ಮೂಡಲಗಿಯಲ್ಲಿ ನನ್ನ ಗಿಡ, ನನ್ನ ಹೆಮ್ಮೆಗೆ ಸಸಿ ನೆಟ್ಟು ಚಾಲನೆ ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಮಠದ ರಸ್ತೆಯ ಮುರಗೋಡ ಪ್ಲಾಟದಲ್ಲಿ ನನ್ನ ಗಿಡ, ನನ್ನ ಹೆಮ್ಮೆ ಸಸಿ ನೆಡುವ ಸಪ್ತಾಹಕ್ಕೆ ಪಟ್ಟಣದ ಪರಿಸಪ್ರೇಮಿ ಈರಪ್ಪ ಢವಳೇಶ್ವರ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಮೂಲಕ ಚಾಲನೆ ನೀಡಲಾಯಿತು. ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಮಾತನಾಡಿ, ರಾಜ್ಯಾದ್ಯಾಂತ ಸರಕಾರ ಜು.1 ರಿಂದ 7ರವರಿಗೆ ಹಮ್ಮಿಕೊಂಡಿರುವ ನನ್ನ …
Read More »‘ಬದುಕಿನ ಜೀವನ ಮೌಲ್ಯಗಳು ಜಾನಪದಲ್ಲಿವೆ’- ಮಾಲತಿಶ್ರೀ ಮೈಸೂರ
ಮೂಡಲಗಿಯ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ತು ಆಚರಿಸಿದ ಜಾನಪದ ಪರಿಷತ್ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ರಂಗಭೂಮಿ ಹಿರಿಯ ಕಲಾವಿದೆ ಮಾಲತಿಶ್ರೀ ಮೈಸೂರ ಉದ್ಘಾಟಿಸಿದರು ‘ಬದುಕಿನ ಜೀವನ ಮೌಲ್ಯಗಳು ಜಾನಪದಲ್ಲಿವೆ’ ಮೂಡಲಗಿ: ‘ಬದುಕಿನ ನಿಜವಾದ ಜೀವನ ಮೌಲ್ಯಗಳು ಜಾನಪದ ಸಾಹಿತ್ಯ ಮತ್ತು ಜಾನಪದ ಕಲೆಗಳಲ್ಲಿವೆ’ ಎಂದು ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ ಮಾಲತಿಶ್ರೀ ಮೈಸೂರ ಹೇಳಿದರು. ಇಲ್ಲಿಯ ಚೈತನ್ಯ ಆಶ್ರಮ ವಸತಿ ಶಾಲೆಯ ಆತಿಥ್ಯದಲ್ಲಿ ಗೋಕಾಕ …
Read More »ಸರ್ಕಾರವು ತಾಲ್ಲೂಕಿlಗೊಂದ ರಂಗಮಂದಿರ ನಿರ್ಮಿಸಿ ನಾಟಕಗಳನ್ನು ಬೆಳೆಸಬೇಕು
ಸರ್ಕಾರವು ತಾಲ್ಲೂಕಿಗೊಂದ ರಂಗಮಂದಿರ ನಿರ್ಮಿಸಿ ನಾಟಕಗಳನ್ನು ಬೆಳೆಸಬೇಕು ಮೂಡಲಗಿ: ರಂಗಭೂಮಿಯನ್ನು ಜನಸಾಮಾನ್ಯರ ಹತ್ತಿರ ಒಯ್ಯಲು ಸರ್ಕಾರವು ತಾಲ್ಲೂಕಿಗೊಂದು ರಂಗಮಂದಿರಗಳನ್ನು ನಿರ್ಮಿಸಿ, ರಂಗ ಕಲೆಯನ್ನು ಬೆಳೆಸಬೇಕು’ ಎಂದು ರಂಗಕಲಾವಿದ, ಝೀ ಟಿವಿಯ ಕಾಮಿಡಿ ಕಿಲಾಡಿ ಸ್ಪರ್ಧೆಯ ವಿಜೇತ ಹರೀಶ ಹಿರಿಯೂರ ಹೇಳಿದರು. ಇಲ್ಲಿಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ಘಟಕದ ಪದಾಧಿಕಾರಿಗಳು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರಂಗಭೂಮಿಗೆ ಪ್ರೋತ್ಸಾಹ ದೊರೆಯಬೇಕಾಗಿದೆ ಎಂದರು. …
Read More »ಮ್ಯಾಜಿಕ್ ಬಾಕ್ಸ ವಿದ್ಯಾರ್ಥಿಗಳ ಹಾಜರಾತಿಗೆ ಪೂರಕ-ಗಿರೆಣ್ಣವರ
