Breaking News
Home / Recent Posts / ಭಾವೈಕ್ಯೆತೆಯಿಂದ ಕೂಡಿದ ನಾಡು ಶಾಂತವಾಗಿರುತ್ತದೆ: ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾವೈಕ್ಯೆತೆಯಿಂದ ಕೂಡಿದ ನಾಡು ಶಾಂತವಾಗಿರುತ್ತದೆ: ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ

Spread the love

ಭಾವೈಕ್ಯೆತೆಯಿಂದ ಕೂಡಿದ ನಾಡು ಶಾಂತವಾಗಿರುತ್ತದೆ: ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ

ಬೆಟಗೇರಿ: ಪುರಾಣ ಪ್ರವಚನಗಳನ್ನು ಶ್ರೀಗಳಿಂದ ಪ್ರತಿಯೊಬ್ಬರೂ ಶ್ರವಣ ಮಾಡಿ ಭಗವಂತ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು. ಭಾವೈಕ್ಯೆತೆಯಿಂದ ಕೂಡಿದ ನಾಡು ಶಾಂತವಾಗಿರುತ್ತದೆ ಮತ್ತು ಸುಭಿಕ್ಷವಾಗಿರುತ್ತದೆ ಎಂದು ಅನಂತಪುರದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಮೌನಮಲ್ಲಿಕಾರ್ಜುನ ಮಠದಲ್ಲಿ ಶ್ರಾವಣ ಅಧಿಕಮಾಸದ ಪ್ರಯುಕ್ತ ಒಂದು ತಿಂಗಳ ತನಕ ನಡೆದ ನಾಲ್ವವಾಡ ಶ್ರೀ ವೀರೇಶ್ವರ ಶರಣರ ಮಹಾಪುರಾಣ ಪ್ರವಚನ ಕಾಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆ.4 ರಂದು ಮಾತನಾಡಿದ ಅವರು, ಸ್ಥಳೀಯ ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ಭಾವೈಕ್ಯತೆಯ ಶ್ರೀಗಳಾಗಿದ್ದಾರೆ. ಅವರು ಎಲ್ಲರನ್ನು ಸಮನಾಗಿ ಕಾಣುವ ದೃಷ್ಠಿಕೋನ ಹೊಂದಿದ್ದಾರೆ ಎಂದರು.

ಜಡೆ ಸಂಸ್ಥಾನಮಠದ ಡಾ.ಮಹಾಂತ ಮಹಾಸ್ವಾಮೀಜಿ ಅಧ್ಯಕ್ಷತೆ, ಮಮದಾಪೂರದ ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ಸಮ್ಮುಖ, ಗುತ್ತಲ ಕಲ್ಮಠದ ಪ್ರಭುಮಹಾಸ್ವಾಮಿಜಿ, ಹಾರನಹಳ್ಳಿ ಚೌಕಿಮಠದ ನೀಲಕಂಠ ಮಹಾಸ್ವಾಮೀಜಿ, ಶಲವಡಿ ಗುರುಶಾಂತೇಶ್ವರ ಮಹಾಸ್ವಾಮೀಜಿ, ರಾಮದುರ್ಗದ ಗುರುಶಾಂತೇಶ್ವರಮಠದ ಶಾಂತವೀರ ಮಹಾಸ್ವಾಮೀಜಿ, ಜಮಖಂಡಿ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಪ್ರವಚನ ನೀಡಿದರು.

ಶಲವಡಿಯ ವೀರಯ್ಯಶಾಸ್ತ್ರಿ ಅವರು ನಾಲ್ವವಾಡ ಶ್ರೀ ವೀರೇಶ್ವರ ಶರಣರ ಮಹಾಪುರಾಣ ಪ್ರವಚನ ನಡೆಸಿಕೊಟ್ಟರು. ಶಲವಡಿಯ ಮುತ್ತಣ್ಣ ಹೆಬಸೂರು ಸಂಗೀತ, ಅಕ್ಬರ್ಸಾಹೇಬ ನದಾಫ್‌ಅವರು ತಬಲಾ ಸಾಥ್‌ನೀಡಿದರು. ಶಿಂದಿಕುರಬೇಟದ ಮಯಬೂಬಸಾಬ ನದಾಫ್‌ದಾಸೋಹ ನೆರವೇರಿಸಿದರು. ಸಕಲ ಪೂಜ್ಯರು, ಸಂತ ಶರಣರು, ಗಣ್ಯರನ್ನು ಶಾಲು ಹೊದಿಸಿ  ಶ್ರೀಮಠದ ವತಿಯಿಂದ ಸನ್ಮಾನಿಸಿದರು.

ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ,ಗುರು,ಚರಮೂತಿಗಳು, ಸಂತ,ಶರಣರು, ಆಧ್ಯಾತ್ಮ ಪ್ರವೀಣರು. ಗಣ್ಯರು,ಸೇರಿದಂತೆ ಶ್ರೀ ವೀರೇಶ್ವರ ಪುರಾಣ ಪ್ರವಚನ ಕಾಯಕ್ರಮ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಶ್ರೀಮಠದ ಭಕ್ತರು ಇದ್ದರು. ಪುರಾಣ ಪ್ರವಚನ ಆಯೋಜಕ ಸಮಿತಿ ಸಂಚಾಲಕ ಮಂಜುನಾಥ ಶರಣರು ಸ್ವಾಗತಿಸಿ, ಕಾಯಕ್ರಮ ನಿರೂಪಿಸಿದರು..

 

 

 


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