡಲಗಿ: ಅನುಪಯೋಗಿ ಕೃಷಿ ಉಪಕರಣಗಳನ್ನು ಬಳಸಿ ನೆಲಗಡಲೆ (ಶೇಂಗಾ) ಕೊಯ್ಲು ಯಂತ್ರವನ್ನು ಕೇವಲ 240 ರೂಗಳಲ್ಲಿ ತಯಾರಿಸಿ ರಾಷ್ಟ್ರ ಮಟ್ಟದ ಅಟಲ್ ಲ್ಯಾಬ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗಿಯಾರುವುದು ಹೆಮ್ಮೆಯ ಸಂಗತಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರ ಜು-30 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಆಯೋಜಿಸಿದ ರಾಷ್ಟ್ರ ಮಟ್ಟದ ಅಟಲ್ …
Read More »ಗೋಸಬಾಳ ಗ್ರಾಪಂಗೆ ಅಧ್ಯಕ್ಷರಾಗಿ ಬಸವರಾಜ ಸವದತ್ತಿ, ಉಪಾಧ್ಯಕ್ಷೆಯಾಗಿ ಹೇಮಾ ಹಾವಾಡಿ ಆಯ್ಕೆ
ಗೋಸಬಾಳ ಗ್ರಾಪಂಗೆ ಅಧ್ಯಕ್ಷರಾಗಿ ಬಸವರಾಜ ಸವದತ್ತಿ, ಉಪಾಧ್ಯಕ್ಷೆಯಾಗಿ ಹೇಮಾ ಹಾವಾಡಿ ಆಯ್ಕೆ ಬೆಟಗೇರಿ:ಗೋಕಾಕ ತಾಲೂಕಿನ ಗೋಸಬಾಳ ಗ್ರಾಮ ಪಂಚಾಯಿತಿ ಎರಡನೇಯ ಅವಧಿಗೆ ಈಚೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಸವರಾಜ ವಿಠಲ ಸವದತ್ತಿ, ಉಪಾಧ್ಯಕ್ಷೆಯಾಗಿ ಹೇಮಾ ಯಮನಪ್ಪ ಹಾವಾಡಿ ಆಯ್ಕೆಗೊಂಡಿದ್ದಾರೆ. ಒಟ್ಟು 16 ಸದಸ್ಯರ ಬಲ ಹೊಂದಿದ ಗೋಸಬಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳಾದ ಬಸವರಾಜ ಸವದತ್ತಿ ಅವರು 9ಮತ ಪಡೆದು ಗೆಲವು ಸಾಧಿಸಿದರು. …
Read More »ಪಾಲ್ನಾ ಯೋಜನೆಯ ಉದ್ದೇಶವು ಮಕ್ಕಳ ಪೌಷ್ಟಿಕಾಂಶ, ಆರೋಗ್ಯ ಮತ್ತು ಅರಿವಿನ ಬೆಳವಣಿಗೆಗೆ ಸುರಕ್ಷಿತ ವಾತಾವರಣ
ಮೂಡಲಗಿ: ಪಾಲ್ನಾ ಘಟಕವನ್ನು ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಸೇರಿಸಲಾಗಿದ್ದು, ಕೆಲಸ ಮಾಡುವ ಮಹಿಳೆಯರ ಮಕ್ಕಳಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಡೇ-ಕೇರ್ ಸೌಲಭ್ಯಗಳನ್ನು ಒದಗಿಸಲು ಮಹಿಳೆಯರನ್ನು ಕೆಲಸದಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲು ದೇಶಾದ್ಯಂತ 2688 ಶಿಶುವಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 57128 ಫಲಾನುಭವಿಗಳು ಇದರ ಪ್ರಯೋಜನೆ ಪಡೆದಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಸ್ಮøತಿ ಇರಾನಿ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ …
Read More »ಬೆಟಗೇರಿ ಗ್ರಾಪಂಗೆ ಅಧ್ಯಕ್ಷೆಯಾಗಿ ತೇಜಸ್ವಿನಿ ನೀಲಣ್ಣವರ, ಉಪಾಧ್ಯಕ್ಷೆಯಾಗಿ ಸಾಂವಕ್ಕಾ ಬಾಣಸಿ ಆಯ್ಕೆ
ಬೆಟಗೇರಿ ಗ್ರಾಪಂಗೆ ಅಧ್ಯಕ್ಷೆಯಾಗಿ ತೇಜಸ್ವಿನಿ ನೀಲಣ್ಣವರ, ಉಪಾಧ್ಯಕ್ಷೆಯಾಗಿ ಸಾಂವಕ್ಕಾ ಬಾಣಸಿ ಆಯ್ಕೆ ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಎರಡನೇಯ ಅವಧಿಗೆ ಈಚೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ತೇಜಸ್ವಿನಿ ರಾಮಪ್ಪ ನೀಲಣ್ಣವರ, ಉಪಾಧ್ಯಕ್ಷೆಯಾಗಿ ಸಾಂವಕ್ಕಾ ಸಿದ್ದಪ್ಪ ಬಾಣಸಿ ಆಯ್ಕೆಗೊಂಡಿದ್ದಾರೆ. ಒಟ್ಟು 13 ಸದಸ್ಯರ ಬಲ ಹೊಂದಿದ ಬೆಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳಾದ ತೇಜಸ್ವಿನಿ ನೀಲಣ್ಣವರ ಪ್ರತಿಸ್ಪರ್ದಿ ಬಸವರಾಜ ದಂಡಿನ ಚುನಾವಣೆಗೆ ಸ್ಪರ್ದಿಸಿ, ಸಮನಾಗಿ …
Read More »