ಮ್ಯಾಜಿಕ್ ಬಾಕ್ಸ ವಿದ್ಯಾರ್ಥಿಗಳ ಹಾಜರಾತಿಗೆ ಪೂರಕ-ಗಿರೆಣ್ಣವರ ಮೂಡಲಗಿ: ಶಾಲೆಯಲ್ಲಿ ಕೈಗೊಳ್ಳುವ ವಿಶೇಷ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಕಾರಣವಾಗುತ್ತವೆಯಲ್ಲದೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ತುಕ್ಕಾನಟ್ಟಿ ಸರ್ಕಾರಿ ಮಾದರಿ ಪ್ರಾಥÀಮಿಕ ಶಾಲೆಯ ಪ್ರಧಾನ ಗುರುಗಳಾದ ಎ.ವ್ಹಿ ಗಿರೆÀಣ್ಣವರ ಹೇಳಿದರು. ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮ್ಯಾಜಿಕ್ ಬಾಕ್ಸ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಾಲೆಯಲ್ಲಿ ಆರೇಳು ವರ್ಷಗಳ ಹಿಂದೆ ಜಾರಿಗೆ ತಂದಿರುವ ಮ್ಯಾಜಿಕ್ …
Read More »ಸತತ ಪ್ರಯತ್ನ, ಸಮಯ ಪ್ರಜ್ಞೆ, ಏಕಾಗ್ರತೆಯನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ- ಟಿ.ಎಸ್.ವಂಟಗೋಡಿ
ಮೂಡಲಗಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಸತತ ಪ್ರಯತ್ನ, ಸಮಯ ಪ್ರಜ್ಞೆ, ಏಕಾಗ್ರತೆಯನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ, ಪ್ರತಿಯೊಬ್ಬ ವಿದ್ಯಾರ್ಥಿಗೆ ಉತ್ತಮ ಗುರಿಯಿರಬೇಕು. ಗುರಿಯಿಲ್ಲದವನ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೆ ಎಂದು ಮೂಡಲಗಿ ಆರ್.ಡಿ.ಎಸ್ ಕಾಲೇಜಿನ ಉಪನ್ಯಾಸಕ ಹಾಗೂ ಸಾಹಿತಿ ಟಿ.ಎಸ್.ವಂಟಗೋಡಿ ಅಭಿಮತ ವ್ಯಕ್ತಪಡಿಸಿದರು. ಅವರು ತಾಲೂಕಿನ ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಕಲಾ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ …
Read More »ಜು.2ರಂದು ಮೂಡಲಗಿ ಲಯನ್ಸ್ ಕ್ಲಬ್ ಪದಗ್ರಹಣ, ಮೂಡಲಗಿ ಲಯನ್ಸ್ ಅಧ್ಯಕ್ಷರಾಗಿ ಲೋಕನ್ನವರ ಆಯ್ಕೆ
ಶ್ರೀಶೈಲ್ ಲೋಕನ್ನವರ ಸುಪ್ರೀತ ಸೋನವಾಲಕರ ಕೃಷ್ಣಾ ಕೆಂಪಸತ್ತಿ ಜು.2ರಂದು ಮೂಡಲಗಿ ಲಯನ್ಸ್ ಕ್ಲಬ್ ಪದಗ್ರಹಣ ಮೂಡಲಗಿ ಲಯನ್ಸ್ ಅಧ್ಯಕ್ಷರಾಗಿ ಲೋಕನ್ನವರ ಆಯ್ಕೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2023-24ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಶೈಲ್ ಪಿ. ಲೋಕನ್ನವರ, ಕಾರ್ಯದರ್ಶಿಯಾಗಿ ಸುಪ್ರೀತ ಎಸ್. ಸೋನವಾಲಕರ ಹಾಗೂ ಖಜಾಂಚಿಯಾಗಿ ಕೃಷ್ಣಾ ಎಲ್. ಕೆಂಪಸತ್ತಿ ಅವರು ಆಯ್ಕೆಯಾಗಿರುವರು. ಪದಗ್ರಹಣ: 2023-24ನೇ ಸಾಲಿನ ಲಯನ್ ಕ್ಲಬ್ ಮೂಡಲಗಿ ಪರಿವಾರದ ಪದಾಧಿಕಾರಿಗಳ ಪದಗ್ರಹಣವು ಜು.2ರಂದು ಸಂಜೆ …
Read More »ಯುವಕರು ಕೃಷಿಯಲ್ಲಿ ಸಕ್ರಿಯವಾಗಿ ತೋಡಗಿಸಕೊಳ್ಳಬೇಕು- ಮಹಾಂತೇಶ ಹೂಗಾರ
ಕುಲಗೋಡ: ಸಮಗ್ರ ಕೃಷಿ ಅಳವಡಿಕೊಂಡರೆ ರೈತರ ಆದಾಯ ದ್ವಿಗುಣ ಮಾಡಿಕೊಳ್ಳಬಹುದು. ಯುವಕರು ಕೃಷಿಯಲ್ಲಿ ಸಕ್ರಿಯವಾಗಿ ತೋಡಗಿಸಕೊಳ್ಳಬೇಕು ಮಹಾಂತೇಶ ಹೂಗಾರ ಕೃಷಿ ಪ್ರಾಧ್ಯಾಪಕರು ಅರಭಾವಿ ಹೇಳಿದರು ಇವರು ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ನಾಡಗೌಡರ ತೋಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ನೇತೃತ್ವದಲ್ಲಿ ಇಂದು ನಡೆದ ಕೃಷಿ ವಿಸ್ತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜನಸಂಖ್ಯೆ ಹೆಚ್ಚಾದಂತೆ ಆಹಾರ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಕೃಷಿಯಲ್ಲಿ ನಿರಂತರ ಸಂಶೋಧನೆಗಳು ನಡೆಯುತ್ತವೆ. ಅದೇ ರೀತಿ ರೈತರು ಕೂಡಾ …
Read More »ಪಟ್ಟಣದಲ್ಲಿ ಬಕ್ರೀದ್ ಹಬ್ಬ ಸಂಭ್ರಮದಿಂದ ಆಚರಣೆ
ಮೂಡಲಗಿ : ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ ಹಬ್ಬ ಆಚರಣೆಯನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಗುರುವಾರದಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ಹಬ್ಬ ಆಚರಿಸಿ ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮೌಲಾನಾ ಕೌಸರ ರಝಾ ಅವರು ಪ್ರವಚನ ನೀಡಿ ಮಾತನಾಡಿ, ಬಕ್ರೀದ ಹಬ್ಬವು ತ್ಯಾಗದ ಸಂಕೇತವಾಗಿದ್ದು ಮನು ಕುಲಕ್ಕೆ ಒಳ್ಳೆಯದಾಗಲಿ, ಎಲ್ಲರೂ ಪರಸ್ಪರ ಪ್ರೀತಿ ವಿಸ್ವಾಸದಿಂದ ಬದುಕಿ …
Read More »ಒಗ್ಗಟ್ಟಿನಿಂದ ದುಡಿದು ಜಾತ್ರೆಯನ್ನು ಯಶಸ್ವಿ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : 17 ವರ್ಷಗಳ ನಂತರ ಸಡಗರ ಸಂಭ್ರಮದಿಂದ ನಡೆದಿರುವ ಹಳ್ಳೂರ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ಗ್ರಾಮದ ಮುಖಂಡರು ಮತ್ತು ಜಾತ್ರಾ ಕಮೀಟಿ ಪದಾಧಿಕಾರಿಗಳನ್ನು ಅಭಿನಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಸಕಲರಿಗೂ ದೇವಿಯು ಒಳ್ಳೆಯದನ್ನು ಮಾಡಲಿ. ನಾಡು ಸಂಪದ್ಭರಿತವಾಗಿ ಹಚ್ಚ ಹಸಿರಿನಿಂದ ಕಂಗೊಳಿಸಲಿ ಎಂದು ಅವರು ಪ್ರಾರ್ಥಿಸಿದರು. ತಾಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅವರು, ಎಲ್ಲರೂ …
Read More »ಇಟನಾಳದಲ್ಲಿ ಶಿವಭಜನೆ, ಸಂಗೀತ ಸಂಭ್ರಮ
ಇಟನಾಳದಲ್ಲಿ ಶಿವಭಜನೆ, ಸಂಗೀತ ಸಂಭ್ರಮ ಮೂಡಲಗಿ: ಸಮೀಪದ ಇಟನಾಳ ಗ್ರಾಮದ ಶಿವಶರಣ ಶಾಬುಜಿ ಇವರ 36ನೇ ಪುಣ್ಯಸ್ಮರಣೆ ಹಾಗೂ ಮಾತೋಶ್ರೀ ಅವಬಾಯಿ ಶಾಬುಜಿ ಐಹೊಳೆ ಅವರ 19ನೇ ಪುಣ್ಯಸ್ಮರಣೆ ಅಂಗವಾಗಿ ಜೂ. 29ರಂದು ಬೆಳಿಗ್ಗೆ 9ಕ್ಕೆ ಇಟನಾಳದಲ್ಲಿ ಶಿವಭಜನೆ ಹಾಗೂ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿರುವರು. ಸಮಾರಂಭದ ಸಾನ್ನಿಧ್ಯವನ್ನು ಇಟನಾಳದ ಗ್ರಾಮದ ಮಾರ್ತಾಂಡ ಮಲ್ಲಯ್ಯ ಆರಾಧಾಕರಾದ ಸಿದ್ದೇಶ್ವರ ಶರಣರು ವಹಿಸುವರು. ಅಧ್ಯಕ್ಷತೆಯನ್ನು ಎಸ್.ಕೆ. ಕೊಪ್ಪದ ಹಿರಿಯ ಕಲಾವಿದ ರಾಮನಗೌಡ ವಜ್ರಮಟ್ಟಿ …
Read More »